MP- ಫೋಕಸ್-ವಿಶ್ವದಲ್ಲೇ ಅಮೂಲಾಗ್ರ ಸಾಧನೆ ಮಾಡುತ್ತಿರುವ ಭಾರತದ ವಿಜ್ಞಾನಿಗಳಿಗೆ ಹಾಗೂ ಪ್ರಧಾನಿ ಮೋದಿಗೆ ಅಭಿನಂದನೆ..

928
Share

 

ವಿಶ್ವದಲ್ಲೇ ಅಮೂಲಾಗ್ರ ಸಾಧನೆ ಮಾಡುತ್ತಿರುವ ಭಾರತದ ವಿಜ್ಞಾನಿಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು..
ದೆಹಲಿ
7/6/2021 ರ ಪ್ರಧಾನಿಗಳು ದೇಶವನ್ನು ಉದ್ದಶಿಸಿ ಭಾಷಣ  ಮಾಡುತ್ತಾ ಈ ನೂರು ವರ್ಷಗಳಲ್ಲಿ ಭಾರತದಲ್ಲಿ ಕೊರೊನಾದಂತಹಾ ಮಹಾಮಾರಿ ಬಂದಿರಲಿಲ್ಲ,  ಇಡೀ ವಿಶ್ವದಲ್ಲಿ ಲಸಿಕೆ ತಯಾರಿಕೆ ಕಂಪನಿಗಳು ಕೆಲವೇ ಕಲವು ಇವೆ.  ನಮ್ಮ ದೇಶ ಲಸಿಕೆ ಯನ್ನು ಪಡೆಯಬೇಕಿದ್ದರೆ  ಬೇರೆ ದೇಶಗಳ ಮೇಲೆ ಅವಲಂಬಿತರಾಗಿ ವರ್ಷಗಳ ಗಟ್ಟಲೆ ಕಾದು ಅಲ್ಲ ಸ್ವಲ್ಪ ಲಸಿಕೆಯನ್ನು ಕಾಡಿ ಬೇಡಿ ಪಡೆಯಬೇಕಿತ್ತು  .ಪ್ರಸ್ತುತ  ನಮ್ಮ ದೇಶದಲ್ಲಿ ಕೊರೊನಾ ಲಸಿಕೆ ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ಊಹಿಸಿ. ಇತಿಹಾಸದಲ್ಲಿ ಲಸಿಕೆಗಳು ಭಾರತಕ್ಕೆ ಬೇರೆ ದೇಶಗಳಿಗಿಂತ 10-20 ವರ್ಷದ ನಂತರ ಬಂದಿವೆ. ಭಾರತದಲ್ಲಿ ಲಸಿಕಾಕರಣವು ಪ್ರತಿಶತ 60 ಕ್ಕಿಂತ ಹೆಚ್ಚಿಗೆ ದಾಟುತ್ತಿರಲಿಲ್ಲ. ಆದ್ದರಿಂದ ನಾವು ಮಿಷನ್ ಇಂದ್ರಧನುಷ್ ಅನ್ನು ಪ್ರಾರಂಬಿಸಿದ್ದು ಇದರಿಂದಾಗಿ ದೇಶದ ಲಸಿಕೆ ಕಾರ್ಯವು 5-6 ವರ್ಷಗಳಲ್ಲಿ 90 ಪ್ರತಿಶತ ಹೆಚ್ಚಿದೆ ನಾವು ಲಸಿಕೆ ಹಾಕುವುದನ್ನು ಮತ್ತು ಉತ್ಪಾದನೆಯನ್ನು ಎರಡನ್ನು ಹೆಚ್ಚಿದರ ಪರಿಣಾಮವಾಗಿ ಈ ಯಶಸ್ಸು ಸಿಕ್ಕಿದೆ. ಈ ಕಾರ್ಯಕ್ರಮದಿಂದಾಗಿ ಯಾವತ್ತೂ ಲಸಿಕೆ ಸಿಗದ ಬಡವರಿಗೆ ಪ್ರಯೋಜನ ಸಿಕ್ಕಿದೆ, ಭಾರತದಂತಹಾ ಹೆಚ್ಚು ಜನಸಂಖ್ಯೆ ಇರುವ ದೇಶ ಈ ಮಹಾಮಾರಿಯನ್ನು ಹೇಗೆ ನಿಬಾಯಿಸಬಹುದು ಎಂದು ವಿಶ್ವವೇ ನೋಡಿತ್ತಿತ್ತು.
