MP : ಕವನ ಸಂಗ್ರಹ : ಆತ್ಮ ನಿವೇದನೆ – ಶ್ರೀಮತಿ . ಆಶಾಲತ

262
Share

ಆತ್ಮ ನಿವೇದನೆ

( ಉಕ್ರೈನ್ ಯುದ್ಧದ ಸಮಯದಲ್ಲಿ ಭಾರತೀಯ ವಿದ್ಯಾರ್ಥಿ ನವೀನ್ ಮರಣ ಕುರಿತು ಕವನ )

ನೋವಿನ ಸಾಗರದಲ್ಲಿ ನಲಿವಿನ ಅಲೆಗಳು ಉಂಟಾದಾಗ ಮನ ಆನಂದದಿ ಹಾರಾಡುವುದು ಬಾನಾಡಿ ಯಂತೆ
ಸಂತಸದ ಕುದುರೆಯನೇರಿ ನಾಗಾ ಲೋಟದಿ ಓಡುವುದು
ಓ ದಯಮಯಿ ಭಗವಂತನೇ
ಕರುಣಾ ಸಾಗರನೇ ಏನಿದು ನಿನ್ನಯ ಲೀಲೆ ||1||

ನಿನ್ನ ಕೈಯಲ್ಲಿನ ಪಗಡೆಯಾಟದ ದಾಳಗಳು ನಾವು
ಒಮ್ಮೆ ಸಂತಸದ ಕಡಲಲ್ಲಿ ತೇಲಿ ಬಿಡುವೆ ,ಮತ್ತೊಮ್ಮೆ ದುಃಖದ ಕೂಪಕ್ಕೆ ನೂಕಿ ಹೊರ ಹಾಕುವೆ
ಮಾನವ ಜನ್ಮಕ್ಕೆ ಅಗ್ನಿ ಪರೀಕ್ಷೆಗಳು
ಸರಮಾಲೆ
ಒಂದನ್ನು ಪಡೆಯಲು ಮತ್ತೊಂದನ್ನು ತ್ಯಜಿಸಲೇ ಬೇಕು ||2||

ಮಾನವ ನಿರೀಕ್ಷೆಗಳ ಸುಳಿಯಲ್ಲಿ ಸಿಲುಕಿ ಬಳಲಿರುವ
ಬದುಕಿನಲ್ಲಿ ಅವನ ಲೆಕ್ಕಾಚಾರದಿ
ನಡೆಯದು ಏನು, ಸೂತ್ರದಾರಿ
ನೀನು ಪಾತ್ರಧಾರಿಗಳು ನಾವು
ಸೃಷ್ಟಿಯ ಸಕಲ ಜೀವರಾಶಿ
ಯಲ್ಲಿ ಮಾನವ ಜನ್ಮ ಹಿರಿದಾದದು ||3||

ಬಾಳ ಬನದಲ್ಲಿ ಅರಳಿ ನಳ ನಳಿಸ
ಬೇಕಾದ ಅಲರುಗಳ ಬಾಡಿಸಿರುವೆ ಯಲ್ಲ,ನೀ ಕೊಟ್ಟ ಬದುಕನ್ನು ನೀನೇ ಚಿವುಟಿ ಹಾಕಿರುವಯಲ್ಲ ಹೆತ್ತವರ ಹೃ ದಯ ಮಂದಿರಕ್ಕೆ ಕೊಳ್ಳಿ ಇಟ್ಟಿರುಯಲ್ಲ ,ತಮ್ಮ ಕರುಳ ಕುಡಿ ಯಿಂದ ಭವಿತವ್ಯದ ಹೊಂಗನಸು ಕಂಡವರ ಬದುಕಿನಲ್ಲಿ ಅಂಧಕಾರವ ಮೂಡಿಸಿರುವೆಯಲ್ಲ||4||

“ಪುತ್ರ ಶೋಕo ನಿರಂತರo” ಎಂಬಂತೆ ಹೆತ್ತವರ ಕಣ್ಮುಂದೆ ಮಕ್ಕಳ ಮರಣವು ಸಹಿಸಲಸದಳ
ನೋವಿನ ಬೇಗೆ, ಕರುಣೆ ತೋರು ಭಗವಂತನೇ ಕ್ರೂರಿಯಾಗದೆ
ಕ್ಷಮಯ ಧರಿತ್ರೀಯಂತೆ ಸಕಲ ಜೀವ ಸಂಕುಲವನ್ನು ರಕ್ಷಿಸು ರಕ್ಷಿಸು
ಅನವರತ || 5 ||

ಎಂ.ಎಸ್.ಆಶಾಲತಾ, ಎಂ. ಡಿ. ಸಿ. ಸಿ. ಬ್ಯಾಂಕ್ ಲಿ, ಶಾಖಾ ವ್ಯವಸ್ಥಾಪಕರು, ಕೆ. ಹೊನ್ನಲಗೆರೆ ಶಾಖೆ

Share