ಶ್ರೀ ಆಂಜನೇಯ ಚರಿತ್ರೆ ಭಾಗ – 1: ಪುಟ – 11

266
Share

 ಆಂಜನೇಶ್ರೀಯ ಚರಿತ್ರೆ ಭಾಗ – 1 : ಪುಟ – 11

ಓಂ ನಮೋ ಹನುಮತೇ ನಮಃ

95) ಈ ಕಥೆಯು ವಾಲ್ಮೀಕಿ ರಾಮಾಯಣದಲ್ಲಿ ಬಾಲಕಾಂಡದಲ್ಲಿ (ಸ್ವಲ್ಪ ಬದಲಾವಣೆಯಾಗಿ) ಇದೆ. ಈಗ ನಾವು ಪರಾಶರ ಸಂಹಿತೆಯು ಆಧಾರದ ಮೇಲೆ ಈ ಕಥೆಯನ್ನು ಹೇಳುತ್ತಿದ್ದೇವೆ.
96) ಗೌತಮನು ತನ್ನ ಭಾರ್ಯೆಗೆ ಶಿಲೆಯಾಗಿ ಹೋಗುವಂತೆ ಶಪಿಸಿದನು. ಶಿಲೆಯಾಗಿ, ಮುಂದೆ ಅವತಾರ ಎತ್ತಲಿರುವ ಶ್ರೀರಾಮನನ್ನು ಧ್ಯಾನಿಸುತ್ತಾ ಇರುವಂತೆ ಹೇಳಿ, ರಾಮಮಾತಚರ ಮಂತ್ರವನ್ನು ಉಪದೇಶಿಸಿದನು. ಅವಳು ಶಿಲೆಯಾಗಿ, ಒಳಗೊಳಗೇ ಆ ಮಂತ್ರವನ್ನು ಜಪಿಸುತ್ತಿದ್ದಳು.
ಅಂಜನಾ ಕೋತಿಯಾಗಿದ್ದು
97) ಅಹಲ್ಯೆಯು ಶಿಲೆಯಾದಾಗಿನಿಂದ, ಗೌತಮನಿಗೆ ಮನೆಯಲ್ಲಿ ಹೆಣ್ಣುದಿಕ್ಕಿಲ್ಲದೆ, ಮಕ್ಕಳನ್ನು ಪೋಷಿಸುವುದು ಕಷ್ಟವಾಯಿತು.
98) ಇದಕ್ಕೇ ಕಂಗಾಲಾಗಿದ್ದ ಗೌತಮನಿಗೆ ಇನ್ನೊಂದು ಆಪತ್ತು ಎದುರಾಯಿತು.
99) ಶಾಪಗಳ ಸುರಿಮಳೆಯನ್ನು ನೋಡಿದ ವಾಲಿ ಸುಗ್ರೀವರು ಮನೆ ಬಿಟ್ಟು ಓಡಿಹೋದರು. ಗೌತಮನಿಗೆ ಕಾಣಿಸದಂತೆ ಅಡವಿಯಲ್ಲಿ ತಿರುಗಾಡಿಕೊಂಡಿದ್ದರು.
100) ವಾಲಿಯು ಒಂದುಸಾರಿ ಅಂಜನಳನ್ನು ನೋಡಿ, “ನಿನ್ನಿಂದಲೇ ಇದೆಲ್ಲಾ ಆಗಿದ್ದು. ನೀನೂ ಸಹ ನಮ್ಮಂತೆ ಕೋತಿಯಾಗಿ ಹೋಗು” ಎಂದು ಶಾಪಕೊಟ್ಟನು.
101) ಆ ಕೋತಿಮಾತಿಗೆ ಅದೆಷ್ಟು ಶಕ್ತಿಯೋ ಏನೋ, ಅಂಜನಳು ತತ್ ಕ್ಷಣದಲ್ಲೇ ಕೋತಿಯಾಗಿ ಹೋದಳು.
102) ಇದನ್ನು ನೋಡಿದ ಗೌತಮನಿಗೆ ಇನ್ನಷ್ಟು ದಿಗಿಲಾಯಿತು.
103) ಹೀಗಿರುವಾಗ ಒಮ್ಮೆ ನಾರದ ಮಹರ್ಷಿ ಅವರ ಮನೆಗೆ ಬಂದ. ಗೌತಮನು ತನ್ನ ಕಷ್ಟವನ್ನು ನಾರದನಲ್ಲಿ ಹೇಳಿಕೊಂಡ.
104) ಆಗ ನಾರದ ಮಹರ್ಷಿ ಹೀಗೆ ಹೇಳಿದ –