ನಮ್ಮ ನೀತಿ ಮತ್ತು ಸತ್ಯವಾದ ನಿಯತ್ತು ಇದ್ದರೆ ಅದಕ್ಕೆ ಯಶಸ್ಸು ಸಿಕ್ಕೇ ಸಿಗಲಿದೆ ಎಂದು ನಂಬಿದ್ದೇವೆ ಅದರಿಂದಾಗಿ ನಾವು ಒಂದು ವರ್ಷದ ಒಳಗಾಗಿ ಎರಡು ಲಸಿಕೆ ತಯಾರಿಸಲು ಸಾಧ್ಯವಾಯಿತು ಇದರಿಂದ 7/6/2021 ರ ಹೊತ್ತಿಗೆ ಭಾರತದಲ್ಲಿ ಒಟ್ಟು 23 ಕೋಟಿ ಕೊರೋನ ಲಸಿಕೆ ಹಾಕಲಾಗಿದೆ. “ವಿಶ್ವಾಸೇನ ಸಿಧ್ಧಿಃ” ಅಂದರೆ ನಮ್ಮ ಮೇಲೆ ನಮಗೆ ವಿಶ್ವಾಸ ಇದ್ದರೆ ಯಶಸ್ಸು ಸಾಧ್ಯ ಎಂದು. ಕೊರೊನ ಸಮಯದಲ್ಲಿ ನಾವು ಕೊರೊನ ಲಸಿಕೆ ರಿಸರ್ಚ್ ಮಾಡುವ ಸಂದರ್ಭದಲ್ಲಿಯೇ ಲಾಜಿಸ್ಟಿಕ್ ಅನ್ನು ತಯಾರಾಗಿ ಇಟ್ಟಿದ್ದೆವು,  ಲಸಿಕೆ ತಯಾರಿಕಾ ಕಂಪನಿಗಳಿಗೆ ರಿಸರ್ಚ್ ಗಾಗಿ ಹಣಕಾಸು ನೆರವು ಮತ್ತು ಕ್ಲಿನಿಕಲ್ ಟ್ರಯಲ್ ಗಳಿಗೆ ಅನುಮತಿ ನೀಡಿ ನಾವು ಲಸಿಕೆ ತಯಾರಿಕಾ ಕಂಪನಿಗಳ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಲಸಿಕೆ ತಯಾರಿಕೆಯಲ್ಲಿ ಸಹಾಯ ಮಾಡಿದ್ದೇವೆ.
ಈಗ ಏಳು ಕಂಪನಿಗಳು  ವಿವಿಧ ಲಸಿಕೆಗಳನ್ನು ತಯಾರು ಮಾಡುತ್ತಿವೆ. ಮೂರು ಲಸಿಕೆಗಳು ಟ್ರಯಲ್ ನಡೆಯುತ್ತಿದ್ದು ಅಡ್ವಾನ್ಸ್ಡ್ ಹಂತದಲ್ಲಿವೆ. ಎರಡು ಲಸಿಕೆಗಳನ್ನು ಮಕ್ಕಳಿಗಾಗಿ ತಯಾರುಮಾಡುವ ಕೆಲಸ ಯುದ್ದೋಪಾದಿಯಲ್ಲಿ ನಡೆದಿದೆ. ಒಂದು ಮೂಗಿನಲ್ಲಿ ಹಾಕುವ ಔಷಧಿ ಸಹಾ ತಯಾರಾಗುತ್ತಿದೆ. ಹಾಗಾಗಿ ಹಗಲು ಇರುಳು  ವಿಶಿಷ್ಟ ಸಾಧನೆ ಮಾಡಿರುವ ನಮ್ಮ ದೇಶದ ವಿಜ್ಞಾನಿಗಳಿಗೆ ಅಭಿನಂದನೆಗಳ ನ್ನು ಇಡಿ ದೇಶದ ಜನತೆ ಸಲ್ಲಿಸಲೆ ಬೇಕು.
