ವಸತಿ ಸಚಿವರಾದ ಮೈಸೂರು ಜಿಲ್ಲಾ ಪ್ರವಾಸ

115
Share

 

*ವಸತಿ ಸಚಿವರಾದ ಮೈಸೂರು ಜಿಲ್ಲಾ ಪ್ರವಾಸ*

ಮೈಸೂರು. – ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ದಿಯ ಸಚಿವರಾದ ವಿ.ಸೋಮಣ್ಣ ಅವರು 2022ರ ಜುಲೈ 23 ರಂದು ಶನಿವಾರ ಮೈಸೂರು ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

2022ರ ಜುಲೈ 23 ರಂದು ಶನಿವಾರ ಸಂಜೆ 4 ಗಂಟೆಗೆ ಮೈಸೂರು ಏರ್‌ಪೋರ್ಟ್ ಹಿಂಭಾಗ, ಮಂಡಕಳ್ಳಿ ದಡದಹಳ್ಳಿ ರಸ್ತೆ, ಮೈಸೂರು ಇಲ್ಲಿ ವಸತಿ ಇಲಾಖಾ ವ್ಯಾಪ್ತಿಯ ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ಪ್ರಧಾನ ಮಂತ್ರಿ ಅವಾಸ್ “ಯೋಜನೆ-ಸರ್ವರಿಗೂ ಸೂರು” ಯೋಜನೆಯಡಿ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಮಂಡಕಳ್ಳಿಯಲ್ಲಿ 2446 ಮನೆಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.


Share