ಸಂಪಾದಕೀಯ : ಮುಂಬರುವ ದಿನಗಳಲ್ಲಿ ಚುನಾವಣಾ ಸಮಯದಲ್ಲಿ ಪಕ್ಷಗಳ ಪುನರ್ ರಚನೆ ಅಧಿಕೃತವಾಗುತ್ತದೆಯೇ ?

175
Share

ಮೈಸೂರು ಪತ್ರಿಕೆ
ಇಂದು ಬಿಹಾರದ ಮುಖ್ಯಮಂತ್ರಿ ರಾಜಿನಾಮೆ ನೀಡಿ ಮತ್ತೊಮ್ಮೆ ಬಿಜೆಪಿಯೊಂದಿಗೆ ಕೈ ಜೋಡಿಸಲಿದ್ದಾರೆ. ಇದು ಭಾರತದಾದ್ಯಂತ ನಡೆಯುತ್ತಿದೆ. ಬಹುಶಃ ಸ್ವಲ್ಪ ವರ್ಷಗಳು ಕಳೆದರೆ ಚುನಾವಣಾ ಸಮಯದಲ್ಲಿ ಪಕ್ಷಗಳ ಪುನರ್ ರಚನೆ ಎನ್ನುವುದು ಅಧಿಕೃತವಾಗೇ ನಡೆಯುತ್ತದೇನೋ. ಅಧಿಕಾರದ ಲಾಲಸೆಯಲ್ಲಿ ಅದ್ದಿ ಮುಳುಗಿರುವ ರಾಜಕೀಯ ಪಕ್ಷಗಳಿಂದ ಸಂಪೂರ್ಣ ರಾಜಕೀಯ ವ್ಯವಸ್ಥೆಯೇ ಬದಲಾಗಿಬಿಡುತ್ತದೇನೋ.
ಆದರೆ ದೂಷಿಸಬೇಕೆಂದರೆ ತಾರನ್ನು ದೂಷಿಸಬೇಕು ? ಸ್ವಲ್ಪ ಹಿಂದೆ ಪಕ್ಷಾಂತರ ಸ್ವಲ್ಪ ಮಟ್ಟಿಗೆ ಇದ್ದರೂ ಬಿಜೆಪಿ ಈ ಸಂಸ್ಕೃತಿಯನ್ನು ದೊಡ್ಡ ಮಟ್ಟದಲ್ಲಿ ಹುಟ್ಟು ಹಾಕಿದ್ದಂತು ಪ್ರಪಂಚಕ್ಕೆ ಗೊತ್ತಿರುವ ವಿಷಯ .
ಆದರೆ ಇದರಲ್ಲಿ ಬಿಜೆಪಿ ಮಾತ್ರ ತಪ್ಪು ಮಾಡುತ್ತಿದೆ ಎಂದು ಮಾತ್ರ ಹೇಳಲು ಸಾದ್ಯವಿಲ್ಲ. ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾದ್ಯವಿಲ್ಲ. ಒಂದು ಕೈಯಿಂದ ಬಿಜೆಪಿ ಆಮಿಷ ಒಡ್ಡಿದರೆ ಮತ್ತೊಂದು ಪಕ್ಷದವರು ಅಧಿಕಾರದ ಆಮಿಷಕ್ಕೊಳಗಾಗಿ ಇನ್ನೊಂದು ಕೈ ಜೋಡಿಸುತ್ತಾರೆ. ಒಂದು ಕಾಲದಲ್ಲಿ ಚಿಂತಕರು ಮತದಾರ ಬುದ್ದಿವಂತನಾಗಬೇಕು . ಸಂಪೂರ್ಣ ಬಹುಮತ ಒಂದು ಪಕ್ಷಕ್ಕೆ ನೀಡಬೇಕು ಎನ್ನುತ್ತಿದ್ದರು. ಆದರೆ ಈಗ ಸಂಪೂರ್ಣ ಬಹುಮತ ಇದ್ದರೂ ಯಾವಾಗ ಏನಾಗುತ್ತದೋ ಗೊತ್ತಿಲ್ಲ ಎನ್ನುವಂತಾಗಿದೆ ಪರಿಸ್ಥಿತಿ. ಮತದಾರರು ಸಂಪೂರ್ಣ ಅಸಹಾಯಕರಾಗುತ್ತಿದ್ದಾರೆ.


Share