MP ಸ್ನ್ಯಾಕ್ಸ್ : ತ್ರಿವಳಿ ಸಂಗಮ 31

284
Share

ತ್ರಿವಳಿ ಸಂಗಮ : ಒಗಟು, ಗಾದೆ ಹಾಗೂ ರಸಪ್ರಶ್ನೆ – 31

ಪುರಾತನ ಕಾಲದಿಂದಲೂ ಒಗಟುಗಳು ಹಾಗೂ ಗಾದೆಗಳು ಜನಜನಿತವಾದ ಅನುಭವಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಿರಿಯರು ಹೇಳುವ ಹಾಗೆ ಗಾದೆಗಳು ಎಂದು ಸುಳ್ಳಾಗುವುದಿಲ್ಲ. ತಾತ, ಅಜ್ಜಿ, ತಂದೆ, ತಾಯಿ ಹಾಗೂ ಹಿರಿಯರು ತಮ್ಮ ಮನೆಗಳಲ್ಲಿ ಮಕ್ಕಳು ಮಾಡಿದ ತಪ್ಪನ್ನು ತಿದ್ದಲು ಗಾದೆಗಳನ್ನು ಉದಾಹರಣೆಯಾಗಿ ಕೊಟ್ಟು ಅವರಿಗೆ ಚೆನ್ನಾಗಿ ಮನವರಿಕೆಯಾಗುವಂತೆ ಮಾಡುತ್ತಿದ್ದರು.
ಎಲ್ಲರೂ ಓದಿ ಆನಂದಿಸಿ ಮುಂದೆ ಬರುವ ನಿಮ್ಮ ಮಕ್ಕಳು ಮೊಮ್ಮಕ್ಕಳಿಗೂ ತಿಳಿಸಿ.

* ಒಗಟು :
ಅಂಗಡಿಯಿಂದ ತರ್ತಾರೆ
ಅದರ ಮುಂದೆ ಕುಳಿತು ಅಳ್ತಾರೆ

* ಗಾದೆ :
ಜಟ್ಟಿ ಜಾರಿ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅಂದನಂತೆ

* ರಸಪ್ರಶ್ನೆ :
ಮೊದಲನೇ ಹವಾಮಾನ ಉಪಗ್ರಹ ಯಾವುದೋ ?

* ಉತ್ತರ :
ಒಗಟು – ಈರುಳ್ಳಿ
ರಸಪ್ರಶ್ನೆ – ಟೈ ರೋಸ್ -1

* ಸಂಗ್ರಹ
ಟಿ.ವಿ.ಪದ್ಮ ಶೇಖರ್
ಮೇಲುಕೋಟೆ


Share