ಭಾರತೀಯ ರೈಲ್ವೆಯ ಆವಿಷ್ಕಾರ ನೀತಿ “ರೈಲ್ವೆಗಾಗಿ ಸ್ಟಾರ್ಟ್‌ಅಪ್‌”

171
Share

 

ನೈಋತ್ಯ ರೈಲ್ವೆ
ಮೈಸೂರು ವಿಭಾಗ

 

ಭಾರತೀಯ ರೈಲ್ವೆಯ ಆವಿಷ್ಕಾರ ನೀತಿ “ರೈಲ್ವೆಗಾಗಿ ಸ್ಟಾರ್ಟ್‌ಅಪ್‌”

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಇಂದು ಜುಲೈ 19, 2022 ರಂದು ಮೈಸೂರಿನ ಯಾದವಗಿರಿಯ ಚಾಮುಂಡಿ ಕ್ಲಬ್‌ನಲ್ಲಿ, ಭಾರತೀಯ ರೈಲ್ವೆಯಲ್ಲಿ ಕಾರ್ಯಾಚರಣೆಯ ದಕ್ಷತೆ ಮತ್ತು ಸುರಕ್ಷತೆಯನ್ನು ಸುಧಾರಿಸುವ ಪರಿಹಾರಗಳನ್ನು ಹುಡುಕುವ ಸ್ಟಾರ್ಟ್-ಅಪ್‌ಗಳನ್ನು ಉತ್ತೇಜಿಸುವ ಉದ್ದೇಶ್ಯದಿಂದ ‘ಭಾರತೀಯ ರೈಲ್ವೆ ಆವಿಷ್ಕಾರ ನೀತಿ’ (Indian Railway Innovation Policy – IRIP) – “ರೈಲ್ವೆಗಾಗಿ ಸ್ಟಾರ್ಟ್ ಅಪ್ಸ್” ಕುರಿತು ಕಾರ್ಯಾಗಾರವನ್ನು ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ರಾಹುಲ್ ಅಗರ್ವಾಲ್ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಿತ್ತು. ಕಾರ್ಯಾಗಾರದಲ್ಲಿ ಕರ್ನಾಟಕದಾದ್ಯಂತದಿಂದ ಸುಮಾರು 43 ಸ್ಟಾರ್ಟ್‌ಅಪ್‌ಗಳು, ಎಂಎಸ್‌ಎಂಇಗಳು ಮತ್ತು ಇತರ ಘಟಕಗಳು ಭಾಗವಹಿಸಿದ್ದವು.

