ಶ್ರೀ ಆಂಜನೇಯ ಚರಿತ್ರೆ – ಭಾಗ 1: ಪುಟ – 12

262
Share

 ಆಂಜನೇಯ ಚರಿತ್ರೆ – ಭಾಗ 1: ಪುಟ – 12
ಓಂಶ್ರೀ ನಮೋ ಹನುಮತೇ ನಮಃ

105) ಗೌತಮನು ನಾರದ ಹೇಳಿದ್ದನ್ನು ಚಾಚೂ ತಪ್ಪದೆ ಮಾಡಿದ.
106) ಆದರೂ, ಆಗತಾನೆ ಕೋತಿಯಾಗಿ ಪರಿವರ್ತನೆ ಆಗಿದ್ದ ಅಂಜನಾದೇವಿ ತಾನು ಕಪಿರಾಜನ ಮನೆಗೆ ದತ್ತುಪುತ್ರಿಯಾಗಿ ಹೋಗಬೇಕಾಗಿ ಬಂದಿದ್ದರ ಬಗ್ಗೆ ತುಂಬಾ ಬಾಧೆ ಪಟ್ಟಳು. ಅವಳಿಗೆ ಮುಂಚೆ ಇದ್ದ ಸೌಂದರ್ಯದ ಗರ್ವವೂ ಸಹ
ಈ ಏಟಿನಿಂದ ಇಳಿದು ಹೋಯಿತು.
107) ಮದುಮಗಳು ವಿಕಾರ ರೂಪಿಣಿಯಾಗಿ ರೋದಿಸುತ್ತಿದ್ದಳು. ತಂದೆಯಾದ ಗೌತಮನ ಹೃದಯ ಕರಗಿತು. ಅವನು ತನ್ನ ದಿವ್ಯದೃಷ್ಟಿಯಿಂದ ಅವಳ ಪೂರ್ವಜನ್ಮ ಚರಿತ್ರೆ ಏನೆಂದು ನೋಡಿ, ಹೀಗೆ ಸಂತೈಸಿದನು –
“ನೋಡಮ್ಮಾ ಅಂಜನಾ! ಅಳಬೇಡ. ನೀನು “ರಥಂತರ” ಕಲ್ಪದಲ್ಲಿ ಸುಕನ್ಯ ಎಂಬ ಗಂಧರ್ವಕನ್ಯೆ ಆಗಿದ್ದೆ. ಆಗ ನೀನು ವಾಯುದೇವನ ಶಾಪಕ್ಕೆ ಒಳಗಾಗಿದ್ದೆ.
ಆ ನಂತರದ ಜನ್ಮದಲ್ಲಿ ಬ್ರಾಹ್ಮಣ ಪತ್ನಿಯಾಗಿ ಜನಿಸಿ, ಅಪಾರವಾದ ತಪಶ್ಶಕ್ತಿಯನ್ನು ಸಂಪಾದಿಸಿದೆ. ಹಾಗಾಗಿ,
ಈ ಜನ್ಮದಲ್ಲಿ ವಾಯುದೇವನ ಶಾಪವನ್ನು ನೀನು ಅನುಭವಿಸಬೇಕಾಗಿದೆ. ಇನ್ನು
ಈ ಜನ್ಮದಲ್ಲೇ ನೀನು ತಪಸ್ಸು ಮಾಡಿ ಶಿವನಿಂದ ವರಗಳನ್ನು ಪಡೆಯಬೇಕಾಗಿದೆ. ನಿನಗೆ ಒಳ್ಳೆಯದೇ ಆಗುತ್ತದೆ. ನೀನು ಜಗತ್ ಪೂಜ್ಯಳಾಗುತ್ತೀಯೆ. ದುಃಖವನ್ನು ತಡೆದುಕೋ. ದೈವಯೋಗಕ್ಕೆ ಅನುಗುಣವಾಗಿ ಇರುವುದನ್ನು ಕಲಿ. ಜೀವಿಗಳಿಗೆ ಅದೇ ಉತ್ತಮ ಕರ್ತವ್ಯ. ಅದೇ ಎಲ್ಲಾ ತಪಸ್ಸುಗಳಿಗಿಂತ ಮಿಗಿಲಾದ ಸಾಧನೆ”
108) ಈ ಉಪದೇಶದಿಂದ ಅಂಜನ ಶಾಂತಳಾದಳು. ವಾನರರ ಮನೆ ಸೇರಿ, ಮೆಲ್ಲನೆ ವಾನರ ಜೀವನದಲ್ಲಿ ಬೆರೆತು ಹೋದಳು.
( ಮುಂದುವರೆಯುವುದು )

* ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share