ಕೇಂದ್ರ ಸರ್ಕಾರವು ರಾಜ್ಯಗಳಿಗೆ ಕೊರೊನ ನಿಯಂತ್ರಣ ಮತ್ತು ಲಸಿಕೆ ಹಾಕುವ ಬಗ್ಗೆ ವಿವಿಧ ಸಮಯದಲ್ಲಿ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದ್ದು 16/1/2021 ರಂತೆ ಮಾರ್ಗಸೂಚಿಯಂತೆ ನಿಯಮಗಳನ್ನು ರಾಜ್ಯ ಸರ್ಕಾರಗಳು ನಡೆಯುತ್ತಿವೆ.  ಹಲವಾರು ಮುಖ್ಯ ಮಂತ್ರಿಗಳು, ಕೇಂದ್ರ ಏಕೆ ಲಸಿಕೆ ನೀಡಲು ವಯೋಮಿತಿ ಹೇರಿದೆ, ವಯೋವೃದ್ದರಿಗೆ ಮೊದಲು ಲಸಿಕೆ ಏಕೆ ಎಂದು ಆಕ್ಷೇಪಿಸಿ, ಕೆಲವು ನೀತಿ ನಿರೂಪಣೆಯನ್ನು ರಾಜ್ಯಗಳೂ ತೀರ್ಮಾನ ಮಾಡುವಂತೆ ಜವಾಬ್ದಾರಿ ಕೊಡಲು ಕೇಳಿಕೊಂಡ ಮೇರೆಗೆ 1/5/2021 ರಿಂದ ಈಚೆಗೆ ರಾಜ್ಯಗಳೂ ಸಹಾ ಕೋರೋನ ನಿಯಂತ್ರಣದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಅನುವು ನೀಡಲಾಯ್ತು. ಆದರೆ  ಅದರಲ್ಲಿ ರಾಜ್ಯಗಳು ನಿಭಾಹಿಸಲು ಕಷ್ಟವಾದ ಮೇಲೆ ಮತ್ತೆ ಮುಖ್ಯಮಂತ್ರಿಗಳು ಕೇಂದ್ರದ ಮಾರ್ಗ ಸೂಚಿ ಮಾಡಲು ತಿಳಿಸಿದರ ಪ್ರಯುಕ್ತ ಹಾಗೂ ಯಾವುದೇ ವಿರೋದ ಪಕ್ಷ ಅಥವಾ ರಾಜ್ಯಗಳು ಕೇಂದ್ರ ಸರ್ಕಾರವನ್ನು  ಸದಾ ಟೀಕೆ ಮಾಡುತ್ತಿದ್ದರು ಇನ್ನು ಮುಂದೆ ಕೇಂದ್ರ ಸರ್ಕಾರವೇ ಎಲ್ಲಾ ಕೊರೊನ ನಿಯಂತ್ರಣದ ಜವಾಬ್ದಾರಿ ತೆಗೆದುಕೊಂಡು  ಪ್ರಾರಂಭಿಸಿ ತುಂಬಾ ವ್ಯವಸ್ಥಿತವಾಗಿ ನಿರ್ವಹಣೆ ಮಾಡುತ್ತಿರುವ ಕೇಂದ್ರ ಸರ್ಕಾರದ ವೈಖರಿ ನಿಜಕ್ಕೂ ಪ್ರಶಂಸನೀಯ.
