ಸುಮಲತಾ ಬಿಜೆಪಿ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿಗೆ ಬೆಂಬಲ ಘೋಷಣೆ

229
Share

ಸುಮಲತಾ ಅವರು ಬಿಜೆಪಿ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಯವರಿಗೆ ತಾವು ಬೆಂಬಲಿದುವುದಾಗಿ ತಮ್ಮ ನಿರ್ಧಾರ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಬೆಂಬಲಿಸುವುದಕ್ಕಾಗಿ ಮಾತ್ರ ಈ ನಿರ್ಧಾರ ಮಾಡಿರುವುದಾಗಿ ತಿಳಿಸಿದರು.

ಸುಮಲತಾ ಅಂಬರೀಶ್ ಇಂದು ಮಂಡ್ಯದ ಕಾಳಿಕಾಂಬ ಗುಡಿಗೆ ತೆರಳಿ ಪೂಜೆ ಸಲ್ಲಿಸಿ ತಮ್ಮ ರಾಜಕೀಯದ ಮುನ್ನಡೆಯ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸಿದ್ದಾರೆ. ಅವರೊಂದಿಗೆ ಅವರ ಪುತ್ರ ಅಭಿಷೇಕ್ ಹಾಗೂ ಚಿತ್ರನಟ ದರ್ಶನ್ ರವರು ಜೊತೆಗಿದ್ದರು.

ಸುಮಲತಾ ಅಂಬರೀಶ್ ರವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ತುಂಬಾ ಯೋಚಿಸಿ ಬದಲಾದ ಪರಿಸ್ಥಿತಿ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಪ್ರಬುದ್ಧರಾಗಿ ನಿರ್ಧಾರ ತೆಗೆದುಕೊಂಡಿರುವುದಾಗಿ ಭಾವುಕರಾಗಿ ತಿಳಿಸಿದರು. ಸುಮಲತಾ ಅವರು ಬಿಜೆಪಿ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿಯವರಿಗೆ ತಾವು ಬೆಂಬಲಿದುವುದಾಗಿ ತಮ್ಮ ನಿರ್ಧಾರ ತಿಳಿಸಿದ್ದಾರೆ. ತಮಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಚುನಾವಣೆ ಎದುರಿಸುವ ಆಹ್ವಾನ ಬಂದಿತ್ತು. ಆದರೆ ತಾವು ಮಂಡ್ಯ ಬಿಟ್ಟು ಹೋಗುವುದಿಲ್ಲ ಎಂದು ತಿಳಿಸಿದರು.  ರಾಜಕೀಯ ತಮಗೆ ಅನಿವಾರ್ಯವಾಗಿರಲಿಲ್ಲ. ತಮ್ಮ ಪತಿಯ ಕೆಲಸವನ್ನು ಮುಂದುವರಿಸುವುದೊಂದೆ ಉದ್ದೇಶವಾಗಿತ್ತು ತಾವು ರಾಜಕೀಕ ಸೇರುವ ನಿರ್ಧಾರ. ತಮ್ಮ ಜಿಲ್ಲೆಯ ಅಭಿವೃದ್ಧಿ ಒಂದೇ ತಮ್ಮ ಮನಸ್ಸಿನಲ್ಲಿತ್ತು. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದೀನಿ. ಸಾಧನೆಗಳು ತಮ್ಮ ಬಗ್ಗೆ ಮಾತನಾಡಬೇಕು, ನಾವು ಸಾಧನೆಗಳ ಬಗ್ಗೆ ಮಾತನಾಡಬಾರದು ಎಂಬುದು ಅಂಬರೀಶ್ ಅವರ ಮಾತಾಗಿತ್ತು. ತಾವು ಅದೇ ದಾರಿಯಲ್ಲಿ ನಡೆದದ್ದಾಗಿ ತಿಳಿಸಿದರು. ಯಾವುದೇ ಪಕ್ಷದ ಸಹಕಾರವಿಲ್ಲದೆಯೂ ಪಕ್ಷೇತರ ಅಭ್ಯರ್ಥಿಯಾಗಿ ಕೋವಿಡ್ ಸಮಯದಲ್ಲಿ ಸಾಕಷ್ಟು ಅನುದಾನ ತಂದಿದ್ದೇನೆ ಎಂದು ಹೇಳಿದರು. ಅಭಿಮಾನಿಗಳು ಬೇರೆಯವರ ಮುಂದೆ ತಲೆ ತಗ್ಗಿಸಬಾರದೆನ್ನುವ ಉದ್ದೇಶದಿಂದ ತಮ್ಮ ಸಾಧನೆ ಬಗ್ಗೆ ಹೇಳುತ್ತಿರುವುದಾಗಿ ತಿಳಿಸಿದರು. ಇತ್ತೀಚೆಗೆ ತಾವು ಬಿಜೆಪಿಗೆ ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿದ್ದರು. ಮತ್ತೊಂದು ಬಾರಿ ಸಂಸದೆಯಾಗಲು ಬಿಜೆಪಿ ಟಿಕೇಟು ಆಕಾಂಕ್ಷಿಯಾಗಿದ್ದರು ಸುಮಲತಾ ಅಂಬರೀಶ್. ತಮಗೆ ಸಹಕಾರ ನೀಡಿದ ಸಾವಿರಾರು ಮಂದಿಗೆ ಧನ್ಯವಾದ ಸಲ್ಲಿಸಿದರು. ಯಶ್ ಹಾಗೂ ದರ್ಶನ್ ರವರ ಸಹಕಾರವನ್ನು ಸ್ಮರಿಸಿದರು. 

ಇದಕ್ಕೆ ಮುಂಚೆ ಅಭಿಷೇಕ್ ಅಂಬರೀಶ್ ರವರು ಮಾತನಾಡಿ ಅಭಿಮಾನಿಗಳೊಂದಿಗೆ ಎಂದಿಗೂ ಇರುವುದಾಗಿ ತಿಳಿಸಿದ್ದಾರೆ. ಅಂಬರೀಶ್ ಎಂದರೆ ಮಂಡ್ಯ, ಮಂಡ್ಯ ಎಂದರೆ ಅಂಬರೀಶ್ ಎಂದು ತಿಳಿಸಿದರು.

ಕಳೆದ ಐದು ವರ್ಷಗಳಲ್ಲಿ ಸಂಸದೆಯಾಗಿ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು.

ದರ್ಶನ ಮಾತನಾಡಿ 5 ವರ್ಷಗಳ ಹಿಂದೆ ತಮಗೆ ಸಹಕಾರ ನೀಡಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. ಸುಮಲತಾ ಅಮ್ಮ ಯಾವುದೇ ನಿರ್ಧಾರ ತೆಗೆದುಕೊಂಡರು ತಾವು ಅದಕ್ಕೆ ಬದ್ದರಾಗಿ ಅವರಿಗೆ ಸಹಕಾರ ನೀಡಯವುದಾಗಿ ತಿಳಿಸಿದರು.


Share