MP ಸ್ನ್ಯಾಕ್ಸ್ : ತ್ರಿವಳಿ ಸಂಗ್ರಹ – 38

200
Share

ತ್ರಿವಳಿ ಸಂಗಮ : ಒಗಟು, ಗಾದೆ ಹಾಗೂ ರಸಪ್ರಶ್ನೆ
ಪುರಾತನ ಕಾಲದಿಂದಲೂ ಒಗಟುಗಳು ಹಾಗೂ ಗಾದೆಗಳು ಜನಜನಿತವಾದ ಅನುಭವಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಿರಿಯರು ಹೇಳುವ ಹಾಗೆ ಗಾದೆಗಳು ಎಂದು ಸುಳ್ಳಾಗುವುದಿಲ್ಲ. ತಾತ, ಅಜ್ಜಿ, ತಂದೆ, ತಾಯಿ ಹಾಗೂ ಹಿರಿಯರು ತಮ್ಮ ಮನೆಗಳಲ್ಲಿ ಮಕ್ಕಳು ಮಾಡಿದ ತಪ್ಪನ್ನು ತಿದ್ದಲು ಗಾದೆಗಳನ್ನು ಉದಾಹರಣೆಯಾಗಿ ಕೊಟ್ಟು ಅವರಿಗೆ ಚೆನ್ನಾಗಿ ಮನವರಿಕೆಯಾಗುವಂತೆ ಮಾಡುತ್ತಿದ್ದರು.
ಎಲ್ಲರೂ ಓದಿ ಆನಂದಿಸಿ ಮುಂದೆ ಬರುವ ನಿಮ್ಮ ಮಕ್ಕಳು ಮೊಮ್ಮಕ್ಕಳಿಗೂ ತಿಳಿಸಿ.

* ಒಗಟು :
ಬೆಳ್ಳನೆ ಮೈ ನೋನು
ಕೆಂಪನೆ ಮೂಗಿ ನೋನು
ಕರಗಿ ಕರಗಿ ಸಾಯುತ್ತಾನೆ

* ಗಾದೆ :
ಹಲ್ಲಿದ್ದವನಿಗೆ ಕಡಲೆ ಇಲ್ಲ
ಕಡ್ಲೆ ಇದ್ದವನಿಗೆ ಹಲ್ಲಿಲ್ಲ .

* ರಸಪ್ರಶ್ನೆ :
ಕರ್ನಾಟಕದ ದೊಡ್ಡ ದೇವಾಲಯ ಯಾವುದು ?

* ಉತ್ತರ :
ಒಗಟು – ಮೇಣದ ಬತ್ತಿ
ರಸಪ್ರಶ್ನೆ -ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ .

* ಸಂಗ್ರಹ
ಟಿ.ವಿ.ಪದ್ಮ ಶೇಖರ್
ಮೇಲುಕೋಟೆ


Share