ಮೈಸೂರು ಮೂಡಾ : ಉಳಿತಾಯ ಬಜೆಟ್ ಮಂಡನೆ

354
Share

ಮೈಸೂರು 2023-24ನೇ ಸಾಲಿನಲ್ಲಿ ರೂ.50226.88 ಲಕ್ಷಗಳ ಸಂಪನ್ಮೂಲವನ್ನು ಕ್ರೂಢೀಕರಿಸಲು ಉದ್ದೇಶಿಸಲಾಗಿದ್ದು, ಪ್ರಾಧಿಕಾರದಿಂದ ಮೈಸೂರು ನಗರದ ಅಭಿವೃದ್ಧಿ ಮತ್ತು ಪ್ರಗತಿಗೆ ಪ್ರಸಕ್ತ ಸಾಲಿನಲ್ಲಿ ರೂ.49768.37ಲಕ್ಷಗಳನ್ನು ವೆಚ್ಚ ಮಾಡಲು ಉದ್ದೇಶಿ ಸಲಾಗಿದ್ದು, ಪ್ರಸಕ್ತ ಸಾಲಿಗೆ ರೂ.458.51 ಲಕ್ಷಗಳ ಹೆಚ್ಚುವರಿ ಉಳಿತಾಯ ಆಯವ್ಯಯ (Surplus Budget) ನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಜಿಟಿ ದಿನೇಶ್ ಕುಮಾರ್ ಮಂಡಿಸಿದರು ಅವರು
2023-24ನೇ ಸಾಲಿನ ಅಂದಾಜು ಆಯವ್ಯಯವನ್ನು ಪ್ರಾಧಿಕಾರದ ಸಭೆಗೆ ಮಂಡಿಸಿದ್ದೇನೆ, ಸದರಿ ಅಂದಾಜು ಆಯವ್ಯಯಕ್ಕೆ ಅನುಮೋದನೆ ನೀಡಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.
2022-23ನೇ ಸಾಲಿನ ಪರಿಷ್ಕೃತ ಆದಾಯ ಮತ್ತು ವೆಚ್ಚದ ವಿವರ
2022-23ನೇ ಆರ್ಥಿಕ ವರ್ಷದಲ್ಲಿ ಎಲ್ಲಾ ಮೂಲಗಳಿಂದ ಕೂಢೀಕರಿಸಲು ಉದ್ದೇಶಿಸಲಾಗಿದ್ದ ಒಟ್ಟು ಅಂದಾಜು ಸಂಪನ್ಮೂಲ ರೂ.35986,91 ಲಕ್ಷಗಳಾಗಿದ್ದು ಹಾಗೂ ಒಟ್ಟು ಅಂದಾಜು ವೆಚ್ಚ ರೂ.40382.39 ಲಕ್ಷಗಳ ಆಯವ್ಯಯಕ್ಕೆ ಪರಿಷ್ಕರಿಸಲಾಗಿದೆ.
ವಿವರಗಳು ಈ ಕೆಳಕಂಡಂತಿರುತ್ತದೆ.
1. ಸಾಮಾನ್ಯ ಆಡಳಿತ ಮತ್ತು ಮಹಾಯೋಜನೆಗೆ ನಿಗಧಿಪಡಿಸಲಾಗಿರುವ ಮೂಲವಾದ ನಿಧಿ-1 ರಿಂದ ಅಂದಾಜಿಸಲಾಗಿದ್ದ ಆದಾಯವು ರೂ. 7205.00 ಲಕ್ಷಗಳಾಗಿದ್ದು, 2022-23ನೇ ಸಾಲಿನ ಸದರಿ ಸಂಪನ್ಮೂಲವನ್ನು ರೂ. 9213.72 ಲಕ್ಷಗಳಿಗೆ ಪರಿಷ್ಕರಿಸಲಾಗಿದೆ.
2. ಸಾಮಾನ್ಯ ಆಡಳಿತ ಮತ್ತು ಮಹಾಯೋಜನೆಗೆ ನಿಗಧಿಪಡಿಸಲಾಗಿರುವ ಮೂಲವಾದ ನಿಧಿ-2 ರಿಂದ 2022-23ನೇ ಸಾಲಿನ ಆಯವ್ಯಯದಲ್ಲಿ ಅಂದಾಜಿಸಲಾಗಿದ್ದ ಒಟ್ಟು ಮೊತ್ತ ರೂ.1040.00 ಲಕ್ಷಗಳಾಗಿದ್ದು, ಮಾರ್ಚ್- 2023ರ ಅಂತ್ಯಕ್ಕೆ ಪರಿಷ್ಕೃತ ನಿರೀಕ್ಷಿತ ಆದಾಯವು ಲಕ್ಷಗಳಾಗಿರುತ್ತದೆ. do.1116.97
3. ಸಾಮಾನ್ಯ ಆಡಳಿತ ಮತ್ತು ಮಹಾಯೋಜನೆಗೆ ನಿಗಧಿಪಡಿಸಲಾಗಿರುವ ಮೂಲವಾದ ನಿಧಿ-3ರಲ್ಲಿ ಆರ್ಥಿಕ ವರ್ಷದ ಆಯವ್ಯಯದಲ್ಲಿ ರೂ.35.00 ಲಕ್ಷಗಳಿಗೆ ಅಂದಾಜಿಸಲಾಗಿದ್ದು, ಮಾರ್ಚ್-2023ರ ಅಂತ್ಯಕ್ಕೆ ಪರಿಷ್ಕೃತ ಆದಾಯ ರೂ.0.48 ಲಕ್ಷಗಳಾಗಿರುತ್ತದೆ.
