ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ; ಶ್ರೀ ವೆಂಕಟೇಶ್ವರ ಕಲ್ಯಾಣ……

866
Share

ಶ್ರೀ ವೆಂಕಟೇಶಾಯ ನಮಃ

ಮೈಸೂರು ಪತ್ರಿಕೆಯ ಆಧ್ಯಾತ್ಮಿಕ ಅಂಗಳದಲ್ಲಿ 29 – 6 – 2020 ನೇ ತಾರೀಖಿನಿಂದ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಯವರು ಉಪನ್ಯಾಸ ಕೊಟ್ಟಿರುವ ಶ್ರೀ ವೆಂಕಟೇಶ್ವರ ಕಲ್ಯಾಣವನ್ನು 52 ಕಂತುಗಳಲ್ಲಿ ಪ್ರಕಟಿಸಿದ್ದೆವು. ಇದು ಆಭೂತಪೂರ್ವ ಯಶಸ್ಸನ್ನು ಕಂಡಿದೆ.
ಮೊದಲಿಗೆ ಮೈಸೂರು ಪತ್ರಿಕೆ ತಂಡವು ಈ ಅವಕಾಶವನ್ನು ಕಲ್ಪಿಸಿಕೊಟ್ಟ ಪರಮ ಪೂಜ್ಯ ಸ್ವಾಮೀಜಿ ಯವರಿಗೆ ಹೃದಯ ಪೂರ್ವಕ ವಂದನೆಗಳನ್ನು ಅರ್ಪಿಸುತ್ತದೆ. ಸ್ವಾಮೀಜಿ ಯವರು ಕಥೆಯನ್ನು ಸುಂದರವಾಗಿ ಮನದಲ್ಲಿ ಅಚ್ಚಳಿಯದಂತೆ ನಿಲ್ಲುವಂತೆ ಮನೋಜ್ಞವಾಗಿ ವಿವರಿಸಿದ್ದಾರೆ. ಇದಕ್ಕೆ ಮತ್ತೊಂದು ನಮಸ್ಕಾರಗಳು.
ಪ್ರಸ್ತುತ ಕೊರೋನದಂತಹ ಕಠಿಣ ಪರಿಸ್ಥಿತಿಯಲ್ಲಿ ಎಲ್ಲರ ಮನಸ್ಸು ನೊಂದಿದ್ದ ಸ್ಥಿತಿಯಲ್ಲಿ ಸ್ವಲ್ಪ ಮಟ್ಟಿಗೆ ದೈವ ಚಿಂತನೆ ಮಾಡುವುದು ಒಳಿತೆನಿಸಿತು. ಶ್ರಾವಣ ಮಾಸವಾದ್ದರಿಂದ ಶ್ರೀ ವೇಂಕಟೇಶ್ವರ ಕಲ್ಯಾಣ ನೋಡುವುದು ಮತ್ತು ಓದುವುದು ಸೂಕ್ತವೆಂದು ಮೈಸೂರು ಪತ್ರಿಕೆ ತಂಡ ತೀರ್ಮಾನಿಸಿತು. ಇದನ್ನು ಆರಂಭ ಮಾಡಿದಂದಿನಿಂದ ಕೊನೆಯ ಕಂತಿನ ತನಕ ನಮ್ಮ ಪತ್ರಿಕೆಯ ವಾಚಕ ವೃಂದದವರು ಅಪಾರ ತೃಪ್ತಿ ಹೊಂದಿರುವುದು ಕಂಡು ಬಂದಿದೆ. ಸಾಕಷ್ಟು ವಾಚಕ, ವೀಕ್ಷಕ ಮಿತ್ರರು ತಮ್ಮ ಅಪಾರ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಅದರಲ್ಲಿ ಕೆಲವೊಂದು ಆಸಕ್ತಿಕರ ಎನ್ನಿಸಿದ್ದನ್ನು ಹಂಚಿಕೊಳ್ಳಲು ಬಯಸುತ್ತೇವೆ.
ಕೋವಿಡ್ ಆಸ್ಪತ್ರೆ ಯಲ್ಲಿ ಕರ್ತವ್ಯ ನಿರ್ವಹಿಸುವವರೊಬ್ಬರು ಪ್ರತಿನಿತ ಬೆಳಿಗ್ಗೆ ವೇಂಕಟೇಶ್ವರ ಕಲ್ಯಾಣ ಕೇಳಿಕೊಂಡು ಮನೆಯಿಂದ ಹೊರಟರೆ ಒಂದು ರೀತಿಯ ಧೈರ್ಯ ಇರುತ್ತದೆ ನಮ್ಮ ಕೆಲಸ ಮಾಡಲು ಎಂದು ಹೇಳಿಕೊಂಡರು.
