MP-Talk: ಕಾರ್ಯಕ್ರಮದಲ್ಲಿ ಬೇಕಾ -ಕಳೆದುಕೊಳ್ಳಬೇಕ?

849
Share

ಇಂದಿನ MP ಟಾಕ್ ಕಾರ್ಯಕ್ರಮದಲ್ಲಿ ಬೇಕಾ -ಕಳೆದುಕೊಳ್ಳಬೇಕ? ಒಂದು ಬೇಕು ಎಂದರೆ ಮತ್ತೊಂದನ್ನು ಕಳೆದುಕೊಳ್ಳಲು ತಯಾರಿರಬೇಕು, ಎಂಬುದು ನಾಣ್ಣುಡಿ ಈ ಹಿನ್ನೆಲೆಯಲ್ಲಿ ಕರೋನಾ ಉದಾಸೀನ ಮಾಡಿ ಬೇಕೆನ್ನುವ ರೀತಿ ವರ್ತಿಸಿದರೆ ಜೀವವನ್ನೇ ಕಳೆದುಕೊಳ್ಳಬೇಕಾದೀತು. ಎಂದು ಮಾರ್ಮಿಕ ರೀತಿಯಲ್ಲಿ ಚರ್ಚಿಸಲಾಗುತ್ತಿದೆ. ಸರ್ಕಾರ ಏನೇ ಕ್ರಮ ತೆಗೆದುಕೊಂಡರೂ ಪ್ರತಿ ಒಬ್ಬರು ತಾನು ತನ್ನ ಜೀವ, ತನ್ನ ಕುಟುಂಬ ಎಂಬ ಸ್ವಾರ್ಥ ಜೀವನ ನಡೆಸಲೇಬೇಕಾಗಿದೆ, ಹಾಗಾದರೆ ಮಾತ್ರ ತನ್ನ ನೆರೆಹೊರೆ ತನ್ನ ಬೀದಿ ತನ್ನ ನಗರವನ್ನು ರೋಗಮುಕ್ತ ಮಾಡಬಹುದು. ಸರ್ಕಾರದ ನಿಯಮಾವಳಿಗಳಿಗೆ ಹೆದರಬೇಕಾಗಿಲ್ಲ. NO MASK-NO TALK ನಿಯಮವನ್ನು ಸ್ವಯಂ ಆಗಿ ಪ್ರತಿಯೊಬ್ಬರು ಅಭ್ಯಾಸ ಮಾಡಿದರೆ ಕರೋನವನ್ನು ಕ್ಷಣಮಾತ್ರದಲ್ಲೇ ದೂರ ಇಡಬಹುದು ಮುಂತಾದ ವಿಷಯಗಳು ಹಿಂದಿನ ಚರ್ಚೆಯಲ್ಲಿ ವ್ಯಕ್ತವಾಗಿದೆ .


Share