4. ಸಾಮಾನ್ಯ ಆಡಳಿತ ಮತ್ತು ಮಹಾಯೋಜನೆಗೆ ನಿಗಧಿಪಡಿಸಲಾಗಿರುವ ಮೂಲವಾದ ನಿಧಿ-4 ರಿಂದ ಆಯವ್ಯಯದಲ್ಲಿ ಅಂದಾಜಿಸಲಾಗಿದ್ದ ರೂ.80.00 ಲಕ್ಷಗಳಾಗಿದ್ದು, ಪರಿಷ್ಕೃತ ನಿರೀಕ್ಷಿತ ಆದಾಯವು ರೂ. 93.09 ಲಕ್ಷಗಳಾಗಿರುತ್ತದೆ. 5. ಅಭಿವೃದ್ಧಿ ನಿಧಿ-1ಕ್ಕೆ ಕ್ರೂಢೀಕೃತವಾಗುವ ಸಂಪನ್ಮೂಲಗಳನ್ನು
ಆಯವ್ಯಯದಲ್ಲಿ ರೂ.168890.75 ಲಕ್ಷಗಳಿಗೆ ಅಂದಾಜಿಸಲಾಗಿದ್ದು ಮಾರ್ಚ್- 2023ರ ಅಂತ್ಯಕ್ಕೆ ಪರಿಷ್ಕೃತ ನಿರೀಕ್ಷಿತ ಆದಾಯವು ರೂ.25282.21 ಲಕ್ಷಗಳಿಗೆ ಪರಿಷ್ಕರಿಸಲಾಗಿರುತ್ತದೆ.
6. ಅಭಿವೃದ್ಧಿ ನಿಧಿ-2 ಕ್ಕೆ ಕ್ರೂಢೀಕೃತವಾಗುವ ಸಂಪನ್ಮೂಲವನ್ನು 2022-23ರ ಆರ್ಥಿಕ ವರ್ಷದ ಆಯವ್ಯಯದಲ್ಲಿ do.4892.00 ಲಕ್ಷಗಳಿಗೆ ಅಂದಾಜಿಸಲಾಗಿದ್ದು, ಮಾರ್ಚ್-2023ರ ಅಂತ್ಯಕ್ಕೆ ಪರಿಷ್ಕೃತ ನಿರೀಕ್ಷಿತ ಆದಾಯವು ರೂ. 280.44 ಲಕ್ಷಗಳಿಗೆ ಪರಿಷ್ಕರಿಸಲಾಗಿರುತ್ತದೆ.
ಜೆ.ಪಿ.ನಗರ 3ನೇ ಹಂತದ ಬಡಾವಣೆಯಿಂದ (ಅಕ್ಕಮಹಾದೇವಿ ರಸ್ತೆ ಮೂಲಕ) ಜೆ.ಪಿ.ನಗರ 3ನೇ ಹಂತ ಬಿ ವಲಯ ಮತ್ತು ಇನ್ನಿತರೆ ಬಡಾವಣೆಗೆ ಸಂಪರ್ಕಿಸುವ ರಸ್ತೆಗೆ ಕೆಳ ಸೇತುವೆ ನಿರ್ಮಾಣ.
