ಮೈಸೂರು ಜಿಲ್ಲೆ: ಕೊರೋನಾಗೆ ಮೊದಲನೇ ಬಲಿ!!

3646
Share

ಮೈಸೂರು ,
ಮೈಸೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಓರ್ವ ವ್ಯಕ್ತಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೆ.ಆರ್.ನಗರದ 83 ವರ್ಷದ ವ್ಯಕ್ತಿಗೆ ಕೋವಿಡ್ -19 ಸೋಂಕು ಇತ್ತು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಮೈಸೂರಿನಲ್ಲಿ ಐಸಿಎಂಆರ್ ಪ್ರೋಟೋಕಾಲ್ಗಳ ಪ್ರಕಾರ ಅವರನ್ನು ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಎಂದು ಹೇಳಲಾಗಿದೆ
ಮೈಸೂರಿನಲ್ಲಿ ಕೋವಿಡ್ -19 ರ ಕಾರಣದಿಂದಾಗಿ ಇದು ಮೊದಲ ಸಾವು. ಈ ಮೊದಲು ಸೋಂಕಿನಿಂದ ಗುಣಮುಖರಾದ ವ್ಯಕ್ತಿಯೊಬ್ಬ ಮೇ ತಿಂಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ ಕೂಡಲೇ ಸಾವನ್ನಪ್ಪಿದ್ದಾನೆ.


Share