ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 39

1035
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 39
ವೇಂಕಟೇಶ್ವರನು ಸಾಲಿಗ್ರಾಮ ಶಿಲಾಮೂರ್ತಿಯಾದದ್ದು ಕೇಳಿದೆವು.
ಇಂದಿನ ವಿಶೇಷವೇನು ಕೇಳೋಣ.
ಯೋಗಿಗಳ ಚಿತ್ತವನ್ನು ಅಪಹರಿಸುವವನು ಹರಿ. ಅಂತಹ ಶ್ರೀನಿವಾಸನು ಭಕ್ತರ ಮೇಲೆ ಕರುಣಾರಸವನ್ನು ಹರಿಸುತ್ತಿದ್ದಾನೆ. ಏಕಾಗ್ರತೆಯಿಂದ ದರ್ಶನ ಮಾಡಿದಲ್ಲಿ ಎಲ್ಲರಿಗೂ ಇದರ ಅನುಭವವಾಗುತ್ತದೆ. ನಮ್ಮ ಕೋಪ ತಾಪ, ಪ್ರತಿಷ್ಠೆಯನ್ನು ಮಂದಿರದ ಹೊರಗೆ ಬಿಟ್ಟು ಶುದ್ಧ ಮನಸ್ಸಿನಿಂದ ಹೋಗಿ ದರ್ಶನ ಮಾಡಿದಲ್ಲಿ ನಮ್ಮ ಚಿತ್ತವು ಪರಮಾತ್ಮನೆಡೆಗೆ ಹೋಗುತ್ತದೆ. ಐದು ಬೇರಗಳಿವೆ. 1. ಮೂಲ ಬೇರ – ಲೋಕ ಕಲ್ಯಾಣಕ್ಕಾಗಿ, 2. ಕೌತುಕ ಬೇರ – ಸಂಕಲ್ಪ ವ್ಯಕ್ತಿಯ ಮಂಗಳಕ್ಕಾಗಿ, 3. ಉತ್ಸವ ಬೇರ – ಉತ್ಸವಾದಿಗಳಿಗೆ, 4. ಸ್ನಪನ ಬೇರ – ಅಭಿಷೇಕಾದಿಗಳಿಗೆ, 5. ಬಲಿ ಬೇರ – ನೈವೇದ್ಯಾದಿಗಳಿಗೆ. ಬೇರ ಎಂದರೆ ವೇಂಕಟೇಶ್ವರನಿಂದ ಪ್ರತ್ಯಕ್ಷವಾದ ಐದು ಬೇರೆ ಬೇರೆ ಬೇರಗಳು ಅಂದರೆ ಮೂರ್ತಿಗಳು. ಹೃದಯ ದಲ್ಲಿ ಲಕ್ಷ್ಮಿ ಯನ್ನು ಇಟ್ಟುಕೊಂಡು ಹೊರಗೆ ಒಬ್ಬನೇ ಇರುವುದರಿಂದ ಸ್ಥಾನಕ ವಿರಹ ಮೂರ್ತಿ ಎನಿಸಿಕೊಂಡಿದ್ದಾನೆ.
ಭಗವಂತನು ಸಾಲಿಗ್ರಾಮ ಶಿಲಾಮೂರ್ತಿಯಾದರೂ ಮೃದುತ್ವವನ್ನೇ ತುಂಬಿಕೊಂಡಿದ್ದಾನೆ. ವಯ್ಯಾರದಿಂದ ನಿಂತಿರುವ ಆ ಭಂಗಿಯನ್ನು ಯಾವ ದೇವ ಶಿಲ್ಪಿಯು ಕೆತ್ತಲಾರ.
ಬ್ರಹ್ಮನು ಎರಡು ದೀಪಗಳನ್ನು ಹಚ್ಚಿ ಸ್ವಾಮಿಯ ಪಾದಗಳಿಗೆ ಅಭಿಷೇಕ ಮಾಡಿ ಅರ್ಚನೆಯನ್ನು ಮಾಡಿದನು. ತಾನು ಬೆಳಗಿಸಿದ ನಂದಾದೀಪವು ಕಲಿಗಾಲದ ಅಂತ್ಯದವರೆಗೂ ಬೆಳಗುತ್ತಿರುತ್ತದೆ ಎಂದನು.
ಎಷ್ಟೋ ಜನರಿಗೆ ಗೊತ್ತೆ ಇರದ ರಹಸ್ಯಗಳನ್ನು ವಿವರವಾಗಿ ವರ್ಣಿಸುವ ಮೂಲಕ ನಮ್ಮನ್ನೆಲ್ಲಾ ಆಶೀರ್ವದಿಸಿದ್ದಾರೆ ಶ್ರೀ ಸ್ವಾಮೀಜಿ ಯವರು. ನೋಡಿ ತಿಳಿದುಕೊಳ್ಳುವುದು ನಮಗೆ ಬಿಟ್ಟದ್ದು. ಮತ್ತೆ ನೋಡೆ ನೋಡುತ್ತೀವಿ ಅಲ್ಲವ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share