MP ಕವನ ಸಂಗ್ರಹ : ಸಿರಿ ದೇವತೆ – ಕವಿಯಿತ್ರಿ ಆಶಾಲತ

21
Share

ಸಿರಿ ದೇವತೆ
ವರವನು ಕೊಡುವ ವರಮಹಾ ಲಕ್ಷ್ಮಿಯೆ
ಸಮುದ್ರ ಮಂಥನದಿಂದ ಜನಿಸಿದ
ಸಿರಿದೇವತೆಯೇ
ಸಕಲರನ್ನು ಕಾಪಾಡುವ ಜಗತ್ ಜನನಿಯೇ
ಶ್ರೀಮನ್ನಾರಾಯಣನ ಹೃದಯದರಸಿಯೇ
ಮುತೈದೆತನದ ಪ್ರತಿರೂಪವೇ
ನಿನ್ನಯ ಕೃಪಾಕಟಾಕ್ಷ ಸದಾ ನಮ್ಮ ಮೇಲಿರಲಿ ||1||

ಶ್ರಾವಣ ಮಾಸದ ಎರಡನೇ ಶುಕ್ರವಾರ ಆಗಮಿಸುವೆ ನೀನು
ಹೆಂಗಳೆಯರ ಮನೆ -ಮನಗಳಲ್ಲಿ ಸಡಗರ, ಸಂಭ್ರಮಗಳ ಆಗರ ವಾಗುವೆ
ಜನ ಸಾಮನ್ಯರ ಕಷ್ಟ ಕಾರ್ಪಣ್ಯಗಳ
ನೀವಾರಿಸುವ ಕರುಣಾ ಸಾಗರಿಯೆ
ನಿನ್ನಯ ಕೃಪಾಕಟಾಕ್ಷ ಸದಾ ನಮ್ಮ
ಮೇಲಿರಲಿ ||2||
ಜಗತ್ ಕಲ್ಯಾಣಕ್ಕಾಗಿ ಶಿವನಾಣತಿಯಂತೆ ಜಗನ್ಮಾತೆ
ಪಾರ್ವತಿ ದೇವಿಯೇ ಸ್ವತಃ
ನಿನ್ನ ವ್ರತವಾನಚರಿಸುವಳು
ಜನಸಾಮಾನ್ಯರ ಸಂಪತ್ತಿನ ಅದಿ
ದೇವತೆಯೇ
ನಿನ್ನ ಕೃಪೆಗಾಗಿ ಜಗತ್ತಿನ್ನೇಲ್ಲಡೆ
ಶ್ರದ್ಧಾ ಭಕ್ತಿಗಳಿಂದ ಪೂಜಿಸುವರು ನಿನ್ನಯ ಕೃಪಕಟಾಕ್ಷ ಸದಾ ನಮ್ಮ ಮೇಲಿರಲಿ ||3||
ಸಕ್ಕರೆ ತುಪ್ಪದ, ಕೋಸಂಬರಿ ಪಾನಕಗಳ ನೈವೇದ್ಯ ಮಾಡುವೆವು
ಫಲ ಪುಷ್ಪ ಗಳಿಂದ ಸಿಂಗರಿಸಿ, ಧೂಪ ದೀಪಗಳಿಂದ ನಿನ್ನ ಆರಾಧಿಸುವೆವು ತಾಯೆ
ಸಕಲರಿಗೂ ಸದಾ ಸನ್ಮoಗಳ
ನೀಡೆಂದು ಬೇಡುವೆವು ನಾವು
ನಿರ್ಮಲ ಭಕ್ತಿಗೆ, ನಿಸ್ವಾರ್ಥ ಮನಕ್ಕೆ ಒಲಿಯುವೆ
ನಂಬಿದ ಭಕ್ತರ ಹರಸಿ ಕಾಪಾಡಿ
ರಕ್ಷಿಸುವೆ ತಾಯೆ ||4||

ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆಶಾಖೆ


Share