ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 49

839
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 49
( ವಿಶೇಷ ಸೂಚನೆ : ವಾಚಕ, ವೀಕ್ಷಕರಿಗೆ ಒಂದು ವಿಷಯದಲ್ಲಿ ಸ್ಪಷ್ಟೀಕರಣ ಕೊಡಲು ಬಯಸುತ್ತೇವೆ. ಇಂದು ನಿನ್ನೆ ಸಂಖ್ಯೆಯ ಕಸಿವಿಸಿಯಲ್ಲಿ ಒಂದು ಚಿಕ್ಕ ತಪ್ಪಾಗಿದೆ. ಅದನ್ನು ಸರಿಮಾಡುವ ಉದ್ದೇಶದಿಂದ ಇಂದು 48 ಮತ್ತು 49 ಎರಡು ಸಂಚಿಕೆಯನ್ನು ಇಂದು ಪ್ರಸ್ತುತ ಪಡಿಸುತ್ತಿದ್ದೇವೆ. )

ನಿನ್ನೆ ಸಂಚಿಕೆಯಲ್ಲಿ ಅನಂತಾಚಾರ್ಯರ ಭಕ್ತಿ ಕಥೆಯನ್ನು ಕೇಳಿದ್ದೆವು.
ಇಂದು ಅನ್ನಮಾಚಾರ್ಯರ ಕಥೆ ಪೂರ್ತಿಗೊಳಿಸೋಣ. ಅನ್ನಮಾಚಾರ್ಯರ ತಾತನವರಿಗೆ ವಿದ್ಯೆ ಹೇಗೆ ಬಂತು, ಅನ್ನಮಾಚಾರ್ಯರು ಹೇಗೆ ಜನಿಸಿದರೆಂದು ಮೊದಲಿಗೆ ವಿವರಿಸಿದ್ದಾರೆ ಶ್ರೀ ಸ್ವಾಮೀಜಿ ಯವರು. ಅನ್ನಮಾಚಾರ್ಯರನ್ನು ಮನೆಯವರು ಹುಲ್ಲು ಕಿತ್ತು ತರಲು ಕಳುಹಿಸಿದ್ದರು. ಆದರೆ ಅನ್ನಮಾಚಾರ್ಯರು ಒಂದು ಗುಂಪು ಜನರು ಗೋವಿಂದ ನಾಮಸ್ಮರಣೆ ಮಾಡುತ್ತಾ ಹೋಗುತ್ತಿದ್ದವರ ಜೊತೆ ತಾನು ಮಾಡುತ್ತಿದ್ದ ಕೆಲಸವನ್ನು ಮರೆತು ಹೊರಟೇಬಿಟ್ಟ ಅವರೊಂದಿಗೆ. ದಾರಿಯಲ್ಲಿ ಸುಸ್ತಾಗಿದ್ದ ಅನ್ನಮಯ್ಯನಿಗೆ ಅಲಮೇಲುಮಂಗಮ್ಮನೇ ಬಂದು ಊಟ ಬಡಿಸಿ ಅವರ ಹಸಿವನ್ನು ನೀಗಿಸಿದಳು. ತಿರುಮಲಕ್ಕೆ ಹೋದ ಅನ್ನಮಯರು ಸ್ವಾಮಿ ಸೇವೆಯಲ್ಲಿ ಮನೆಯನ್ನು ಮರೆತೆ ಬಿಟ್ಟಿದ್ದರು. ತಂದೆಯವರು ಮನೆಗೆ ಕರೆದಾಗ ಸ್ವಾಮಿಯು ಸ್ವಪ್ನದಲ್ಲಿ ಬಂದು ಮನೆಗೆ ತೆರಳಲು ಹೇಳಿದನು. ಅದರಂತೆ ಮನೆಗೆ ತೆರಳಿ 16ನೇ ವಯಸ್ಸಿನಲ್ಲೇ ಸ್ವಾಮಿಯ ಬಗ್ಗೆ ಎಲ್ಲಾ ಭಾವನೆಗಳಲ್ಲೂ ಕೀರ್ತನೆಗಳನ್ನು ರಚಿಸಿದರು. ಇದನ್ನು ನೋಡಿದ ರಾಜನು ತನ್ನ ಬಗ್ಗೆಯೂ ರಚಿಸೆಂದು ಒತ್ತಾಯ ಮಾಡಲು ಅನ್ನಮಾಚಾರ್ಯರು ಒಪ್ಪಲಿಲ್ಲ. ಅವರನ್ನು ಸರಪಳಿಗಳಿಂದ ಕಟ್ಟಿ ಹಾಕಿದರು. ಆದರೆ ಅವರು ಹಾಡುವುದನ್ನು ನಿಲ್ಲಿಸಲಿಲ್ಲ. ಸ್ವಾಮಿಯು ಸರಪಳಿಯನ್ನು ಬಿಚ್ಚುತ್ತಿದ್ದನು. ಅವರ ಭಕ್ತಿಯ ಅರಿವಾಗಿ ರಾಜನು ಅನ್ನಮಾಚಾರ್ಯರನ್ನು ಬಿಡುತ್ತಾನೆ. ಅವರು ನೇರವಾಗಿ ತಿರುಮಲಕ್ಕೆ ಹೋಗಿ ತಮ್ಮ 95ನೇ ವಯಸ್ಸಿನ ತನಕವೂ ಸ್ವಾಮಿಯ ಬಗ್ಗೆ ರಚಿಸುತ್ತಾ ಸ್ವಾಮಿಯ ಪಾದ ಸೇರಿದರು.
ಇನ್ನು ವೇಂಗಮಾಂಬ ಎಂಬ ಭಕ್ತೆಯು ಅತಿ ಚಿಕ್ಕ ವಯಸ್ಸಿನಲ್ಲೇ ಸ್ವಾಮಿಯ ಬಗ್ಗೆ ಕೀರ್ತನೆ ರಚಿಸುತ್ತಿದ್ದಳು. ಬಾಲ ವಿಧವೆಯಾದಳು. ಎಲ್ಲರೂ ಹುಚ್ಚಿನ ಪಟ್ಟ ಕಟ್ಟಿದರು. ಮನೆ ಬಿಟ್ಟು ತಿರುಮಲ ಸೇರಿ ಸ್ವಾಮಿಗೆ ಏಕಾಂತ ಸೇವೆ ನಂತರ ಆರತಿ ಎತ್ತುತ್ತಿದ್ದಳು. ಕೆಲವು ಜನರು ಇವಳನ್ನು ಭಹಿಷ್ಕರಿಸಿದರು. ಮನೆಯಲ್ಲೇ ಸ್ವಾಮಿಯನ್ನು ಕೀರ್ತಿಸುತ್ತಿದ್ದಳು. ಒಮ್ಮೆ ಸ್ವಾಮಿಯ ರಥ ಅವಳ ಮನೆ ಮುಂದೆ ನಿಂತುಹೋಗಲಾಗಿ ಎಲ್ಲರಿಗೂ ಅವಳ ಭಕ್ತಿ ಎಷ್ಟೆಂದು ತಿಳಿದು ಕ್ಷಮೆ ಯಾಚಿಸಿದರು. ಸ್ವಾಮಿಯು ಅವಳಿಗೆ ಭಾಗವತದ ಪುಸ್ತಕ ಕೊಟ್ಟು ಅದರ ಬಗ್ಗೆ ರಚಿಸಲು ಹೇಳಿ ಅದರಂತೆ ಸ್ವಾಮಿಯ ಸೇವೆ ಮಾಡುತ್ತಾ ಸ್ವಾಮಿ ಪಾದಸೇರಿದಳು.
ಇಂತಹ ಮಹಾ ಭಕ್ತರ ಕಥೆಯನ್ನು ಸದ್ಗುರುಗಳ ಮುಖಾರವಿಂದದಲ್ಲಿ ಕೇಳುವ ಭಾಗ್ಯ ನಮ್ಮದಾಗಿದೆ. ಕೇಳೋಣ ಮತ್ತು ಶೇರ್ ಮಾಡೋಣ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share