ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 33

908
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 33
ವೇಂಕಟೇಶ್ವರ ಕಲ್ಯಾಣ ವಾಚಕರಲ್ಲಿ ಒಂದು ವೈಯುಕ್ತಿಕ ಮನವಿ. ಇಲ್ಲಿ ಬರೆದಿರುವುದನ್ನು ಓದಿದರೆ ಸಾಕು, ನೋಡುವುದು ಬೇಡ ಎಂದು ಕೊಂಡಿದ್ದಲ್ಲಿ ನಿಜವಾಗಿಯೂ ನಿಮಗೆ ಅಪಾರವಾದ ನಷ್ಟ ಕಾರಣ ಬರೆಯುವುದು ಕಥೆಯ ಸಾರಾಂಶವಷ್ಟೆ. ಅದರ ಚಂದ, ವೈಭವ, ವಿಷಯಗಳ ವಿವರ, ಜೊತೆಜೊತೆಗೆ ನಮ್ಮ ಜೀವನಕ್ಕೆ ಅನ್ವಯವಾಗುವಂತ ನೀತಿ ತತ್ವಗಳು ಇದೆಲ್ಲವನ್ನು ಶ್ರೀ ಸ್ವಾಮೀಜಿ ಯವರು ಎಳೆ ಎಳೆಯಾಗಿ ಬಿಡಿಸಿದ್ದಾರೆ. ಕಥೆ ಓದಿದರೆ ಆ ಕ್ಷಣಕ್ಕಷ್ಟೆ ತಿಳಿದಿರುತ್ತದೆ. ಆದರೆ ಸ್ವಾಮೀಜಿ ಯವರ ಬಾಯಲ್ಲಿ ಕೇಳಿದರೆ ಆ ಚಿತ್ರಗಳು ಮನಸ್ಸಿನಲ್ಲಿ ಹಾಗೆ ಅಚ್ಚಿನಂತೆ ಉಳಿದು ಬಿಡುತ್ತದೆ. ಎಲ್ಲರೂ ಈ ವಿಷಯವನ್ನು ಗಮನಿಸಲೇ ಬೇಕು. ಇನ್ನು ಇಂದಿನ ಕಥಾ ವಿಷಯಕ್ಕೆ ಬರೋಣ.
ಕಲ್ಯಾಣಕ್ಕೆ ಎಲ್ಲ ಸಿದ್ಧತೆಗಳು ಭರದಿಂದ ಸಾಗುತ್ತಿತ್ತು. ಅಗ್ನಿ ದೇವನು ಅಡುಗೆಯ ಉಸ್ತುವಾರಿ ವಹಿಸಿಕೊಂಡಿದ್ದನು. ವೆಂಕಟಾಚಲದ ಕೆರೆಗಳೇ ಅಡುಗೇ ಪಾತ್ರೆ ಗಳಾಗಿದ್ದವು. ಅತಿಥಿಗಳ ಸಾಲು ವೆಂಕಟಾದ್ರಿ ಯಿಂದ ಶ್ರೀ ಶೈಲದ ತನಕ ಇತ್ತು.
ಇನ್ನು ಬ್ರಹ್ಮ ನು ದಿಬ್ಬಣ ಹೊರಡಬಹುದೆಂದು ಸೂಚಿಸುತ್ತಾನೆ. ವೇಂಕಟೇಶ್ವರನು ಗರುಡವೇರಿದನು. ಲಕ್ಷ್ಮಿ ದೇವಿಯು ಬಂಗಾರದ ರಥವೇರಿದಳು. ವಕುಳಾದೇವಿ ವಿಮಾನವೇರಿದಳು. ಶ್ರೀ ಹರಿಯ ಬಲಕ್ಕೆ ಶಿವನು, ಎಡಕ್ಕೆ ವಾಸುದೇವನು, ಹಿಂದೆ ದೇವಸೇನೆಸೊಂದಿಗೆ ಸೇನಾನಾಯಕ ಸುಬ್ರಮಣ್ಯ ನು, ಇತರ ದೇವಾನು ದೇವತೆಗಳು, ಸಕ್ಷ ಕಿಂಪುರುಷರು, ಮನುಜರು, ಮುಂದೆ ಋಷಿ ಮುನಿಗಳು, ಗಂಧರ್ವರು, ಅಪ್ಸರೆಯರು ನಡೆಯುತ್ತಿದ್ದರು. ವಿಶ್ವಕ್ಸೇನನು ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿದ್ದನು. ದಾರಿಯಲ್ಲಿ ಶುಕ ಮಹರ್ಷಿ ಆಶ್ರಮ ಸಿಗಲಾಗಿ ಶುಕದೇವನು ಪೂರ್ಣ ಕುಂಭ ಸ್ವಾಗತವನ್ನು ಕೋರಿ ಸ್ವಾಮಿಯು ತನ್ನ ಆತಿಥ್ಯ ಸ್ವೀಕರಿಸಲು ಕೋರಿದನು. ಸ್ವಾಮಿಯು ತನ್ನ ಬಳಗ ಬಹಳ ದೊಡ್ಡದು ಎನ್ನಲು ವಕುಳಾದೇವಿ ಕೃಷ್ಣ ನಿಗೆ ಒಳ ನಡೆಯಲು ಸೂಚಿಸುತ್ತಾಳೆ. ತಾಯಿ ಮಾತಿನಂತೆ ವೆಂಕಟೇಶ್ವರನು ಲಕ್ಷ್ಮೀ ದೇವಿ ಹಾಗೂ ತಾಯಿಯೊಂದಿಗೆ ಒಳನಡೆಯುತ್ತಾನೆ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share