ಸಂಪಾದಕೀಯ;ಡಾ. ಮಂಜುನಾಥ್ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ಸರಿಯಿಲ್ಲ

82
Share

ಸಾರ್ವತ್ರಿಕ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಕರ್ನಾಟಕದಲ್ಲಂತೂ ಎಲ್ಲರ ಗಮನ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಡೆಗಿದೆ. ಒಂದೆಡೆ ರಾಜ್ಯದ ಉಪ ಮುಖ್ಯಮಂತ್ರಿ ಜನಪ್ರಿಯ ನಾಯಕ ಡಿ ಕೆ ಶಿವಕುಮಾರ್ ಸಹೋದರ ಡಿ ಕೆ ಸುರೇಶ್ ರವರು ಎದುರಿಸುತ್ತಿರುವುದು ಸಾವಿರಾರು ಜನರ ಜೀವ ಉಳಿಸಿಕೊಟ್ಟ ಖ್ಯಾತ ಹೃದಯ ತಜ್ಞರಾದ ಡಾಕ್ಟರ್ ಮಂಜುನಾಥ್ .
ಜನರು ಯಾರ ಕೈ ಹಿಡಿಯುತ್ತಾರೆ ಎನ್ನುವುದು ಒಂದೆಡೆ.
ಇನ್ನೊಂದೆಡೆ ಸಾವಿರಾರು ಜನರ ಜೀವನ ಉಳಿಸಿದ ಡಾಕ್ಟರ್ ಮಂಜುನಾಥ್ ಅವರ ರಾಜಕೀಯ ಪ್ರವೇಶ .
ಮೃದು ಭಾಷಿ, ಉದಾರ ಹೃದಯ ಹೊಂದಿರುವ, ಪರಿಣಿತ ವೈದ್ಯ , ಸಂತೋಷ ಹಾಗೂ ತೃಪ್ತಿ ಹೊಂದಿದ ವೃತ್ತಿ ಜೀವನ, ದೇವೆಗೌಡರ ಅಳಿಯ ಎನ್ನುವುದಕ್ಕಿಂತ ಖ್ಯಾತ ತಜ್ಞರೆಂದೇ ಪ್ರಖ್ಯಾತ ಹೊಂದಿರುವ ಡಾಕ್ಟರ್ ಮಂಜುನಾಥ್ ರಾಜಕೀಯ ಪ್ರವೇಶದ ಉದ್ದೇಶವೇನು ?
ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ನಿರ್ಧರಿಸಿದ ಮೇಲೆ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಅದರಲ್ಲಿ ಅವರು ಹೇಳಿದ್ದಾರೆ ಒಬ್ಬ ಸಂಸದನ ಕರ್ತವ್ಯಗಳು ತನ್ನ ಕ್ಷೇತ್ರದ ಅಭಿವೃದ್ಧಿ , ರಾಜ್ಯ ಹಾಗೂ ದೇಶದ ಅಭಿವೃದ್ಧಿಯಲ್ಲಿ ಜವಾಬ್ದಾರಿ ಇರುವ ಸ್ಥಾನ ಎಂದು. ಆದರೆ ಅವರ ಮುಂದಿನ ಹೆಜ್ಜೆಗಳ ಬಗ್ಗೆ ತಿಳಿಸುತ್ತ ಅವರ ಕ್ಷೇತ್ರಕ್ಕೆ ಕುಡಿಯುವ ನೀರಿನ ಸೌಲಭ್ಯ, ಹೈವೇ ಟ್ರೌಮ ಸೆಂಟರ್, ರೇಶ್ಮೆ ನಿಗದಿತ ಬೆಲೆ ಇವುಗಳ ಸುಧಾರಣೆ ತರುವುದು ಅವರ ಆದ್ಯತೆ ಎಂದು ತಿಳಿಸಿದ್ದಾರೆ.