ಗೌರವಾನ್ವಿತ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ರವರಿಂದ ಜೂನ್ 13, 2022 ರಂದು “ರೈಲ್ವೆಗಾಗಿ ಸ್ಟಾರ್ಟ್‌ಅಪ್‌ಗಳು” ಎಂಬ ಭಾರತೀಯ ರೈಲ್ವೆಯ ಆವಿಷ್ಕಾರ ನೀತಿ ಪ್ರಾರಂಭಿಸಲಾದ ನಂತರ, ಸ್ಟಾರ್ಟ್-ಅಪ್‌ಗಳು ಮತ್ತು ಇತರ ಘಟಕಗಳ ಭಾಗವಹಿಸುವಿಕೆಯ ಮೂಲಕ ನಾವೀನ್ಯತೆಯ ಕ್ಷೇತ್ರದಲ್ಲಿ ರಾಷ್ಟ್ರೀಯ ಸಾರಿಗೆ ಸಂಸ್ಥೆಯಾದ ಭಾರತೀಯ ರೈಲ್ವೆಯು ಕೈಗೊಂಡ ಉಪಕ್ರಮಕ್ಕೆ ಅನುಸಾರವಾಗಿ ಈ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಾಗಾರದಲ್ಲಿ ಸಮಾನ ಹಂಚಿಕೆ ಆಧಾರದ ಮೇಲೆ ನವೋದ್ಯಮಿಗಳಿಗೆ ರೂ.1.5 ಕೋಟಿ ವರೆಗೆ ಅನುದಾನ ಪಾವತಿಯನ್ನು ಹಂತ ಹಂತವಾಗಿ ಒದಗಿಸುವುದು, ಶೇಕಡ 100 ರಷ್ಟು ಪಾರದರ್ಶಕತೆಯೊಂದಿಗೆ ಸಂಪೂರ್ಣ ಆನ್‌ಲೈನ್ ಪ್ರಕ್ರಿಯೆ, ಮೂಲಮಾದರಿಗಳ ಪ್ರಯೋಗಗಳನ್ನು ಕೈಗೊಳ್ಳಲು ರೈಲ್ವೆ ವತಿಯಿಂದ ಸಹಾಯ, ಮೂಲಮಾದರಿಗಳ ಯಶಸ್ವಿ ಕಾರ್ಯಕ್ಷಮತೆಯ ಮೇಲೆ ಧನಸಹಾಯ ಹೆಚ್ಚಳ, ಅಭಿವೃದ್ಧಿ ಹೊಂದಿದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನವೋದ್ಯಮಿಗಳೊಂದಿಗೆ ಉಳಿಸಿಕೊಳ್ಳುವುದು, ಮುಂತಾದವುಗಳು ಸೇರಿದಂತೆ ಇತರೆ IRIP ಯ ಪ್ರಮುಖ ಲಕ್ಷಣಗಳ ಬಗ್ಗೆ ಶ್ರೀ ರಾಹುಲ್ ಅಗರ್ವಾಲ್ ರವರು ಎತ್ತಿ ತೋರಿಸಿದರು.

ಕಾರ್ಯಾಗಾರದಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಅಗರ್ವಾಲ್ ರವರು ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್, ಬಿಗ್ ಡೇಟಾ ಅನಾಲಿಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್, ಡ್ರೋನ್ ಬಹುಮುಖಿ ತಂತ್ರಜ್ಞಾನ, ರೊಬೊಟಿಕ್ಸ್, ನ್ಯಾನೋ ತಂತ್ರಜ್ಞಾನ ಮತ್ತು ಮುಂದಿನ ಪೀಳಿಗೆಯ ತಂತ್ರಜ್ಞಾನದ ಸಾಧನಗಳೊಂದಿಗೆ ಪ್ರಸ್ತುತ 4 ನೇ ಕೈಗಾರಿಕಾ ಕ್ರಾಂತಿಯನ್ನು ಜಗತ್ತು ನೋಡುತ್ತಿದ್ದೂ. ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳು ಹೆಚ್ಚುತ್ತಿವೆ ಮತ್ತು ಅನೇಕ ಯುವ ನವೀನ ಉದ್ಯಮಿಗಳು ನಮ್ಮ ದೇಶದಲ್ಲಿಯೇ ಹೂಡಿಕೆ ಮಾಡಲು ಮತ್ತು ಆವಿಷ್ಕಾರ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ. ಭಾರತೀಯ ರೈಲ್ವೆಯಲ್ಲಿನ ತಂತ್ರಜ್ಞಾನ ಅಭಿವೃದ್ದಿಗಾಗಿ ಈ ವೇದಿಕೆಗೆ ‘ರೈಲ್ವೆಗಾಗಿ ಸ್ಟಾರ್ಟ್‌ಅಪ್‌’ನಂತಹ ಹಲವಾರು ಆವಿಷ್ಕಾರಗಳಿಗೆ ಅವಕಾಶ ಒದಗಿಸಿರುವ ಭಾರತ ಸರ್ಕಾರವು, ತನ್ನ ವಿವಿಧ ಉಪಕ್ರಮಗಳ ಮೂಲಕ ದೀರ್ಘಾವಧಿಯ ಅಗತ್ಯಕ್ಕೆ ದೃಢವಾದ ಆಕಾರವನ್ನು ನೀಡಲು ಸ್ಟಾರ್ಟ್‌ಅಪ್‌ಗಳಿಗೆ ಅನ್ವೇಷಿಸಲು ಮತ್ತು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುವ ಚೌಕಟ್ಟು ಮತ್ತು ವಾತಾವರಣವನ್ನು ಒದಗಿಸಿದೆ ಎಂದು ಹೇಳಿದರು.

