ಮೈಸೂರಿನಲ್ಲಿ ಸುಷುಮ್ನಾ ಕ್ರಿಯಾ ಯೋಗ ಅಧಿವೇಶನ

71
Share

 

ಮೈಸೂರು ಆಧ್ಯಾತ್ಮಿಕ ಗುರು ಪೂಜ್ಯ ಗುರುಮಾ ಆತ್ಮಾನಂದಮಯಿ ಅವರು ಮಾರ್ಚ್ ೮, ೨೦೨೪ರಂದು ಮೈಸೂರಿನಲ್ಲಿ ಸುಷುಮ್ನಾ ಕ್ರಿಯಾ ಯೋಗ ಅಧಿವೇಶನ ನಡೆಸಿಕೊಡಲಿದ್ದಾರೆ.
ಮೈಸೂರು: ಆಧ್ಯಾತ್ಮಿಕ ಮಾರ್ಗದರ್ಶಿ ಪೂಜ್ಯ ಗುರುಮಾ ಆತ್ಮಾನಂದಮಯಿ ಮೈಸೂರಿನ ಹಿನಕಲ್‌ನಲ್ಲಿರುವ ಸ್ಪೆಕ್ಟ್ರಾ ಕನ್‌ವೆನ್ಸನ್ ಹಾಲ್ ಮಾರ್ಚ್ ೮ರಂದು ಸುಷುಮ್ನಾ ಕ್ರಿಯಾ ಯೋಗ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಬಹುಮುಖ್ಯ ಕಾರ್ಯಕ್ರಮವನ್ನು ಶಿವರಾತ್ರಿ ಹಬ್ಬದ ಅಂಗವಾಗಿ ದಿವ್ಯ ಬಾಬಾಜಿ ಸುಷುಮ್ನಾ ಕ್ರಿಯಾ ಯೋಗ ಫೌಂಡೇಷನ್ ಆಯೋಜಿಸುತ್ತಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.
ಸುಷುಮ್ನಾ ಕ್ರಿಯಾ ಯೋಗ ಸಂತೋಷದಾಯಕ ಜೀವನಕ್ಕಾಗಿ ಮಾನವಕುಲಕ್ಕೆ ದೊರೆತಿರುವ ಒಂದು ಶ್ರೇಷ್ಠ ಯೋಗವಾಗಿದೆ. ಪರಮ ಗುರುಗಳಾದ ಶ್ರೀ ಭೋಗ ಸಿದ್ಧಾರ್ ಮತ್ತು ಮಹಾವತಾರ್ ಬಾಬಾಜಿ ಅವರ ಬಳಿ ೧೨ ವರ್ಷಗಳ ಕಠಿಣ ಸಾಧನೆಯಿಂದ ಪೂಜ್ಯ ಗುರುಮಾ ಆತ್ಮಾನಂದಮಯಿ ಅವರಿಗೆ ಈ ಯೋಗ ಸಿದ್ಧಿಯಾಗಿದೆ. ಗುರುಮಾ ಅವರು ಕಳೆದ ೧೯ ವರ್ಷಗಳಿಂದ ಸುಷುಮ್ನಾ ಕ್ರಿಯಾ ಯೋಗವನ್ನು ವಿಶ್ವಕ್ಕೆ ಪರಿಚಯಿಸಲು ಶ್ರಮಿಸುತ್ತಿದ್ದಾರೆ.
ಸುಷುಮ್ನಾ ಕ್ರಿಯಾ ಯೋಗ ನಾಲ್ಕು ಶಕ್ತಿಯುತ ಯೋಗಾಭ್ಯಾಸಗಳನ್ನು ಸಂಜೋಜಿಸುತ್ತಿದೆ. ಪರಮಪೂಜ್ಯ ಗುರುಮಾ ಆತ್ಮಾನಂದಮಯಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರನ್ನೂ ವೈಯಕ್ತಿಯವಾಗಿ ಸುಷುಮ್ನಾ ಕ್ರಿಯಾ ಯೋಗದ ಪರಿವರ್ತಕ ಅಭ್ಯಾಸದಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಾರೆ. ಹೀಗಾಗಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಸುಷುಮ್ನಾ ಕ್ರಿಯಾ ಯೋಗದ ಉಪಯೋಗಗಳು ಇಂತಿವೆ: ೧. ಉತ್ತಮ ಏಕಾಗ್ರತೆ ೨. ಸ್ಮರಣಶಕಿ ವೃದ್ಧಿ ೩. ಆತ್ಮವಿಶ್ವಾಸ ೪. ಸ್ವಯಂ ನಿಯಂತ್ರಣ, ಎಚ್ಚರಿಕೆ ೫. ನಿರಂತರ ಜಾಗೃತಿ ೬. ದೃಢ ಮನೋಬಲ ೭. ಶೌರ್ಯ ಮತ್ತು ಧೈರ್ಯ ೮. ಒತ್ತಡ ಮತ್ತು ಖಿನ್ನತೆಯನ್ನು ತೆಗೆದುಹಾಕುತ್ತದೆ ೯. ಕೋಪ, ಹತಾಶೆ, ಭಯದ ನಿಯಂತ್ರಣ ೧೦. ಗುರಿಗಳನ್ನು ಸುಲಭವಾಗಿ ಸಾಧಿಸಲು ಸಹಾಯ ಮಾಡುತ್ತದೆ ೧೧. ಮಾನಸಿಕ ಶಕ್ತಿ ಸುದ್ಧಾರಿಸುತ್ತದೆ ೧೨. ಒಳ್ಳೆಯ ಗುಣಗಳನ್ನು ವೃದ್ಧಿಸುತ್ತದೆ ೧೩. ನಿದ್ರಾಹೀನತೆಯನ್ನು ಹೋಗಲಾಡಿಸುತ್ತದೆ ೧೪. ಸಂಪೂರ್ಣ ಆರೋಗ್ಯ ಮತ್ತು ಕ್ಷೇಮ ನೀಡುತ್ತದೆ ೧೫. ಅನಿಯಮಿತ ಸಂತೋಷ ಮತ್ತು ಆನಂದ ಒದಗಿಸುತ್ತದೆ ೧೬. ಉನ್ನತ ಆಧ್ಯಾತ್ಮಿಕ ಸ್ಥಿತಿಯನ್ನು ಸಾಧಿಸಲು ನೆರವಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ: ೭೩೭೮೯ ೭೯೭೮೯/ ೯೯೮೦೬ ೨೨೧೧೯
info@divyababajikriyayoga.org
www.divyababajikriyayoga.org

Share