ಪ್ರಾಧಿಕಾರದ ವತಿಯಿಂದ ಜೆ.ಪಿ.ನಗರ 3ನೇ ಹಂತ (ನಾಚನಹಳ್ಳಿ- ಕುಪ್ಪಲೂರು 3ನೇ ಹಂತ) ಬಡಾವಣೆಯನ್ನು ಈಗಾಗಲೇ ನಿರ್ಮಾಣ ಮಾಡಲಾಗಿದ್ದು, ಸದರಿ ಬಡಾವಣೆಯಲ್ಲಿ ಬಹುತೇಕ ಮನೆಗಳು | ಕಟ್ಟಡಗಳು ನಿರ್ಮಾಣವಾಗಿರುತ್ತದೆ. ಜೆ.ಪಿ.ನಗರ 3ನೇ ಹಂತದ ಬಡಾವಣೆಯಿಂದ (ಅಕ್ಕಮಹಾದೇವಿ ರಸ್ತೆ ಮೂಲಕ) ಹೊರವರ್ತುಲ ರಸ್ತೆ ಮೂಲಕ ಜೆ.ಪಿ.ನಗರ 3ನೇ ಹಂತ ಬಿ ವಲಯ ಮತ್ತು ಇತರೆ ಬಡಾವಣೆಗಳಿಗೆ ಸಂಚರಿಸುವ ವಾಹನಗಳು ಹೆಚ್ಚಾಗಿದ್ದು, ಇದರಿಂದಾಗಿ ಹೊರವರ್ತುಲ ರಸ್ತೆಯಲ್ಲಿ ಹಾದುಹೋಗಲು ಕಷ್ಟಸಾಧ್ಯವಾಗಿರುತ್ತದೆ. ಆದ ಕಾರಣ ಸದರಿ ಹೊರವರ್ತುಲ ರಸ್ತೆಗೆ ಕೆಳ ಸೇತುವೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು ಸದರಿ ಸಾಲಿನಲ್ಲಿ ಯೋಜನಾ ವರದಿ ತಯಾರಿಸಲು ರೂ.15.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.
ಯುದ್ಧ ಸ್ಮಾರಕ ಸೌಂದರೀಕರಣ :
ಪ್ರಾಧಿಕಾರದ ವತಿಯಿಂದ ಯುದ್ಧ ಸ್ಮಾರಕ ಸೌಂದರ್ಯವನ್ನು ಅಭಿವೃದ್ಧಿ ಪಡಿಸಲು ಒತ್ತು ನೀಡುತ್ತಿದ್ದು, ಪ್ರಸ್ತುತ ಸಾಲಿನಲ್ಲಿ ಯುದ್ಧ ಸ್ಮಾರಕದ ಸೌಂದರೀಕಣಕ್ಕಾಗಿ ರೂ.150.00 ಲಕ್ಷಗಳನ್ನು ಕಾಯ್ದಿರಿಸಿದೆ.
ವಾಣಿಜ್ಯ ಸಂಕೀರ್ಣಗಳ ನಿರ್ಮಾಣ :
ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಿರುವ ಬಡಾವಣೆಗಳು ಮತ್ತು ಪ್ರಾಧಿಕಾರದ ವ್ಯಾಪ್ತಿಯ ಬಡಾವಣೆಗಳಲ್ಲಿ ವಾಣಿಜ್ಯ ಸಂಕೀರ್ಣಗಳಿಗೆ ಕಾಯ್ದಿರಿಸಿರುವ ಸ್ಥಳಗಳಲ್ಲಿ ಬಹು ಉಪಯೋಗಿ ಕಟ್ಟಡ ನಿರ್ಮಾಣ ದಡಿಯಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಾಣ ಮಾಡಿ ಪ್ರಾಧಿಕಾರಕ್ಕೆ ಆದಾಯವನ್ನು ಕ್ರೂಢೀಕರಿಸಲು ಉದ್ದೇಶಿಸಿ, ಒಟ್ಟು ರೂ.1000.00 ಲಕ್ಷಗಳನ್ನು ಕಾಯ್ದಿರಿಸಿದೆ.
ತ್ಯಾಜ್ಯ ನೀರು ಸಂಸ್ಕರಣ ಘಟಕಗಳ ಅಭಿವೃದ್ಧಿ :
ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಿರುವ ಬಡಾವಣೆಗಳು ಮತ್ತು ಪ್ರಾಧಿಕಾರದ ವ್ಯಾಪ್ತಿಯ ಬಡಾವಣೆಗಳಲ್ಲಿನ ತ್ಯಾಜ್ಯ ನೀರು ಸಂಸ್ಕರಣ ಘಟಕಗಳನ್ನು ಅಭಿವೃದ್ಧಿಪಡಿಸುವ ಮತ್ತು ಸಂಸ್ಕರಣ ಘಟಕಗಳ ಸಾಮರ್ಥ್ಯವನ್ನು ವೃದ್ಧಿಸುವ ಸಂಬಂಧ ಯೋಜನಾ ವರದಿಯನ್ನು ಸಿದ್ಧಪಡಿಸಿ ಅನುಷ್ಟಾನಗೊಳಿಸಲು ಒಟ್ಟು ರೂ.1000.00 ಲಕ್ಷಗಳನ್ನು ಕಾಯ್ದಿರಿಸಿದೆ.
