ಶ್ರೀ ಆಂಜನೇಯ ಚರಿತ್ರೆ : ಭಾಗ 1, ಪುಟ – 10

257
Share

ಶ್ರೀ ಆಂಜನೇಯ ಚರಿತ್ರೆ : ಭಾಗ 1, ಪುಟ – 10

ಓಂ ನಮೋ ಹನುಮತೇ ನಮಃ
80) ಕುಂಜರನೆಂಬ ವಾನರ ವೀರ ಇದ್ದ. ಅವನ ಹೆಂಡತಿಯ ಹೆಸರು ವಿಂಧ್ಯಾವಳಿ. ಅವರಿಗೆ ಸಂತಾನ ವಿರಲಿಲ್ಲ. ಸಂತಾನಾರ್ಥ ಅವರು ಶಿವನನ್ನು ಕುರಿತು ತಪಸ್ಸನ್ನಾರಂಭಿಸಿದರು.
81) ಶಿವನು ಪ್ರತ್ಯಕ್ಷನಾಗಿ, “ನಿನಗೆ ಸಂತಾನ ಯೋಗ ಇಲ್ಲಪ್ಪಾ, ಆದರೂ ಬಾಧೆ ಪಡಬೇಡ. ಒಂದು ಒಳ್ಳೆಯ ಹೆಣ್ಣುಮಗುವನ್ನು ದತ್ತುವಾಗಿ ಕೊಡಿಸುತ್ತೇನೆ. ಆ ಮಗುವಿಂದ ನಿನಗೆ ಒಳ್ಳೆಯ ಕೀರ್ತಿ ಉಂಟಾಗುತ್ತಿದೆ “ಎಂದಷ್ಟೇ ಹೇಳಿದ. ಹೆಚ್ಚಿನ ವಿವರಗಳನ್ನು ಕೊಡಲಿಲ್ಲ.
ಗೌತಮನ ಸಂಸಾರ
82) ಇದು ಹೀಗಿರುವಾಗ, ಅಹಲ್ಯಾ – ಗೌತಮದಂಪತಿಗಳಿಗೆ ಆಗಲೇ ಇಬ್ಬರು ಮಕ್ಕಳಿದ್ದರು – ಶತಾನಂದನೆಂಬ ಮಗ, ಅಂಜನಾ ಎಂಬ ಮಗಳು. (ಗಂಧರ್ವಕನ್ಯೆಯಾದ ಸುಕನ್ಯೆ ಮೊದಲು ಸಾಧ್ಯಾದೇವಿಯಾಗಿಯೂ ಈಗ ಅಂಜನಾದೇವಿಯಾಗಿಯೂ ಜನ್ಮತಾಳಿದಳು)
83) ಗೌತಮ ಮಹರ್ಷಿ ದೀರ್ಘ ಸಮಾಧಿಯಲ್ಲಿದ್ದ.
84) ಅವನ ಧರ್ಮಪತ್ನಿಯಾದ ಅಹಲ್ಯೆ ಬ್ರಹ್ಮ ಮಾನಸಪುತ್ರಿ. ಅವಳ ಸೃಷ್ಟಿಯಾದ ಸಮಯದಲ್ಲೇ ಅವಳ ಸೌಂದರ್ಯಕ್ಕೆ ಮೆಚ್ಚಿ ಇಂದ್ರ, ಸೂರ್ಯರು ಸ್ವಲ್ಪ ಆಸೆಪಟ್ಟಿದ್ದರು.
85) ಆದರೆ ಬ್ರಹ್ಮದೇವನು ಯಾಕೋ ಏನೋ, ಅವಳನ್ನು ಗೌತಮ ಮಹರ್ಷಿಗೆ ಕೊಟ್ಟು ಮದುವೆ ಮಾಡಿದನು.
86) ಈಗ ಗೌತಮನು ದೀರ್ಘ ಸಮಾಧಿಯಲ್ಲಿ ಇದ್ದ. ಇಂದ್ರನಿಗೆ ಹಳೆಯ ಆಸೆ ಪುನಃ ಕಾಡಲು ಶುರುಮಾಡಿತು. ಗೌತಮನ ರೂಪ ಧರಿಸಿ ಅಹಲ್ಯೆಯನ್ನು ಸೇರಿಕೊಂಡ.
87) ಬಂದಿರುವುದು ಇಂದ್ರ ಎಂದು ಅಹಲ್ಯಾದೇವಿ ಗುರ್ತಿಸಿದಳು. ಆದರೂ ದೇವರಾಜನೆಂಬ ಮೋಹದಿಂದ ತಪ್ಪು ಮಾಡಿದಳು.
88) ಅದರಿಂದಾಗಿ ಅವಳಿಗೆ ಸದ್ಯೋಗರ್ಭದಿಂದ ವಾಲಿ ಎಂಬ ಮಗ ಹುಟ್ಟಿದನು. ಆದರೆ ಅವನು ವಿಚಿತ್ರವಾಗಿ ವಾನರಾಕಾರದಲ್ಲಿ ಇದ್ದ.
89) ಇದನ್ನು ಗಮನಿಸಿದ ಸೂರ್ಯದೇವನೂ ಅಹಲ್ಯೆಯ ಬಳಿ ಬಂದನು.
90) ಅವಳು ಪುನಃ ಮೋಹಕ್ಕೊಳಗಾದಳು.
91) ಅವರಿಗೆ ಸುಗ್ರೀವನೆಂಬ ವಾನರ ಹುಟ್ಟಿದ.
92) ತಪಸ್ಸಮಾಧಿಯಿಂದ ಬಹಿರ್ಮುಖನಾಗಿ ಮನೆಗೆ ಬಂದ ಗೌತಮ ಮುನಿಗೆ ಮನೆಯಲ್ಲಿ ಎರಡು ಕಪಿಗಳು ಕಾಣಿಸಿದವು. ಇದು ಯಾರು ಎಂದು ಕೂಗಾಡಿದನು.
93) ಆಗತಾನೇ ವಯಸ್ಸಿಗೆ ಬರುತ್ತಿದ್ದ ಅಂಜನ, ತಾಯಿಯು ಮನೆಯಲ್ಲಿ ಇಲ್ಲದ ಸಮಯ ನೋಡಿ, ಈ ಕೋತಿಗಳು ಇಂದ್ರ, ಸೂರ್ಯರ ಮಕ್ಕಳೆಂದು ಹೇಳಿದಳು.
94) ಗೌತಮ ಮಹರ್ಷಿಯು ದಿವ್ಯದೃಷ್ಟಿಯಿಂದ ನೋಡಿ, ಅದು ನಿಜ ಎಂದು ಖಾತ್ರಿಪಡಿಸಿಕೊಂಡು, ಇಂದ್ರ, ಸೂರ್ಯ ಮತ್ತು ಅಹಲ್ಯೆಯರಿಗೆ ಘೋರ ಶಾಪ ಕೊಟ್ಟನು.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share