ಮತ್ತೊಬ್ಬ ಶಿಕ್ಷಕರು ತಮ್ಮ ಸಹ ಉದ್ಯೋಗಿಗಳೊಂದಿಗೆ ಒಟ್ಟಿಗೆ ಕುಳಿತು ನೋಡುತ್ತಿದ್ದೇವೆ. ಇದರಿಂದ ಸ್ವಲ್ಪ ಸಮಯ ನಮ್ಮ ತಾಪತ್ರಯಗಳನ್ನೆಲ್ಲ ಮರೆತು ಸಂತೋಷದಿಂದ ಸತ್ಕಾಲಕ್ಷೇಪ ಮಾಡುವಂತಾಗಿದೆ ಎಂದು ತಮ್ಮ ಸಂತೋಷ ವ್ಯಕ್ತ ಪಡಿಸಿದರು.
ಪೋಲೀಸಿನವರು ನಿತ್ಯವು ತಪ್ಪದೆ ತಮ್ಮ ಗುಂಪಿನಲ್ಲಿ ಶೇರ್ ಮಾಡುವುದು ಅಭ್ಯಾಸವಾಗಿ ಬಿಟ್ಟಿದೆ ಎಂದು ಸಂತೋಷವಾಗಿ ಹೇಳಿಕೊಂಡರು.
ಎಲ್ಲಾ ವ್ಯಾಪಾರಗಳು ಇಳಿ ಮುಖವಾಗಿರುವುದು ತಿಳಿದಿರುವ ವಿಷಯವೆ. ಇಂತಹ ಸಮಯದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಗೋವಿಂದನ ನುಡಿಗಳು, ಮತ್ತು ದರ್ಶನವಾಗುತ್ತಿರುವುದೆ ನಮಗೆ ಧೈರ್ಯ ಎಂಬುದು ವ್ಯಾಪಾರಸ್ಥರುಗಳ ಅಂಬೋಣ.
ಹೀಗೆ ಬಹಳಷ್ಟು ಜನರು ತಮ್ಮ ಅನುಭವವನ್ನು ತೋಡಿಕೊಂಡಿದ್ದಾರೆ. ಅದರಲ್ಲಿ ಕೆಲವೊಂದನ್ನು ಮಾತ್ರ ಹಂಚಿಕೊಂಡಿದ್ದೇವೆ.
ನಮ್ಮ ವಾಚಕ, ವೀಕ್ಷಕ ಮಿತ್ರರು ಎಷ್ಟರ ಮಟ್ಟಿಗೆ ಇದನ್ನು ತಮ್ಮದಾಗಿಸಿಕೊಂಡಿದ್ದರು ಎಂದರೆ ಎರಡು ಬಾರಿ ತಾಂತ್ರಿಕ ದೋಷದಿಂದ ಸ್ವಲ್ಪ ತಡವಾಗಿ ಪ್ರಕಟವಾಗಿದ್ದರಿಂದ ಅಂದು ಎಲ್ಲರಿಗು ಉತ್ತರಿಸುವುದೆ ಒಂದು ಸವಾಲಾಗಿತ್ತು. ಅದಕ್ಕೆ ಮೈಸೂರು ಪತ್ರಿಕೆ ತಂಡವು ಕ್ಷಮೆ ಯಾಚಿಸುತ್ತದೆ.
ಇಷ್ಟೊಂದು ಆಸಕ್ತಿಯಿಂದ ಸ್ವೀಕರಿಸಿದ ಮೈಸೂರು ಪರ್ತಿಕೆ ವಾಚಕ ಹಾಗೂ ವೀಕ್ಷಕರಿಗೆ ಮೈಸೂರು ಪತ್ರಿಕೆ ತಂಡದ ಅಭಿನಂದನೆಗಳು.
ಆರಂಭ ವಾದದ್ದು ಅಂತ್ಯವಾಗಲೇ ಬೇಕು. ಒಂದರ ಅಂತ್ಯ ಮತ್ತೊಂದರ ಆರಂಭ ಎಂಬುವುದು ಸತ್ಯ.
ನಮ್ಮ ಪ್ರೀತಿಯ ವಾಚಕ, ವೀಕ್ಷಕರಿಂದ ಎಂದಿಗೂ ಇದೇ ಸಹಕಾರವನ್ನು ಇನ್ನು ಹೆಚ್ಚಾಗಿ ನಿರೀಕ್ಷಿಸುತ್ತಿದೆ ಮೈಸೂರು ಪತ್ರಿಕೆ ತಂಡ.

ಈ ಅಧ್ಯಾಯ ಮುಗಿಸುವ ಮುನ್ನ ನನಗೆ ಈ ಅವಕಾಶ ಕೊಟ್ಟ ಮೈಸೂರು ಪತ್ರಿಕೆ ತಂಡಕ್ಕೆ ಧನ್ಯವಾದಗಳು.

  • ಭಾಲರಾ
    ಬೆಂಗಳೂರು

ವೇಂಕಟೇಶ್ವರ ಗೋವಿಂದ
ಗೋವಿಂದ

ಜೈಗುರುದತ್ತ.


Share