ಶ್ರೀ ಆಂಜನೇಯ ಚರಿತ್ರೆ : ಭಾಗ 1, ಪುಟ – 6

300
Share

ಶ್ರೀ ಆಂಜನೇಯ ಚರಿತ್ರೆ : ಭಾಗ – 1, ಪುಟ : 6

ಓಂ  ನಮೋ ಹುನುಮತೇ ನಮಃ

41) ನಾರಾಯಣ ಮಹರ್ಷಿಯು ಶಿವನತ್ತ ನೋಡಿ, ಅದು ನಿನ್ನಿಂದಲೇ ಆಗಬೇಕಯ್ಯಾ! ಎಂದ.
42) ಹಾಗೆ ಹೇಳುತ್ತಲೇ ಬ್ರಹ್ಮನಿಂದ, ಇತರ ದೇವತೆಗಳಿಂದ ಒಬ್ಬೊಬ್ಬರಿಂದ ಸ್ವಲ್ಪ ಸ್ವಲ್ಪವಾಗಿ ದಿವ್ಯ ತೇಜಸ್ಸನ್ನು ಆಕರ್ಷಣೆ ಮಾಡಿ, ಶಿವನ ಕೈಯಲ್ಲಿರಿಸಿದ.
43) ‘ಇದೇನು?’ ಎಂದು ಕೇಳದೇ ಶಿವನು ಅದನ್ನು ನುಂಗಿಬಿಟ್ಟ.
44) ಅದನ್ನು ನೋಡಿದ ನಾರಾಯಣ ಮಹರ್ಷಿಯು ಸಂತೋಷಗೊಂಡು, “ದೇವತೆಗಳೇ! ನಿಮ್ಮ ಕೋರಿಕೆ ಶೀಘ್ರದಲ್ಲೇ ತೀರುತ್ತದೆ. ಸಮಸ್ತ ದೇವತಾ ಶಕ್ತಿಗಳೊಡನೆ ಕೂಡಿದ ವಾನರನು ಶಿವನ ಮಗನಾಗಿ ಹುಟ್ಟುತ್ತಾನೆ. ಅವನ ಮೂಲಕ ನೀವು ಅಪೇಕ್ಷಿಸಿದ ರಾಕ್ಷಸ ಸಂಹಾರ ನಡೆಯುತ್ತದೆ. ನಿಶ್ಚಿಂತೆಯಿಂದ ಇರಿ” ಎಂದು ಹೇಳಿ ಕಳಿಸಿದ.
45) ಸ್ವಲ್ಪ ಸಮಯದ ನಂತರ ಶಿವ ಪಾರ್ವತಿಯರು ವೃಷಭ ಶೈಲದ ಮೇಲೆ, ಅಂದರೆ ಇಂದಿನ ತಿರುಪತಿ ಬೆಟ್ಟದ ಮೇಲೆ ವಿಹಾರ ಮಾಡುತ್ತಿದ್ದರು.
46) ಆ ಕಾಲದಲ್ಲೂ ಆ ಬೆಟ್ಟದ ಮೇಲೆ ಕೋತಿಗಳು ಹೆಚ್ಚಾಗಿ ಇರುತ್ತಿದ್ದವು. ಅಲ್ಲಿ ಒಂದು ವಾನರ ಜೋಡಿಯನ್ನು ನೋಡಿ ಪಾರ್ವತೀ ಪರಮೇಶ್ವರು ಮೆಚ್ಚಿಕೊಂಡು ತಾವೂ ವಾನರ ಜೋಡಿಗಳಾಗಿ ಬದಲಾದರು.
47) ಅದೇ ವೇಳೆಗೆ ಈಶ್ವರನಲ್ಲಿ ಹುದುಗಿದ್ದ ಸರ್ವದೇವತಾ ತೇಜಸ್ಸು ಹೊರಗೆ ಬಂದಿತು. ಆ ತೇಜಸ್ಸನ್ನು ಭರಿಸುವುದು ಪಾರ್ವತಿ ದೇವಿಗೆ ಬಹಳ ಕಷ್ಟವಾಯಿತು.

ಶಿವನ ತೇಜಸ್ಸು ಅಗ್ನಿಗೂ ವಾಯುವಿಗೂ ಸಂಕ್ರಮಿಸಿತ್ತು.
48) ಆದ್ದರಿಂದ ಅವಳು ಆ ತೇಜಸ್ಸನ್ನು ಮಹಾಶಕ್ತಿಶಾಲಿಯಾದ ಅಗ್ನಿದೇವನೊಳಗೆ ಇರಿಸಿದಳು.

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share