ಒಂದು ದೊಡ್ಡ ಸಂಸ್ಥೆಯ ನಿರ್ದೇಶಕರಾಗಿದ್ದವರು ಇದಿಷ್ಟಕ್ಕಾಗಿ ರಾಜಕೀಯ ಸೇರುವ ಅಗತ್ಯವಿತ್ತಾ ?
ತಾವು ನಿರ್ದೇಶಕರಾಗಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿ ಬಂದಿರುವುದಾಗಿಯೂ ಅದರಿಂದ ರಾಜಕೀಯ ಕ್ಲಿಷ್ಟಗಳನ್ನು ಎದುರಿಸಲು ತಾವು ಸನ್ಮದ್ದರಾಗಿರುವುದಾಗಿಯೂ ತಿಳಿಸಿದ್ದಾರೆ.
ಆದರೆ ಒಂದು ಸಂಸ್ಥೆಯ ನಿರ್ದೇಶಕರೆಂದರೆ ಆ ಸಂಸ್ಥೆಯ ಅತ್ಯುನ್ನತ ಪದವಿ. ಸಂಸದರೆಂದರೆ ಅದರಲ್ಲೂ ಬಿಜೆಪಿಯಂತಹ ಸದೃಢ ರಾಷ್ಟ್ರೀಯ ಪಕ್ಷ ಪ್ರತಿನಿಧಿಸುವುದೆಂದರೆ ಸಾಕಷ್ಟು ರಾಜ್ಯ ಹಾಗೂ ರಾಷ್ಟ್ರದ ನಾಯಕರಿಗೆ ಉತ್ತರಿಸ ಬೇಕಾಗುತ್ತದೆ ಹಾಗೂ ಮನ ಒಲಿಸ ಬೇಕಾಗುತ್ತದೆ.
ಇದರ ಅವಶ್ಯಕತೆ ಇತ್ತೆ ಪ್ರಖ್ಯಾತ ವೈದ್ಯರಿಗೆ ?
ಅವರ ರಾಜಕೀಯ ಪ್ರವೇಶಕ್ಕೆ ಯಾವುದೇ ಅನಿವಾರ್ಯತೆಯು ಕಾಣುತ್ತಿಲ್ಲ, ಇಲ್ಲ ಅವರಿಗೆ ರಾಜಕೀಯವಾಗಿ ಅತ್ಯುನ್ನತ ಪದವಿಗೇರುವ ಆಸೆಯೂ ಕಾಣುತ್ತಿಲ್ಲ. ಕೇವಲ ಕುಟುಂಬದವರ ಮಾತಿಗೆ ಕಟ್ಟು ಬಿದ್ದಷ್ಟೆ ರಾಜಕೀಯ ಪ್ರವೇಶಿಸಿದಂತಿದೆ. ಅದರಲ್ಲೂ ದೇವೆ ಗೌಡರಂತಹ ಹಿರಿಯರ ಮಾತಿಗೆ ಬೆಲೆ ಕೊಟ್ಟಿರುವಂತೆ ಕಾಣುತ್ತದೆ.
ಜನರ ಜೀವ ಉಳಿಸಿದ ವೈದ್ಯರ ಕೈ ಹಿಡಿಯುತ್ತಾರೋ ಅಥವ ಜೀವನ ಕಟ್ಟುತ್ತೇನೆ ಎನ್ನುವರ ಕೈ ಹಿಡಿಯುತ್ತಾರೋ ಕಾದು ನೋಡಬೇಕು. ಒಟ್ಟಿನಲ್ಲಿ ಡಾ.ಮಂಜುನಾಥ್ ಅವರು ರಾಜಕೀಯ ಪ್ರವೇಶ ಮಾಡಿರುವುದು ಸರಿ ಇಲ್ಲ ಎಂಬುದು ಬಹುತೇಕ ಸಾರ್ವಜನಿಕರ ಮತದಾರರ ಅಭಿಪ್ರಾಯ ಕೇಳಿ ಬರುತ್ತಿದೆ

 


Share