(a) ಮನೆಯಾಕೆಯೇ ಇಲ್ಲದೆ ನೀನೇನು ಮನೆ ಸಾಗಿಸುತೀಯೆ?
(b) ಮೂರು ಹೊತ್ತೂ ಮೂಗು ಹಿಡಿದುಕೊಂಡು ಕೂತಿರುವವನಿಗೆ ಮಕ್ಕಳನ್ನು ಬೆಳೆಸಲು ಆಗುವುದೇ?
(c) ಮೇಲಾಗಿ ವಯಸ್ಸಿಗೆ ಬಂದಿರುವ ಕೋತಿಮಗಳು! ಇವಳಿಗೆ ಹೇಗೆ ಮದುವೆ ಮಾಡುವೆ?
(d) ಆದರೂ ಭಯಪಡಬೇಡ.
(e) ನಿನ್ನ ಮಗ ಶತಾನಂದನನ್ನು ಜನಕ ಮಹಾರಾಜನ ಸಭೆಗೆ ಕಳಿಸಿಕೊಡು. ಅವನು ಅಲ್ಲೇ ವಿದ್ಯಾಭ್ಯಾಸ ಮಾಡಿ, ಅಲ್ಲೇ ಆಸ್ಥಾನ ಪಂಡಿತನಾಗುತ್ತಾನೆ.
(f) ಇನ್ನು ಈ ಕೋತಿ ಮಗಳಿದ್ದಾಳಲ್ಲಾ, ಅವಳನ್ನು ಕುಂಜರನೆಂಬ ರಾಜನಿಗೆ ದತ್ತುಕೊಟ್ಟುಬಿಡು.
(g) ಕುಂಜರನಿಗೆ ಒಳ್ಳೆಯ ಹೆಣ್ಣುಮಗಳನ್ನು ದತ್ತು ಕೊಡಿಸುತ್ತೇನೆಂದು ಶಿವನು ವರಕೊಟ್ಟಿದ್ದಾನೆ.
(9) ಆದ್ದರಿಂದ, ನೀನು ಇವಳನ್ನು ಕುಂಜರನಿಗೆ ದತ್ತುಪುತ್ರಿಯಾಗಿ ಕೊಟ್ಟರೆ, ಅವನೇ ಒಬ್ಬ ಒಳ್ಳೆಯ ಕಪಿರಾಜನನ್ನು ನೋಡಿ ಮದುವೆ ಮಾಡುತ್ತಾನೆ. ನಿನ್ನ ಚಿಂತೆ ಕಡಿಮೆ ಆಗುತ್ತದೆ.
(h) ಅಷ್ಟೇ ಅಲ್ಲ, ಈ ನಿನ್ನ ಮಗಳಿಂದ ನಿನ್ನ ವಂಶ ಉದ್ಧಾರವಾಗುತ್ತದೆ.
(i) ನೀನು ತಪಸ್ಸು ಮಾಡಿಕೊಂಡಿರು. ನಿನ್ನ ಕೈಲಾಗುವುದು ಅದೊಂದೆತಾನೆ!
(j) ಶ್ರೀರಾಮ ಚಂದ್ರನ ದರ್ಶನ ಆದ ನಂತರ ನಿನ್ನ ಸಂಸಾರವು ಪುನಃ ಉಲ್ಲಾಸಮಯವಾಗುತ್ತದೆ.
( ಮುಂದುವರೆಯುವುದು )

* ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share