ಭಾರತೀಯ ರೈಲ್ವೆಯ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ನಿರ್ವಹಣೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಕಡಿಮೆ ವೆಚ್ಚದ, ಪರಿಣಾಮಕಾರಿಯಾದ, ಕಾರ್ಯಗತಗೊಳಿಸಬಹುದಾದ, ಅಗತ್ಯಕ್ಕೆ ತಕ್ಕಂತಹ, ಕ್ರಿಯಾತ್ಮಕ ಮೂಲಮಾದರಿ ಮತ್ತು ನವೀನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಈ ಉಪಕ್ರಮದ ಉದ್ದೇಶವನ್ನು ಶ್ರೀ ಅಗರ್ವಾಲ್ ರವರು ಒತ್ತಿ ಹೇಳಿದರು.

ಭಾರತೀಯ ರೈಲ್ವೆಯ ಆವಿಷ್ಕಾರ ನೀತಿಯು ಸಾಂಸ್ಥಿಕ ಗುರಿಯನ್ನು ಸಾಧಿಸಲು ಹೂಡಿಕೆ ಮತ್ತು ನಾವೀನ್ಯತೆಯ ಹೆಚ್ಚು ಅಗತ್ಯವಿರುವ ಸಮನ್ವಯತೆಯನ್ನು ತರಲು ಸಂಪೂರ್ಣವಾಗಿ ಸಮಯ ಬದ್ಧವಾಗಿದ್ದೂ, ಅರ್ಹತೆ ಆಧಾರಿತ ಮತ್ತು ಪಾರದರ್ಶಕ ಚೌಕಟ್ಟಾಗಿದೆ ಎಂದು ಹೇಳಿದರು. ಮತ್ತು ಈ ಉಪಕ್ರಮದಲ್ಲಿ ಬಾಗವಹಿಸಿ ಭಾರತೀಯ ರೈಲ್ವೆ ಯ ಜೊತೆಗೆ ತಮ್ಮನ್ನು ಉತ್ಕೃಷ್ಟಗೊಳಿಸಿಕೊಳ್ಳಲು ಕಾರ್ಯಾಗಾರದಲ್ಲಿ ಹಾಜರಿದ್ದ ಸ್ಟಾರ್ಟ್‌ಅಪ್‌ಗಳು, ಎಂಎಸ್‌ಎಂಇಗಳು, ನವೋದ್ಯಮಿಗಳು ಮತ್ತು ಇತರ ಸಂಸ್ಥೆಗಳನ್ನು ಒತ್ತಾಯಿಸಿದರು. ಹಾಗೆಯೇ ಈ ಉಪಕ್ರಮವನ್ನು ಒಂದು ದೊಡ್ಡ ಯಶಸ್ಸನ್ನಾಗಿ ಮಾಡಲು ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡುವ ಭರವಸೆ ನೀಡಿದರು.

ಈ ಸ್ಟಾರ್ಟ್‌ಅಪ್‌ಗಳು, ಎಂಎಸ್‌ಎಂಇಗಳು ಮತ್ತು ಇತರ ಘಟಕಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ವೆಬ್ ವಿಳಾಸ www.innovation.indianrailways.gov.in ನಲ್ಲಿ ಲಭ್ಯವಿರುವ ಭಾರತೀಯ ರೈಲ್ವೆ ಇನ್ನೋವೇಶನ್ ಪೋರ್ಟಲ್‌ಗೆ ಲಾಗಿನ್ ಆಗಬಹುದು.

