ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 17

316
Share

ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 17
ಓಂ ನಮೋ ಹನುಮತೇ ನಮಃ

ವಾಯುದೇವನ ಆಗ್ರಹ
161) ದೇವೇಂದ್ರನ ಚರ್ಯೆಯನ್ನು ಆಗಿಂದಲೂ ಗಮನಿಸುತ್ತಿದ್ದ ವಾಯುದೇವನಿಗೆ, ತನ್ನ ಮಗ ಪ್ರಜ್ಞೆ ತಪ್ಪಿದ್ದು ನೋಡಿ ಕೋಪ ನೆತ್ತಿಗೇರಿತು.
162) ಬೆಟ್ಟದ ಮೇಲೆ ಬಿದ್ದಿದ್ದ
ಆ ಮಗುವನ್ನು ಎತ್ತಿಕೊಂಡು ಹತ್ತಿರದಲ್ಲೇ ಇದ್ದ ಗುಹೆಯೊಳಗೆ ಹೋಗಿ ಅವಿತುಕೊಂಡು ಕುಳಿತ. ಯಾವಾಗ ವಾಯುದೇವ ಗುಹೆಯೊಳಗೆ ತನ್ನನ್ನು ತಾನೇ ದಿಗ್ಭಂಧನ ಮಾಡಿಕೊಂಡನೋ, ಇಡೀ ಲೋಕದಲ್ಲಿ ವಾಯುವಿನ ಸಂಚಾರವೇ ಇಲ್ಲದಂತೆ ಆಯಿತು.
163) ವಾಯುವಿನ ಸಂಚಾರ ಇಲ್ಲದೇ ಹೋಗಿ, ಮೂರು ಲೋಕದ ಜೀವಿಗಳಿಗೂ ಬಹಳ ಪ್ರಯಾಸವಾಯಿತು. ಯಾವ ಇಂದ್ರಿಯಗಳೂ ಕೆಲಸ ಮಾಡುತ್ತಿಲ್ಲ. ಯಾವ ನಾಡಿಗಳೂ ಸ್ಪಂದಿಸುತ್ತಿಲ್ಲ.
164) ‘ವಾಯು’ ಅಂದರೆ ಗಿಡಮರಗಳನ್ನು ಕದಲಿಸುವ ಗಾಳಿ ಅಂತ ಅಂದುಕೊಂಡಿದ್ದೀವಿ. ವಾಸ್ತವದಲ್ಲಿ ‘ಗಾಳಿ’ಯು ವಾಯುದೇವನ ರೂಪಗಳ ಪೈಕಿ ಒಂದು ರೂಪ ಅಷ್ಟೆ. ಪ್ರಪಂಚದಲ್ಲಿ ಚಲನೆಯನ್ನು ಉಂಟುಮಾಡುವ ಶಕ್ತಿಯ ಹೆಸರು ವಾಯು. ಮಾನವ ಶರೀರದಲ್ಲಿ ಅಂತರ್ಗತವಾದ ನಾಡಿಗಳು ಮೊದಲಾದವುಗಳಲ್ಲಿ ಚಲನೆ-ಸ್ಪಂದನಗಳು ಉಂಟಾಗಬೇಕಾದರೆ ಅದರ ಹಿಂದೆ ಇರುವ ಶಕ್ತಿಯೇ ವಾಯು. ಇದನ್ನೇ ಆಯುರ್ವೇದದವರು ‘ವಾತ’ ಅನ್ನುತ್ತಾರೆ
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಹಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share