10/03/2022 ರ ಸರ್ಕಾರಿ ಅರ್ಜಿ ಆಹ್ವಾನ

373
Share

* ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ ಅರ್ಜಿ ಆಹ್ವಾನ
ಮೈಸೂರು- ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನ್ ದಯಾಳ್ ಅಂತ್ಯೋದಯ ಯೋಜನೆ ಹಾಗೂ ರಾಷ್ಟಿçÃಯ ನಗರ ಜೀವನೋಪಾಯ ಅಭಿಯಾನ (ಡೇ ನಲ್ಮ್) ಯೋಜನೆಯಡಿ 05 ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗೆ ಗೌರವಧನ ಆಧಾರದ ಮೇಲೆ ತಾತ್ಕಾಲಿಕವಾಗಿ ಗುತ್ತಿಗೆ ಅವಧಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ನಿವಾಸಿಯಾಗಿರುವುದರ ಜೊತೆಗೆ ಪಿ.ಯು.ಸಿಯಲ್ಲಿ ಉತ್ತೀðಣರಾಗಿರಬೇಕು. 18 ರಿಂದ 45 ವರ್ಷದೊಳಗಿನ ವ್ಯಕ್ತಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ಆಯ್ಕೆಯಾದ ಸಂಪನ್ಮೂಲ ವ್ಯಕ್ತಿಗಳಿಗೆ ಮಾಸಿಕ ವೇತನ 8000 ರೂ. ಇದ್ದು, 2000 ರೂ. ಗೌರವಧನ ನೀಡಲಾಗುತ್ತದೆ. ಅಭ್ಯರ್ಥಿಗಳು ಕಂಪ್ಯೂಟರ್ ನಿರ್ವಹಣೆಯ ಜ್ಞಾನ ಹೊಂದಿರಬೇಕು. ನಗರಸಭೆಯ ಡೇ ನಲ್ಮ್ ಯೋಜನೆಯಡಿಯ ಪ್ರದೇಶ ಮಟ್ಟದ ಒಕ್ಕೂಟ ಅಥವಾ ಸ್ವ-ಸಹಾಯ ಸಂಘದಲ್ಲಿ ಕನಿಷ್ಠ 3 ವರ್ಷದಿಂದ ಸದಸ್ಯರಾಗಿರಬೇಕು. ಆಂತರಿಕ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿಸಿರಬೇಕು.
ಆಸಕಿಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಂಬAಧಪಟ್ಟ ಆಯಾಯ ವಲಯ ಕಛೇರಿಗಳಲ್ಲಿ ಪಡೆದು 2022ರ ಮಾರ್ಚ್ 16ರೊಳಗಾಗಿ ಆರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಮುದಾಯ ಸಂಘಟಕರಾದ ಆರ್.ಪಿ.ನಳಿನಿ ದೂ.ಸಂ 9844316512, ಎನ್.ಉಷಾಪೂರ್ಣ ದೂ.ಸಂ. 9481515527, ಎಂ.ಮುನಿಲಕ್ಷö್ಮಮ್ಮ ದೂ.ಸಂ. 9886041972, ರಮೇಶ ದೂ.ಸಂ. 9449124422, ಜಮುನ ದೂ.ಸಂ. 9740129562, ಎನ್.ಸಂತೋಷ್ ಕುಮಾರ್ ದೂ.ಸಂ. 9972634378 ಇವರನ್ನು ಕಛೇರಿಯ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತಿಥಿ ಉಪನ್ಯಾಸಕರಿಗಾಗಿ ಅರ್ಜಿ ಆಹ್ವಾನ
ಮೈಸೂರು – ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ವತಿಯಿಂದ ಅತಿಥಿ ಉಪನ್ಯಾಸಕರಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಆಸಕ್ತರು ಡಿಪ್ಲೋಮ ಇನ್‌ಟೂಲ್&ಡೈಮೇಕಿಂಗ್/ ಪ್ರಿಸಿಷನ್ ಮ್ಯಾನು ಫ್ಯಾಕ್ಚರಿಂಗ್/ ಮೆಕ್ಯಾನಿಕಲ್ ಮತ್ತು ಎಲೆಕ್ಟಿçಕಲ್ ಇಂಜಿನಿಯರಿAಗ್ ವಿದ್ಯಾರ್ಹತೆ ಹೊಂದಿರಬೇಕು ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಸಂಬAಧಿತ ವಿಷಯಗಳಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ಸ್ವವಿವರ, ವಿದ್ಯಾರ್ಹತೆಯ ಪ್ರಮಾಣ ಪತ್ರ ಮತ್ತು ಅನುಭವದ ಪ್ರಮಾಣ ಪತ್ರಗಳೊಂದಿಗೆ ಹುಣಸೂರಿನ ಬೈ ಪಾಸ್ ರಸ್ತೆಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಘಟಕದ ಮುಖ್ಯಸ್ಥರಿಗೆ ಅರ್ಜಿಯನ್ನು 2022ರ ಮಾರ್ಚ್ 14 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9448167259, 9035376071 ಅನ್ನು ಸಂಪರ್ಕಿಸಬಹುದು ಅಥವಾ ವೆಬ್‌ಸೈಟ್ ಮೂಲಕ gttchunsur@gmail.com ಅನ್ನು ಸಂಪರ್ಕಿಸಬಹುದು ಎಂದು ಹುಣಸೂರಿನ ಜಿ.ಟಿ.ಟಿ.ಸಿಯ ಘಟಕದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share