MP ಕವನ ಸಂಗ್ರಹ – ಶ್ರೀಮತಿ . ಆಶಾಲತ

310
Share

ಶ್ರಾವಣ ಸಂಜೆಯಲ್ಲಿ
ಚುಮು ಚುಮು ಚಳಿಯಲ್ಲಿ
ಚಿಟ ಪಟ ಸುರಿವ ಮಳೆಯಲ್ಲಿ
ಭೂತಾಯಿಯ ಸ್ಪರ್ಶದಲ್ಲಿ
ಸುತ್ತಲ ವನಸಿರಿಯ ಕಣ್ತುಂಬಿ
ಕೊಂಡು ಶ್ರಾವಣ ಸಂಜೆಯಲ್ಲಿ
ತವರಿನತ್ತ ಎನ್ನಯ ಪಯಣ || 1||

ಸಂಜೆ ಐದರ ಮಳೆ ಬೆಂಬಿಡದೆ ಧೋ ಎಂದು ಸುರಿಯುತ್ತಿದೆ
ಅಂತರಂಗದಿ ಸಾವಿರ ದುಗುಡ
ಮನದಲ್ಲಿ ನೋವಿನ ಬೇಗೆ ಬಾಲ್ಯದ
ಮಳೆಯ ಆ ದಿನಗಳ ನೆನೆಯುತ್ತಾ
ಮಮತಾಮಯಿ ಅಪ್ಪನ ಸ್ಮರಿಸುತ್ತ
ಶ್ರಾವಣ ಸಂಜೆಯಲ್ಲಿ ತವರಿನತ್ತ ಎನ್ನಯ ಪಯಣ 2||

ಹೊತ್ತು ಮುಳುಗಿದ ಸಮಯದಿ
ಎನ್ನ ಬರವಣಿಗೆಯ ಸ್ಫೂರ್ತಿದಾತನ
ಅಡಿಗಡಿಗೆ ನೆನೆಯುತ್ತಾ, ಯಾಂತ್ರಿಕ
ಬದುಕಿನಲ್ಲಿ ಜೊತೆಯಾದ ಎನ್ನೊಲುಮೆಯ ಕವನವೇ
ನಾ ಅತ್ತಾಗ ಎನ್ನ ಕಣ್ಣೀರ ಒರೆಸಿ
ನಾ ನಕ್ಕಾಗ ಎನ್ನ ನಗೆಗೆ ನೀ ಶೃತಿಯಾಗಿ, ಎಡೆಬಿಡದೆ ಬೆಂಗವಲಾಗಿ ನೀ ಎನ್ನ ಕಾಯ್ದೆ
ನಿನ್ನ ನೆನೆಯುತ್ತಾ ಶ್ರಾವಣ ಸಂಜೆಯಲ್ಲಿ ತವರಿನತ್ತ ಎನ್ನಯ
ಪಯಣ ||3||

ಮರುಭೂಮಿಯ ಓಯಸಿಸ್ ನಂತೆ
ನೀ ಎನ್ನ ಜೊತೆಯಾದೆ
ಎನ್ನ ಮನದ ಭಾವಗಳಿಗೆ ನೀ
ಸ್ಪಂದನಾ ಮೂರ್ತಿಯಾದೆ
ಎನ್ನ ಬೆಳಗು – ಬೈಗುಗಳ ಕಾರಣಿಕರ್ತ ನೀನಾದೆ
ಎನ್ನ ಬದುಕಿನ ಭವಿಷ್ಯ ರೂವಾರಿ
ನೀನಾದೆ
ನಿನ್ನ ನೆನೆಯುತ್ತಾ ಶ್ರಾವಣ ಸಂಜೆಯಲ್ಲಿ ತವರಿನತ್ತ ಎನ್ನಯ
ಪಯಣ ||4||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ ಬ್ಯಾಂಕ್, ಕೆ. ಹೊನ್ನಲಗೆರೆ, ಮದ್ದೂರು ( ಚನ್ನಪಟ್ಟಣ )


Share