MP ಕವನ ಸಂಗ್ರಹ : ನನ್ನವ್ವ ಬಿಡಿಸಿದ ರಂಗೋಲಿ : ಕವಿಯಿತ್ರಿ ಆಶಾಲತ

282
Share

“ನನ್ನವ್ವ ಬಿಡಿಸಿದ ರಂಗವಲ್ಲಿ ”

ನನ್ನವ ಬಿಡಿಸಿದ ರಂಗವಲ್ಲಿಯೂ
ನಮ್ಮ ಬದುಕಿನoಗಳದ ಚೆಲುವಿನ ಚಿತ್ತಾರವಮ್ಮ
ನಮ್ಮ ಸಂಸ್ಕೃತಿಯ ದ್ಯೋತಕವಮ್ಮ
ಅವಳ ಜೀವನ ಚಿತ್ರಣವನ್ನು
ರಸವತ್ತಾಗಿ ಬಣ್ಣಿಸುವದಮ್ಮ
ನನ್ನವ್ವ ಬಿಡಿಸಿದ ರಂಗವಲ್ಲಿಯು
ಒಂದು ಅದ್ಬುತ ಕಲಾಕೃತಿಯಮ್ಮ ||1||

ತನ್ನ ಮಕ್ಕಳ ಭವಿಷ್ಯಕ್ಕಾಗಿ ಅವಳನುಭವಿಸಿದ ನೋವುಗಳ, ಕಷ್ಟ ಕಾರ್ಪಣ್ಯಗಳ ಎಳೆ ಎಳೆಯಾಗಿ ಚಿತ್ರೀಸುವುದಮ್ಮ
ನನ್ನವ್ವ ಬಿಡಿಸಿದ ರಂಗವಲ್ಲಿಯು
ಅವಳಲ್ಲಿರುವ ಕಲಾವoತಿಕೆಗೆ, ಅದ್ಬುತ ಪ್ರತಿಭೆಗೆ ದ್ಯೋತಕವಮ್ಮ ||2||

ನನ್ನವ್ವ ಚುಕ್ಕಿಗಳ ಜೊತೆ ಆಟ
ವಾಡುತ್ತಾ ವಿಧ, ವಿಧ ರಂಗವಲ್ಲಿಯ
ಬಿಡಿಸುತ್ತಿರೆ ಬಾಲ್ಯದಿ ನಾ ಕಣ್ರೆಪ್ಪೆ ಮಿಟುಕಿಸದೆ ಜಗದಚ್ಚರಿಯ ನೋಡುವoತೆ ಕೌತುಕದಿ ರಂಗವಲ್ಲಿಯ ಐಸಿರಿಯಕಣ್ತುಂಬಿ ಕೊಳ್ಳುತ್ತಿದ್ದೇನಮ್ಮ
ನನ್ನವ್ವ ಬಿಡಿಸಿದ ರoಗವಲ್ಲಿಯು
ಅವಳ ಬಾಲ್ಯದ ನೆನಪುಗಳ, ತವರಿನ ಹೃದಯ ಸಿರಿವಂತಿಕೆಯ ಪ್ರತಿಬಿಂಬಿಸುವುದಮ್ಮ ||3||

ನನ್ನವ್ವ ಬಿಡಿಸಿದ ರoಗವಲ್ಲಿಯಲ್ಲಿ
ಪ್ರೀತಿ, ಅಕ್ಕರೆಯ ಸವಿ ಜೇನಿದೆ
ಬದುಕಿನ ಭರವಸೆಯ ಅಪ್ಯಾಯ ಮಾನತೆ ಇದೆಯಮ್ಮ
ಬದುಕಿನ ಮೌಲ್ಯಗಳ ಸಾರವಿದೆಯಮ್ಮ
ಸಿಹಿಕಹಿ ಹೂರಣವಿದೆ, ನೋವು ನಲಿವಿನ ರಸದೌತಣವಿದೆಯಮ್ಮ
ಇದನರಿಯದ ಮೂಢರಿಗೆ ನನ್ನವ್ವ ಬಿಡಿಸಿದ ರಂಗವಲ್ಲಿಯು ಕೇವಲ ಬಿಳಿಯ ವಕ್ರ ರೇಖೆಗಳಾಗಿ ಗೋಚರಿಸುವುದಮ್ಮ
“ದೃಷ್ಟಿಯಂತೆ ಸೃಷ್ಟಿ” ಎಂಬಿ ನುಡಿ ಯು ದಿಟವಿರುವುದಮ್ಮ ||4 ||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆಶಾಖೆ


Share