ಮೈಸೂರು-1440 ಗುಂಪು ಮನೆಗಳಿಗೆ ಶಂಕುಸ್ಥಾಪನೆ

107
Share

 ಮೈಸೂರು-ಕೃಷ್ಣ ರಾಜ ಕ್ಷೇತ್ರ ವ್ಯಾಪ್ತಿಯ ಫಲಾನುಭವಿಗಳಿಗಾಗಿ 1440 ಗುಂಪು ಮನೆಗಳಿಗಾಗಿ ಲಲಿತಾದ್ರಿಪುರ ಗ್ರಾಮದಲ್ಲಿ ಶಂಕುಸ್ಠಾಪನೆ ನೇರವೇರಿದ್ದು 10 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಯೋಜನೆಗೆ ಶಾಸಕರಾದ ಶ್ರಿವತ್ಸರವರ ಸತತ ಪರಿಶ್ರಮದಿಂದಾಗಿ ಯೋಜನೆಗೆ ಚಾಲನೆ ದೊರೆತಂತಾಗಿದೆ.
ಈ ಯೋಜನೆಯ ಪಲಾನುಭವಿಗಳು ಕೃಷ್ಣರಾಜ ಕ್ಷೇತ್ರದವರಾಗಿದ್ದರು, ಯೋಜನೆ ಕಾರ್ಯರೂಪಕ್ಕೆ ಬರುತ್ತಿರುವುದು ಪಕ್ಕದ ವರುಣ ಕ್ಷೇತ್ರಕ್ಕೆ ಸೇರಿದ ಲಲಿತಾದ್ರಿಪುರ ಗ್ರಾಮಕ್ಕೆ ಸೇರಿದ ಜಮೀನಿನಲ್ಲಿ.  ವರುಣ ಕ್ಷೇತ್ರದ ಶಾಸಕರಾಗಿದ್ದ ಶ್ರೀ  ಯತೀಂದ್ರರವರು ತಕರಾರು ತೆಗೆದಿದ್ದರಿಂದ ಯೋಜನೆ ಸ್ಥಗಿತ ಗೊಂಡಿತ್ತು.
ನಂತರ ಮತ್ತೆ ಕಳೆದ ವರ್ಷ ಮತ್ತೆ ಅಂದಿನ ಮುಖ್ಯ ಮಂತ್ರಿಗಳಾಗಿದ್ದ ಬೊಮ್ಮಾಯಿಯವರು ಶಂಕುಸ್ಥಾಪನೆ ಮಾಡಿದ್ದರೂ ಯೋಜನೆಗೆ ಚಾಲನೆ ನೀಡಿರಲಿಲ್ಲ. ಶಾಸಕರಾದ ಶ್ರಿವತ್ಸರವರು ಈ ಯೋಜನೆಗೆ ಒಂದು ಕಾಯಕಲ್ಪ ನೀಡಲು ಸಂಕಲ್ಪ ಮಾಡಿ ಕೆಡಿಪಿ ಸಭೆಯಲ್ಲಿ  ಶ್ರೀ  ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ  ಎರಡೂ ಕ್ಷೇತ್ರಗಳ ಬಡವರಿಗೆ ಅನುಕೂಲವಾಗುವಂತೆ ಕೃಷ್ಣರಾಜ ಕ್ಷೇತ್ರಕ್ಕೆ 940 ಮನೆಗಳು ಮತ್ತು 500 ಮನೆಗಳು ವರುಣ ಕ್ಷೇತ್ರಕ್ಕೆ ಎಂದು ರಾಜಿ ಸೂತ್ರದ ಅಡಿಯಲ್ಲಿ ಸತತವಾಗಿ ಮಾಡಿದ ಪ್ರಯತ್ನ ದ ಫಲದಿಂದ ಶಂಕು ಸ್ಥಾಪನೆ ನೇರವೇರಿಸಲಯಿತು.


Share