Some Thing Special: ಹೀರೆಕಾಯಿ ದೋಸೆ

1240
Share

………?….ಹೀರೆಕಾಯಿ ದೋಸೆ ……..?……..

ಹೀರೆಕಾಯಿ ದೋಸೆ ಮಾಡುವುದು ಸುಲಭ …ಒಳ್ಳೆ ರುಚಿ …ದಕ್ಷಿಣ ಕನ್ನಡದವರು ಪೋಡಿ ಎಂತಲೂ ಕರೀತಾರೆ …ಇದನ್ನು ಯಾವುದೇ ಮೃದುವಾದ ತರಕಾರಿ ಇಂದ ಅಂದರೆ ಬಾಳೆಕಾಯಿ …ದುಂಡು ಬದನೇಕಾಯಿ ….ಆಲೂಗಡ್ಡೆ ಇಂದಲೂ ಮಾಡಬಹುದು

ವಿಧಾನ : ಒಂದು ಪಾವು ಅಕ್ಕಿಗೆ ಒಂದು ಟೇಬಲ್ ಚಮಚ ಉದ್ದಿನಬೇಳೆ ಒಂದು ಟಿ ಚಮಚ ಜೀರಿಗೆ ಮೆಂತ್ಯ ಧನಿಯಾ ಬೀಜ , ನಾಲ್ಕು ಬ್ಯಾಡ್ಗಿ ಮೆ ಕಾಯಿ, ಒಂದು ಗೋಲಿಗಾತ್ರ ಹುಣಿಸೆಹಣ್ಣು ಎಲ್ಲವನ್ನೂ ನೀರಿನಲ್ಲಿ 4 ಗಂಟೆ ನೆನೆಸಿ ನುಣ್ಣಗೆ ರುಬ್ಬಿ.(ದೋಸೆ ಹಿಟ್ಟಿನ ಹದ ಇರಲಿ)…ಹೀರೆಕಾಯಿ ಸಿಪ್ಪೆ ತೆಗೆದು ಸಣ್ಣ ಬಿಲ್ಲೆಗಳನ್ನು ಹೆಚ್ಚಿ…ಹಿಟ್ಟಿನಲ್ಲಿ ಅದ್ದಿ , ಕಾದ ತವಾ ಮೇಲೆ ಎಣ್ಣೆ ಸವರಿ ಒಂದರ ಪಕ್ಕ ಒಂದನ್ನು ದುಂಡಾಕಾರದಲ್ಲಿ ದುಂಡಾಕಾರದಲ್ಲಿ ಜೋಡಿಸಿ…ಎರಡು ನಿಮಿಷ ಬೇಯಿಸಿ…ತಿರುಗಿಸಿ …ತಟ್ಟೆಗೆ ರವಾನಿಸಿ…. ಬಿಸಿ ಬಿಸಿ ಹೀರೆಕಾಯಿ ದೋಸೆ/ಪೋಡಿ ರೆಡಿ…..ತೆಂಗಿನ ಚಟ್ನಿ ಜೊತೆ ಇದ್ದರೆ ಬಲು ರುಚಿ ಅಥವಾ ದೋಸೆ ಹಿಟ್ಟನ್ನು ಸ್ವಲ್ಪ ಖಾರ ಮಾಡಿದರೆ ಚಟ್ನಿ ಅವಶ್ಯಕತೆ ಇಲ್ಲ…ಮಾಡಿ.? ರುಚಿ ಸವಿಯಿರಿ …ಅನುಭವ ಹಂಚಿಕೊಳ್ಳಿ

ಶ್ರೀ, ಪ್ರಭಾಕರ.
ನಿವೃತ್ತ ವ್ಯವಸ್ಥಾಪಕರು
ಕೆನರಾ ಬ್ಯಾಂಕ್
ಮೈಸೂರು,


Share