ಸಮಾಜದ ಸ್ವಾಸ್ತ್ಯ ಕಾಪಾಡುವ ಕವಿ : ಚನ್ನವೀರ ಕಣವಿ

259
Share

ಸಮಾಜದ ಸ್ವಾಸ್ಥ್ಯ ಕಾಪಾಡುವ ಒಳಿತಿಗಾಗಿ ಆನೇಕ ಕವಿತೆಗಳು ಕಾವ್ಯ ಲೇಖನ ಬರೆದಂತಹ ಕವಿವರ್ಯರಾದ ಚೆನ್ನವೀರ ಕಣವಿ:ಪ್ರಮೀಳಾ ಭರತ್*

ನಮ್ಮನ್ನು ಅಗಲಿದ ಶ್ರೇಷ್ಠಕವಿ ಮಹಾ ಶತಮಾನಗಳ ಕವಿಗಳಾದ ಚೆನ್ನವೀರ ಕಣಿವೆ ಅವರಿಗೆ ದೇವರಾಜ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಂದು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ
ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು ಎಂದರು ನಂತರ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ಎಂ ಪ್ರಮೀಳಾ ಭರತ್ ರವರು ಮಹಾ ಚೇತನ ಶತಾಯುಷಿ ಹತ್ತಿರದಲಿದ್ದಂತಹ ನಮ್ಮ ನಾಡಿನ ಕವಿಗಳು ಸಾಹಿತಿಗಳು ಲೇಖಕರು ಅದಂತಹ‌ಚನ್ನವೀರ ಕಣವಿಯವರ ಗುಣಗಾನವನ್ನು ಮಾಡಿದರು. ಅವರು ತಮ್ಮ ಬದುಕಿನಲ್ಲಿ ಅವರ ಅನುಭವದ ಭಾವನೆಗಳು ಬದುಕಿನೊಳಗಿನ ನಡೆಯುವ ಹಾಗೂ ಅವರ ಭಾವನೆ ಅಂತರಂಗದ ಸುಪ್ತ ಮನಸ್ಸಿನ ಒಳನೋಟ ತನದಲ್ಲಿ ಕಂಡಂತಹ ಕಾವ್ಯಗಳನ್ನು ಈ ನಾಡಿನ ಜನರಿಗೆ ಉತ್ತಮ ಬರಹದ ಮೂಲಕ ಈ ನಾಡಿಗೆ ಶ್ರೇಷ್ಠ ಕವಿತೆಗಳು ಮಕ್ಕಳ ಬಗ್ಗೆ ಪರಿಸರದ , ಸಮಾಜದ ಸ್ವಾಸ್ಥ್ಯ ಕಾಪಾಡುವ ಒಳಿತಿಗಾಗಿ ಆನೇಕ ಕವಿತೆಗಳು ಕಾವ್ಯ ಲೇಖನ ಬರೆದಂತಹ ಕವಿವರ್ಯರಾದ ಚೆನ್ನವೀರ ಕಣವಿ ನಮ್ಮನ್ನು ಬಿಟ್ಟು ಅಗಲಿರುವುದು ತುಂಬಲಾರದ ನಷ್ಟವೆಂದರು. ಇದೆ ಸಂದರ್ಭದಲ್ಲಿ ಕವಿಯವರಿಗೆ ಪುಷ್ಪಾರ್ಚನೆ ಮಾಡಿದ ಕಾಲೇಜಿನ ಪ್ರಾಂಶುಪಾಲ, ಹಾಗೂ ಕರ್ನಾಟಕ ರಾಜ್ಯ ಪಿ ಯು ಒಕ್ಕೂಟದ ರಾಜ್ಯಾಧ್ಯಕ್ಷ ಕಾಡ್ನೂರು ಶಿವೇಗೌಡ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ರಾಜಗೋಪಾಲ್ , ವಿಘ್ನೇಶ್ವರ ಭಟ್ಟ, ‌ಹಾಗೂ ಕಾಲೇಜಿನ ಉಪನ್ಯಾಸಕರಾದ , ನಾಗೇಶ ,ಜಗದೀಶ್ , ಭಾನು ಹಾಗೂ ಶ್ರೀಮತಿ ಚಂದ್ರಕಲಾ, ಶ್ರೀ ಪಾಪಣ್ಣ ಸುದರ್ಶನ್ ಸನಾತ , ಚರಣ ಮತ್ತು ವಿದ್ಯಾರ್ಥಿಗಳು ಇದ್ದರು.


Share