ಮೈಸೂರು ಒಟ್ಟು 28 ನಾಮಪತ್ರ ಸ್ವೀಕಾರ

196
Share

ಇಂದು 13 ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರ*

ಮೈಸೂರು,ಏ.04:- ಮೈಸೂರು-ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು (04-04-2024) 13 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಗಿರುತ್ತದೆ.

ಪಕ್ಷೇತರ ಅಭ್ಯರ್ಥಿಯಾಗಳಾಗಿ ಪಿ ಕೆ ದರ್ಶನ್ ಶೌರಿ, ರಾಜು, ಸಣ್ಣ ನಾಯಕ, ಅಂಬೇಡ್ಕರ್ ಸಿ ಜೆ, ರಾಜಣ್ಣ, ರಾಮಯ್ಯ ಡಿ, ಆರ್ ಮಹೇಶ್, ಡಿ.ಎನ್ ನವೀನ್ ಕುಮಾರ್, ಶಿವಕುಮಾರ್ ಅವರು ನಾಮಪತ್ರ ಸಲ್ಲಿಸಿರುತ್ತಾರೆ.

ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ)ಯ ಅಭ್ಯರ್ಥಿಯಾಗಿ ಹೆಚ್.ಎಂ ನಂಜುoಡಸ್ವಾಮಿ, ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಎನ್.ಅಂಬರೀಷ್, ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎ.ಜಿ.ರಾಮಚಂದ್ರರಾವ್ ಹಾಗೂ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ರೇವತಿ ರಾಜ್ ಅವರು ನಾಮಪತ್ರ ಸಲ್ಲಿಸಿರುತ್ತಾರೆ.

ಇಲ್ಲಿಯವರೆಗೆ 28 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

 


Share