21/6/2021 ರಂದು ಯೋಗ ದಿನಾಚರಣೆ ಇದ್ದು ಆ ದಿನದಿಂದ ಕೇಂದ್ರ ಸರ್ಕಾರವು ಕೊರೋನ ನಿಯಂತ್ರಣದ ಹೊಣೆ ತೆಗೆದುಕೊಳ್ಳಲಿದೆ. 21/6/21 ರಿಂದ ಮುಂದೆ 18 ವರ್ಷಕ್ಕಿಂತ ಹೆಚ್ಚಿನ ವಯೋಮಿತಿಯ ಪ್ರಜೆಗಳು ಕರೋನ ಲಸಿಕೆ ಉಚಿತವಾಗಿ ನಿಡಲಿದ್ದು ರಾಜ್ಯಗಳು ಯಾವುದೇ ಶುಲ್ಕ ನೀಡುವ ಅವಶ್ಯಕತೆ ಇಲ್ಲ ಎಂದು ನಿರ್ಧಾರ ತೆಗೆದು ಕೊಂಡಿರುವುದು ಕೇಂದ್ರ ಸರ್ಕಾರದ ಜನಪರ ಕಾಳಜಿಗೆ ಉದಾಹರಣೆಯಾಗಿದೆ ಈ ಮೂಲಕ ದೇಶದ ಬಡ ಮಧ್ಯಮ ವರ್ಗದ ಜನರಿಗೆ  ಉಚಿತವಾಗಿ ಯಾವುದೇ ತಾರತಮ್ಯ ವಿಲ್ಲದೆ ಲಸಿಕೆ ದೊರೆಯುತ್ತದೆ.
. ಕೊರೊನ ನಿಯಂತ್ರಣದ ಹೊರಾಟದಲ್ಲಿ ಕೇಂದ್ರ ಗರೀಬ್ ಕಲ್ಯಾಣ ಯೋಜನೆಯ ಅಡಿಯಲ್ಲಿ ಬಡವರಿಗೆ ನೀಡುವ ಆಹಾರ ಧಾನ್ಯಗಳ ನೀಡಿಕೆ ಮುಂದುವರಿಸುವ ಮೂಲಕ ದೇಶದ ಜನ ಹಸಿವಿನಿಂದ ಮುಕ್ತ ಗೊಳಿಸುವ ಕಾರ್ಯ ವನ್ನು ಮಾಡುತ್ತಿರುವದು ಮೋದಿಯವರ ಜನಪರ ಆಡಳಿತಕ್ಕೆ ಇಡಿದ ಕೈ ಗನ್ನಡಿ , ವಿಶ್ವದಲ್ಲೇ ದೊಡ್ಡ ಅನಾಹುತವನ್ನು ಮಾಡಿರುವ ಕರೋನವನ್ನು ನಿಯಂತ್ರಣ ಮಾಡುವಲ್ಲಿ   ಸ್ವದೇಶೀ ಲಸಿಕೆಗಳನ್ನು ತಯಾರು ಮಾಡುವಲ್ಲಿ ಯಶಸ್ವಿಯಾದ ನಮ್ಮ ವಿಜ್ಞಾನಿಗಳಿಗೆ ಹಾಗೂ ಸಮರ್ಥ ವಾಗಿ ಕರೋನ ನಿಯಂತ್ರಣ ಮಾಡುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಸನ್ಮಾನ್ಯ ನರೇಂದ್ರ ಮೋದಿಯವರಿಗೆ ದೇಶದ ಜನತೆಯ ಪರವಾಗ ಅಭಿನಂದನೆ ಸಲ್ಲಿಸಿದ್ದಾರೆ
ಡಾ .ಕೆ . ವಸಂತ ಕುಮಾರ್
ಬಿ ಜೆ ಪಿ ಜಿಲ್ಲಾ ಸಹ ವಕ್ತಾರರು ಹಾಗೂ
ಸಿಂಡಿಕೇಟ್ ಸದಸ್ಯರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ

Share