ದಿನಪೂರ್ತಿ ನಡೆದ ಕಾರ್ಯಾಗಾರದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರುಗಳಾದ ಶ್ರೀ ಎ.ದೇವಸಹಾಯಂ ಮತ್ತು ಶ್ರೀಮತಿ.ಇ.ವಿಜಯ, ಹಿರಿಯ ವಿಭಾಗೀಯ ಹಣಕಾಸು ವ್ಯವಸ್ಥಾಪಕರಾದ ಶ್ರೀ ಲೆವಿನ್ ಪ್ರಭು ಮತ್ತು ಇತರ ಶಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಭಾರತೀಯ ರೈಲ್ವೆ ಆವಿಷ್ಕಾರ ನೀತಿಯ ಪ್ರಮುಖ ವೈಶಿಷ್ಟ್ಯಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:-
• ನವೋದ್ಯಮಿಗಳಿಗೆ ಸಮಾನ ಹಂಚಿಕೆ ಆಧಾರದ ಮೇಲೆ ಹಂತ-ಹಂತವಾಗಿ ಪಾವತಿಸುವ ಮಾದರಿಯಲ್ಲಿ 1.5 ಕೋಟಿ ರೂ.ವರೆಗೆ ಅನುದಾನ ಒದಗಿಸುವುದು
• ಸಮಸ್ಯೆಯ ಪಟ್ಟಿಯನ್ನು ಆನ್ ಲೈನ್ ನಲ್ಲಿ ತೋರಿಸುವುದರಿಂದ ಹಿಡಿದೂ ಮೂಲಮಾದರಿಯ ಅಭಿವೃದ್ಧಿಯವರೆಗಿನ ಸಂಪೂರ್ಣ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ವಸ್ತುನಿಷ್ಠವಾಗಿಸಲು ನಿಗದಿತ ಸಮಯದ ಗುರಿಯೊಂದಿಗೆ ಕಾರ್ಯ.
• ರೈಲ್ವೆ ಯಲ್ಲಿ ಮೂಲಮಾದರಿಗಳ ಪ್ರಯೋಗಗಳನ್ನು ಮಾಡಲಾಗುವುದು. ಮೂಲಮಾದರಿಗಳ ಕಾರ್ಯಕ್ಷಮತೆಯ ಯಶಸ್ಸಿನ ಮೇಲೆ ನಿಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸಲು ಅಗತ್ಯ ಹಣವನ್ನು ಒದಗಿಸಲಾಗುತ್ತದೆ.
• ರೈಲ್ವೆ ಸಚಿವರು ಇಂದು ಉದ್ಘಾಟಿಸಿದ ಆನ್‌ಲೈನ್ ಪೋರ್ಟಲ್ ಮೂಲಕ ವ್ಯವಹರಿಸಿ ನವೋದ್ಯಮಿ/ಗಳ ಆಯ್ಕೆಯನ್ನು ಪಾರದರ್ಶಕ ಮತ್ತು ನ್ಯಾಯೋಚಿತ ವ್ಯವಸ್ಥೆಯಿಂದ ಮಾಡಲಾಗುತ್ತದೆ
• ಅಭಿವೃದ್ಧಿಯಾದ ಬೌದ್ಧಿಕ ಆಸ್ತಿ ಹಕ್ಕುಗಳು (IPR) ನವೋದ್ಯಮಿಗಳೊಂದಿಗೆಯೇ ಉಳಿಯುತ್ತದೆ
• ನವೋದ್ಯಮಿಗಳಿಗೆ ಖಚಿತವಾದ ಅಭಿವೃದ್ಧಿಗೆ ಕ್ರಮ
• ವಿಳಂಬವನ್ನು ತಪ್ಪಿಸಲು ವಿಭಾಗೀಯ ಮಟ್ಟದಲ್ಲಿಯೇ ಸಂಪೂರ್ಣ ಉತ್ಪನ್ನ ಅಭಿವೃದ್ಧಿ ಪ್ರಕ್ರಿಯೆಯ ವಿಕೇಂದ್ರೀಕರಣ

 

 


Share