ಉದ್ಯಾನವನಗಳ ಅಭಿವೃದ್ಧಿ:
ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಿರುವ ಪ್ರಾಧಿಕಾರದ ವ್ಯಾಪ್ತಿಯ ಬಡಾವಣೆಗಳಲ್ಲಿ ಬಡಾವಣೆಗಳು ಮತ್ತು ಉದ್ಯಾನವನಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ಯೋಜನಾ ವರದಿಯನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಲು ಒಟ್ಟು ರೂ.500.00 ಲಕ್ಷಗಳನ್ನು ಕಾಯ್ದಿರಿಸಿದೆ.
ಪ್ರಾಧಿಕಾರವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂಪಿಸಿರುವ ವಿಶೇಷ ಯೋಜನೆಗಳು
ರೈತರ ಸಹಭಾಗಿತ್ವದೊಂದಿಗೆ ಹೊಸ ಬಡಾವಣೆಗಳ ನಿರ್ಮಾಣ
ಮೈಸೂರು ನಗರದ ಬೋಮ್ಮೇನಹಳ್ಳಿ ಗ್ರಾಮದ ಸರ್ವೆ ನಂ.120/2, 121, 122, 123/2, 126, 127, 128/1,2, 130 do 158 ಹಾಗೂ ಇನ್ನಿತರೆ ಜಮೀನಿನ ಮಾಲೀಕರು ಪ್ರಾಧಿಕಾರದ ಯೋಜನೆಗೆ ಆಸಕ್ತಿ ತೋರಿದ್ದು, ಸಹಭಾಗಿತ್ವ 50:50ರ ಅನುಪಾತದಡಿ ವಸತಿ ಬಡಾವಣೆ ರಚಿಸಲು ಉದ್ದೇಶಿಸಲಾಗಿದೆ.
ವಿಜಯನಗರ 4ನೇ ಹಂತ 1ನೇ ಘಟ್ಟ ಮತ್ತು 2ನೇ ಘಟ್ಟ ಬಡಾವಣೆಯ ಸಂಪರ್ಕ ರಸ್ತೆಯಲ್ಲಿನ ಹೊರವರ್ತುಲ ರಸ್ತೆಗೆ ಕೆಳ ಸೇತುವೆ ನಿರ್ಮಾಣ :
ವಿಜಯನಗರ 4ನೇ ಹಂತ 1ನೇ ಘಟ್ಟ ಮತ್ತು 2ನೇ ಘಟ್ಟ ಬಡಾವಣೆಯ ಈಗಾಗಲೇ ನಿರ್ಮಾಣ ಮಾಡಲಾಗಿದ್ದು, ಸದರಿ ಬಡಾವಣೆಯ ಬಹುತೇಕ ಮನೆಗಳು | ಕಟ್ಟಡಗಳು ನಿರ್ಮಾಣವಾಗಿರುತ್ತದೆ. ವಿಜಯನಗರ 3ನೇ ಹಂತದಿಂದ ವಿಜಯನಗರ 4ನೇ ಹಂತ 1ನೇ ಘಟ್ಟ ಬಡಾವಣೆಯ ಮಾರ್ಗವಾಗಿ ವಿಜಯನಗರ 4ನೇ ಹಂತ 2ನೇ ಘಟ್ಟ ಬಡಾವಣೆಗೆ
ಸಂಚರಿಸುವ ವಾಹನಗಳು ಹೆಚ್ಚಾಗಿದ್ದು, ಇದರಿಂದಾಗಿ ಹೊರವರ್ತುಲ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಡಚಣೆ ಉಂಟಾಗುತ್ತಿರುತ್ತದೆ. ಹಾಗೂ ಬಡಾವಣೆಯ ನಿವಾಸಿಗಳಿಗೆ ರಿಂಗ್ ರಸ್ತೆಯಲ್ಲಿ ಹಾದುಹೋಗಲು ಕಷ್ಟಸಾಧ್ಯವಾಗಿರುತ್ತದೆ. ಆದ ಕಾರಣ ಸದರಿ ರಿಂಗ್ ರಸ್ತೆಗೆ ಕೆಳ ಸೇತುವೆ ನಿರ್ಮಾಣ ಮಾಡುವಂತೆ ಹಾಗೂ ಬಡಾವಣೆ / ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಲು ವಿಜಯನಗರ 4ನೇ ಹಂತ 1ನೇ ಘಟ್ಟ ಮತ್ತು 2ನೇ ಘಟ್ಟ ಬಡಾವಣೆಯ ಸಂಪರ್ಕ ರಸ್ತೆಯಲ್ಲಿನ ಹೊರವರ್ತುಲ ರಸ್ತೆಗೆ ಕಳೆ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪ್ರಸ್ತುತ ಸಾಲಿನಲ್ಲಿ ಕೈಗೆತ್ತಿಕೊಳ್ಳಲು ರೂ.200.00 ಲಕ್ಷಗಳಲ್ಲಿ ಉದ್ದೇಶಿಸಲಾಗಿದೆ.

Share