ಮೈಸೂರು ಪತ್ರಿಕೆ ಅಧ್ಯಾತ್ಮಿಕ ಅ೦ಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 45

1065
Share

ಶ್ರೀ ವೇಂಕಟೇಶ್ವರ ಕಲ್ಯಾಣ – ಭಾಗ 45
ನಿನ್ನೆ ಸಪ್ತಗಿರಿಗೆ ಬೇರೆ ಬೇರೆ ಹೆಸರುಗಳು ಹೇಗೆ ಮತ್ತು ಏಕೆ ಬಂತು ಎಂದು ತಿಳಿದುಕೊಂಡೆವು.
ಇಂದು ಸಪ್ತಗಿರಿಯಲ್ಲಿರುವ ತೀರ್ಥಗಳ ಬಗ್ಗೆ ತಿಳಿದುಕೊಳ್ಳೋಣ.
ಸಪ್ತಗಿರಿಯಲ್ಲಿ 66 ಕೋಟಿ ತೀರ್ಥ ಗಳಿವೆ. ಅವುಗಳಲ್ಲಿ ಪ್ರಮುಖವಾಗಿ 7 ತೀರ್ಥಗಳು.
ಹಲವಾರು ಪುರಾಣಗಳು ಸ್ವಾಮಿ ಪುಷ್ಕರಿಣಿ ಬಗ್ಗೆ ಹೇಳಿದೆ. ಅದರಲ್ಲಿ ಕೆಲವೊಂದರ ಬಗ್ಗೆ ತಿಳಿಯೋಣ.

  1. ಸ್ವಾಮಿ ಪುಷ್ಕರಿಣಿ – ಮಾರ್ಕಂಡೇಯನ ತಪಸ್ಸಿಗೆ ಮೆಚ್ಚಿ ವರ ಕೇಳಲು ಹೇಳಿದಾಗ ಮಾರ್ಕಂಡೇಯನು ಒಂದು ತೀರ್ಥದಲ್ಲಿ ಸ್ನಾನ ಮಾಡಿ ಸಕಲ ತೀರ್ಥಗಳಲ್ಲಿ ಮಾಡಿದ ಪುಣ್ಯ ಬೇಕು ಎಂದಾಗ ಬ್ರಹ್ಮನು ಶೇಷಾಚಲವು ವೈಕುಂಠದಿಂದ ಬಂದಿರುವುದರಿಂದ ಅಲ್ಲಿರುವ ಸ್ವಾಮಿ ತೀರ್ಥದಲ್ಲಿ ಸ್ನಾನ ಮಾಡಲು ಸೂಚಿಸುತ್ತಾನೆ. ಅದರಂತೆ ಮಾರ್ಕಂಡೇಯನಲ್ಲದೆ ಹಲವಾರು ಸಾಧಕರು ಆ ಫಲವನ್ನು ಹೊಂದಿದ್ದಾರೆ.
    ಪರೀಕ್ಷಿತನನ್ನು ಕೊಂದ ಪಾಪ ಪರಿಹಾರಾರ್ಥ ತಕ್ಷಕನು ಸ್ವಾಮಿ ಪುಷ್ಕರಿಣಿ ಯಲ್ಲಿ ಮಿಂದು ತನ್ನ ಪಾಪ ನಾಷ ಮಾಡಿಕೊಂಡ.
    ಸ್ನಾನ ಮಾಡಬೇಕಾದರೆ 3 ಬಾರಿ ಸ್ವಾಮಿತೀರ್ಥ ಎಂದು ಹೇಳಿಕೊಂಡರೆ ಸಾಕು ಅಲ್ಲಿ ಸ್ನಾನ ಮಾಡಿದ ಪುಣ್ಯ ಲಭಿಸುತ್ತದೆ.
    ಬ್ರಹ್ಮ ಪುರಾಣದ ಪ್ರಕಾರ ಸರಸ್ವತಿ ತನಗೆ ಸರ್ವ ತೀರ್ಥದ ಪಾವಿತ್ರ್ಯತೆ ಬರಬೇಕೆಂದು ಕೇಳಿದಾಗ ಬ್ರಹ್ಮನು ಸ್ವಾಮಿ ತೀರ್ಥದಲ್ಲಿ ಸೇರು ಎನ್ನಲು ಸರಸ್ವತಿ ಸ್ವಾಮಿ ತೀರ್ಥ ದಲ್ಲಿ ಸೇರುತ್ತಾಳೆ. ಎಲ್ಲಾ ತೀರ್ಥ ಇದರಲ್ಲಿ ಸೇರಿರುವುದರಿಂದ ಇಲ್ಲಿ ಸ್ನಾನ ಮಾಡುವುದರ ಜೊತೆಗೆ ಸ್ವಲ್ಪ ತೀರ್ಥವನ್ನು ಸ್ವೀಕರಿಸಬೇಕು.
    ಹೀಗೆ ಇನ್ನು ಹಲವಾರು ಪುರಾಣಗಳ ಪ್ರಕಾರ ಸ್ವಾಮೀ ಪುಷ್ಕರಿಣಿಯ ವೈಶಿಷ್ಟ್ಯವನ್ನು ಶ್ರೀ ಸ್ವಾಮೀಜಿಯವರು ಇಂದಿನ ಸಂಚಿಕೆಯಲ್ಲಿ ವಿವರಿಸಿದ್ದಾರೆ. ಎಲ್ಲರೂ ತಪ್ಪದೇ ನೋಡಿ ಮತ್ತು ನಿಮಗೆ ತಿಳಿದವರಿಗೂ ನೋಡಲು ತಿಳಿಸಿ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share