ಮೈಸೂರು ಕೇಂದ್ರ ಕಾರಾಗೃಹದ ಮೇಲೆ ಅನಿರೀಕ್ಷಿತ ದಾಳಿ

405
Share

ಮೈಸೂರು ನಗರ ಪೊಲೀಸರಿಂದ ಮೈಸೂರು ಕೇಂದ್ರ ಕಾರಾಗೃಹದ ಮೇಲೆ ನಡೆಸಿದ ಅನಿರೀಕ್ಷಿತ ತಪಾಸಣೆ ಕಾರ್ಯಾಚರಣೆಯ ಭಾವಚಿತ್ರಗಳು
ಮೈಸೂರು ನಗರ ಪೊಲೀಸರಿಂದ ಮೈಸೂರು ಕೇಂದ್ರ ಕಾರಾಗೃಹದ ಮೇಲೆ ಅನಿರೀಕ್ಷಿತ ತಪಾಸಣಾ ಕಾರ್ಯಾಚರಣೆ ನಡೆಸಲಾಯಿತು
ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀ. ಬಿ. ರಮೇಶ್ ಐ.ಪಿ.ಎಸ್ ರವರು ಶ್ರೀ. ಮುತ್ತುರಾಜು ಎಂ. ಐ.ಪಿ.ಎಸ್. ಡಿ.ಸಿ.ಪಿ ಕಾನೂನು ಮತ್ತು ಸುವ್ಯವಸ್ಥೆ, ಮೈಸೂರು ನಗರ ಹಾಗೂ ಎಸ್. ಜಾಹ್ನವಿ. ಡಿ.ಸಿ.ಪಿ ಕೇಂದ್ರಸ್ಥಾನ. ಅಪರಾಧ ಮತ್ತು ಸಂಚಾರ. ಮೈಸೂರು ನಗರ ಹಾಗೂ ಇತರೇ ಪೊಲೀಸ್ ಅಧಿಕಾರಿಗಳೊಂದಿಗೆ   ಇಂದು ಮೈಸೂರು ಕೇಂದ್ರ ಕಾರಾಗೃಹದ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡಿ ತಪಾಸಣಾ ಕಾರ್ಯಾಚರಣೆಯನ್ನು ನಡೆಸಲಾಯಿತು
ಈ ತಪಾಸಣಾ ಕಾರ್ಯಾಚರಣೆಯ ಸಮಯದಲ್ಲಿ ಕಾರಾಗೃಹದ ಆವರಣದಲ್ಲಿ ಅನಧಿಕೃತವಾಗಿ ಇದ್ದಂತಹ ಒಂದು ಸಿಮ್ ಕಾರ್ಡ್, ನಗದು, ಪ್ಲೇಡ್ ಹಾಗೂ ಚಾಕುವಿನಂತ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಈ ದಾಳಿ ಕಾರ್ಯದಲ್ಲಿ ವಿಭಾಗದ ಎಸಿಪಿ ರವರುಗಳು. ವಿವಿಧ ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್ ರವರುಗಳು. ಇತರೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, ಶ್ವಾನ ದಳ ಮತ್ತು ಎ.ಎಸ್.ಸಿ ಟೀಮ್ ರವರು ಭಾಗವಹಿಸಿದ್ದರು
.

Share