MP : 16/07/2021 ರ ಕವನ ಸಂಗ್ರಹ

260
Share

ಮರೆಯಾದ ಚೇತನ

ಓ ನನ್ನ ನೆಚ್ಚಿನ ಗೆಳತಿಯೇ
ಆತ್ಮೀಯ ವಾತಾವರಣದ ರೂವಾರಿಯೆ
ಗೆಳತನಕ್ಕೆ ನೀನೊಂದು ಮಾದರಿ
ಹೇಗೆ ಮರೆಯಲಿ ನಿನ್ನನು
ಹೇಗೆ ಸಹಿಸಲಿ ಈ ಅಗಲಿಕೆಯ ನೋವನ್ನು
ಚೇತನ ಎಂಬ ನಿನ್ನಯ ಹೆಸರೇ ಚೈತನ್ಯದ ಚಿಲುಮೆಯಾಗಿರುವುದು ||1||

ಬಾಳ ಪಯಣದಲ್ಲಿ ನೋವುಂಡ
ಜೀವಿಗಳಿಗೆ
ನೀನೊಂದು ಸ್ಪೂರ್ತಿಯ ಆಗರವಾಗಿದ್ದೆ
ಸಾಂತ್ವನದ ಮೂರ್ತಿಯಾಗಿದ್ದೆ
ಎಲ್ಲರ ಮನಗಳಿಗೆ ಜೀವನೋತ್ಸಾಹದ ಗಂಗೆಯನ್ನು
ಹರಿಸಿದವಳು
ಮನಸ್ಸೆಂಬ ಶರಧಿಯಲ್ಲಿ ಅಲೆ ಅಲೆಯಾಗಿ ತೇಲಿದವಳು
ನಿನ್ನೆಲ್ಲಾ ನೋವುಗಳ, ವೇದನೆಗಳ ಮನವೆಂಬ ಜೋಳಿಗೆಯಲ್ಲಿ ಬಚ್ಚಿಟ್ಟು ಸದಾ
ಹಸನ್ಮುಖಿಯಾಗಿ ನಗೆಯ ಚೆಲ್ಲಿದವಳು ||2||

ಪರರ ಹಿತಕ್ಕಾಗಿ, ಒಳಿತಿಗಾಗಿ ಸದಾ ತುಡಿಯು ತಿತ್ತು ನಿನ್ನಯ ಮನ
ಈ ಭುವಿಯ ಮೇಲೆ ನಿನ್ನ ಇರುವಿಕೆಯ ಸಹಿಸದೆ ಆ ದೇವನೇ ನಿನ್ನನು ತನ್ನ ಬಳಿಗೆ ಕರೆದುಕೊಂಡಿರುವ
ಪರಹಿತಕ್ಕಾಗಿ ಈ ಜೀವನ ಎಂಬ ರೀತಿಯಲ್ಲಿ ಬದುಕಿದವಳು
ಎಲ್ಲಿ ಕುಳಿತರು, ಎಲ್ಲಿ ನಿಂತರೂ
ಮತ್ತದೇ ನೆನಪುಗಳ ಸಾಲು ಸಾಲು ಮೆರವಣಿಗೆ||3||

ನಿನ್ನಯ ಆ ನಗು, ಆತ್ಮೀಯತೆ ತುಂಬಿದ ಆ ನುಡಿಗಳ, ಪರೋಪಕಾರ ಗುಣಗಳನ್ನು
ಹೇಗೆ ಮರೆಯಲಿ ನಾನು
ಹೇಗೆ ಸಹಿಸಲಿ ನಿನ್ನ ಅಗಲಿಕೆಯ ಗೆಳತಿಯೇ
ನೀನೊಂದು ಮರೆಯದ ಮಾಣಿಕ್ಯ
ನಿನ್ನ ನಡೆ ನುಡಿಗಳು ಇತರರಿಗೆ
ಮಾದರಿ, ಆದರ್ಶಪ್ರಾಯ
ಭಗವಂತ ನಿನ್ನ ಆತ್ಮಕ್ಕೆ ಶಾಂತಿ – ನೆಮ್ಮದಿಗಳ ನೀಡಲಿ
ಇದೋ ನನ್ನ ಪ್ರೀತಿಯ ಗೆಳತಿಗೆ ಹೃದಯಪೂರ್ವಕ ನಮನಗಳು ||4||

ನಮಸ್ತೆ ಮೇಡಂ ಮೇಲ್ಕಂಡ ಕವನ ನನ್ನ ಸಹುದ್ಯೋಗಿ ಹಾಗೂ ಪ್ರೀತಿಯ ಗೆಳತಿಯನ್ನು ಕುರಿತು ಬರೆದಿರುವೆ ಕಳೆದ ವಾರ ಹೃದಯಾಘಾತದಿಂದ ಮರಣ ಹೊಂದಿದಳು ನಾಳೆ ಹನ್ನೆರಡನೇ ದಿವಸದ ಕಾರ್ಯವಿರುವುದು ನಾಳೆ ಪ್ರಕಟಿಸಿದರೆ ಉತ್ತಮ

ಎಂ.ಎಸ್. ಆಶಾಲತಾ, ಸಹಾಯಕ ವ್ಯವಸ್ಥಾಪಕರು, ಎಂಡಿಸಿಸಿಬ್ಯಾಂಕ್, ಮದ್ದೂರು (ಚನ್ನಪಟ್ಟಣ)


Share