MP : 1 ಲೈನ್ ಸುದ್ದಿ

181
Share

* ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ರವರು ಹಣ ವರ್ಗಾವಣೆಯಲ್ಲಿ ತೊಡಗಿದ್ದಾರೆಂದು ಇಡಿ ಅಧಿಕಾರಿಗಳು ಚಾರ್ಜ್ ಶೀಟ್ ಹೊರಿಸಿದ್ದಾರೆ.
* ಕಾಮನ್ ವೆಲ್ತ್ ಆಟಗಳಿಗೆ ಕೇವಲ 2ದಿನ ಇರುವ ಅಂತೆಯೇ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರ ಗಾಯಗೊಂಡು ಆಟದಿಂದ ಹೊರಗುಳಿದಿದ್ದಾರೆ.
* ನಗ್ನ ಚಿತ್ರಗಳಲ್ಲಿ ಕಾಣಿಸಿಕೊಂಡು ವಿವಾದಕ್ಕೆ ಒಳಗಾಗಿರುವ ನಟ ರಣವೀರ್ ಸಿಂಗ್ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
* ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ರವರ ಆಪ್ತರನ ಬಳಿ ಇದ್ದ ಇಪ್ಪತ್ತು ಕೋಟಿ ರೂ ಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
* ಇಂದು ಎರಡನೇ ಬಾರಿ ಸೋನಿಯಾ ಗಾಂಧಿ ಅವರು ಇಡಿ ವಿಚಾರಣೆಗೆ ಒಳಪಟ್ಟಿರುವುದರಿಂದ ತಾವು ಸಾರ್ವಜನಿಕರ ಮುಖವಾಣಿ ಆಗಿದ್ದೇನೆಂದು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ದೆಹಲಿಯಲ್ಲಿ ಪ್ರತಿಭಟನೆಗೆ ಇಳಿದಿದ್ದ ರಾಹುಲ್ ಗಾಂಧಿ ಅವರನ್ನು ಪೊಲೀಸರು ತಡೆಹಿಡಿದು ಬಹಳ ಕಾಲ ನಿಲ್ಲಿಸಿದ್ದರು.
* ಭಾರತದಿಂದ ಪಲಾಯನಗೊಂಡು ವಿದೇಶದಲ್ಲಿ ನೆಲೆಸಿರುವ ನೀರವ್ ಮೋದಿ ರವರ ಇನ್ನೂರೈವತ್ತು ಕೋಟಿ ರೂ ಗಳಿಗೂ ಹೆಚ್ಚಿನ ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ.
* ಅಧಿಕಾರ ವಹಿಸಿಕೊಂಡ 6ತಿಂಗಳಲ್ಲಿ ತೀವ್ರ ವಿವಾದಕ್ಕೆ ಒಳಗಾಗಿದ್ದ ಪಂಜಾಬಿನ ಅಟಾರ್ನಿ ಜರ್ನರ್ ಸಿದ್ದು ಅವರು ವೈಯಕ್ತಿಕ ಕಾರಣ ನೀಡಿ ಇಂದು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.
* ಕಾರ್ಗಿಲ್ ದಿನಾಚಾರಣೆಯ ದಿನವಾದ ಇಂದು 23 ವರ್ಷಗಳ ಹಿಂದಿನ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರಿಗೆ ನಮನ ಸಲ್ಲಿಸುವ ಮೂಲಕ ಅವರ ತ್ಯಾಗ ಬಲಿದಾನವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಗಿಸಿ ನಮನ ಸಲ್ಲಿಸಿದ್ದಾರೆ.


Share