MP : ಕವನ ಸಂಗ್ರಹ

298
Share

[10/10, 7:34 PM] C Pattana Mdcc Bank: ಮನದ ಬೇಗೆ

ಪ್ರೀತಿ – ಪ್ರೇಮ, ನಿಸ್ವಾರ್ಥ ಸ್ನೇಹ, ಬಂಧುತ್ವ, ಅನುರಾಗವೆಲ್ಲವು ಬರಿ ಭ್ರಮೆ
ದ್ವೇಷಾಸೂಯೆ, ಸ್ವಾರ್ಥಪರತೆ, ನಾನೆಂಬ ಅಹಮಿಕೆಯ ಬದುಕು ವಾಸ್ತವ
ನಿಸ್ವಾರ್ಥ ಜೀವಿಗಳಿಗಿಲ್ಲಿ ನೆಲೆಯಿಲ್ಲ
ನಿಸ್ವಾರ್ಥ ಪ್ರೇಮಕಿಲ್ಲಿ ಬೆಲೆಯಿಲ್ಲ ||1||
[10/10, 7:34 PM] C Pattana Mdcc Bank: ಬಾಳೆಂಬ ತೋಟದಲ್ಲಿ ರಂಗು ರಂಗಿನ ಅಲರುಗಳು ನೋಡಲು
ಬಲು ಸುಂದರ ಒಳಹೊಕ್ಕು ನಡೆದಾಗ ಕಾಣುವುದು ಮೊನಚು ಮುಳ್ಳಿನ ಹಂದರ
ಎಚ್ಚರ ತಪ್ಪಿ ಮುನ್ನಡಿ ಇಟ್ಟರೆ ನಾಟುವುದು ಮುಳ್ಳಿನ ಮೊನಚು ಮನಸ್ಸಿಗೆ, ಹೃದಯವೆಂಬ ಸೂಕ್ಷ್ಮ ಪರಿಧಿಗೆ ||2||
ರಂಗು – ರಂಗಿನ ವೇಷಧಾರಿಗಳಿಗೆಪ್ರಾಮುಖ್ಯತೆ
ಬಣ್ಣ ಬಣ್ಣದ ಮಾತನಾಡುವವರಿಗೆ ಪ್ರಾಧಾನ್ಯತೆ
ಗೋಸುಂಬೆಯಂತೆ ಬಣ್ಣ ಬದಲಾಯಿಸುವ ಸೋಗಲಾಡಿಗಳಿಗೆ ಮನ್ನಣೆ
ಮನಸ್ಸೆಂಬುದು ಕನ್ನಡಿಯಂತೆ
ಒಡೆದರೆ ಚೂರು ಚೂರು ಛಿದ್ರಗೊಂಡ ಮನವು ಒಂದಾಗದು ಮುನ್ನಿನಂತೆ ||3||
ಸಮಾಜ ಸೇವಾಕರ್ತರಿಂದಲೇ
ಮೃದು ಹೃದಯಿಗಳಿಗೆ ಕೊಡಲಿ ಪೆಟ್ಟು, ಮಾನಸಿಕ ಕಗ್ಗೊಲೆ
ಓ ದೇವರೇ ಮಾನವರೆಷ್ಟು ಸ್ವಾರ್ಥಿಗಳು ನಿಸ್ವಾರ್ಥಿಗಳ ಸಮಾಧಿಯ ಮೇಲೆ ಸ್ವಾರ್ಥಿಗಳು ಸಿಂಹಾಸನವ ಕಟ್ಟಿ ರಾರಾಜಿಸುತ್ತಿರುವರು ||4||
ಧಮನಗೊಳಿಸು ಈ ಸ್ವಾರ್ಥಪರ ಜನರನ್ನು
ಶಮನಗೊಳಿಸು ನೊಂದ ಮನಗಳ ಬೇಗೆಯ
ಅಂತ್ಯಗೊಳಿಸು ಈ ಸ್ವಾರ್ಥ ರೌರವ ಪ್ರಪಂಚವ, ರಕ್ಷಿಸು ನಿಸ್ವಾರ್ಥ ಜೀವಿಗಳ ||5||
ಎಂ. ಎಸ್. ಆಶಾಲತಾ ಶಾಖಾ ವ್ಯವಸ್ಥಾಪಕರು ಎಂ. ಡಿ. ಸಿ . ಸಿ ಬ್ಯಾಂಕ್ ಕೆ. ಹೊನ್ನಾಲಗೆರೆ


Share