ಮೈಸೂರು-ಶಸ್ತ್ರಾಸ್ತ್ರ, ಮಾರಕಾಸ್ತ್ರಗಳ ಬಳಕೆ ನಿಷೇಧ

158
Share

 

ಶಸ್ತ್ರಾಸ್ತ್ರ, ಮಾರಕಾಸ್ತ್ರಗಳ ಬಳಕೆ ನಿಷೇಧ*

ಮೈಸೂರು ಮಾ.18- ಲೋಕಸಭೆ ಚುನಾವಣೆ-2024 ರ ಸಂಬoಧ ಮಾ.16 ರಿಂದ ಜೂ.06 ರವರೆಗೆ ಮೈಸೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳು ಹಾಗೂ ಮಾರಕಾಸ್ತ್ರಗಳನ್ನು ಸಂಚರಿಸುವುದನ್ನು ಅಥವಾ ಹಿಡಿದುಕೊಂಡು ಓಡಾಡುವುದನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತರಾದ ರಮೇಶ್.ಬಿ ಅವರು ಆದೇಶಿಸಿದ್ದಾರೆ.

ಆಯುಧ ರಹದಾರಿ ಹೊಂದಿರುವ ಪರವಾನಗಿದಾರರು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಶಸ್ತ್ರಾಸ್ತ್ರ, ಸಂಬoಧಪಟ್ಟ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡಲು ಆದೇಶಿಸಲಾಗಿದ್ದು, ಬ್ಯಾಂಕ್ ಸೆಕ್ಯೂರಿಟಿ ಅಥವಾ ಸಂಸ್ಥೆಗಳ ಭದ್ರತೆ ಅಥವಾ ಗನ್ ಮ್ಯಾನ್ ಮುಂತಾದ ಅತ್ಯವಶ್ಯಕ ಕಾರಣದಿಂದಾಗಿ ಆಯುಧ ಠೇವಣಿಯಿಂದ ವಿನಾಯಿತಿ ಅವಶ್ಯಕವಿದ್ದಲ್ಲಿ ಸಕಾಲದಲ್ಲಿ ಲಿಖಿತ ರೂಪದಲ್ಲಿ ಅರ್ಜಿಯನ್ನು ಸಲ್ಲಿಸಲು ಸೂಚಿಸಲಾಗಿದ್ದು, ಸ್ಕ್ರೀನಿಂಗ್ ಕಮಿಟಿಯ ಪರಿಶೀಲನೆಗೊಳಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತರಾದ ರಮೇಶ್.ಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share