ಮೈಸೂರು-ಯೋಗ ನಕ್ಷತ್ರ ಪ್ರಶಸ್ತಿ ಪ್ರದಾನ

170
Share

ಯೋಗ ನಕ್ಷತ್ರ ಪ್ರಶಸ್ತಿ ಪ್ರದಾನ 

ಯೋಗ ನಕ್ಷತ್ರ ಪ್ರಶಸ್ತಿ ಪ್ರದಾನ

ಯೋಗಪಟುಗಳಿಗೆ ಯೋಗ ನಕ್ಷತ್ರ ಪ್ರಶಸ್ತಿ ಪ್ರದಾನ
ಗಮನ ಸೆಳೆದ ಯೋಗಪಟುಗಳ ಯೋಗ ನೃತ್ಯ
ಮೈಸೂರು, ಜೂ.23- ಮೈಸೂರು ರಂಗಾಯಣದ ಭೂಮಿಗೀತದಲ್ಲಿ ನವಾಯು ಕೇರ್ ಸೆಂಟರ್ ಹಾಗೂ ಹಿಮಾಲಯ ಪ್ರತಿಷ್ಠಾನದ ಸಹಯೋದೊಂದಿಗೆ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗ ಛಾಯಾಚಿತ್ರ ಸ್ಪರ್ಧೆ, ಪ್ರದರ್ಶನ ಹಾಗೂ ಯೋಗ ಸಾಧಕರಿಗೆ ಯೋಗ ನಕ್ಷತ್ರ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು, ಯೋಗ ಪಟುಗಳಾದ ಸಂತೋಷ್ ಕುಮಾರ್, ಎಂ.ಆರ್.ಕಿಶೋರ್, ಶಿವಪ್ರಕಾಶ್ ವಾಸುದೇವ್, ಕಿರಣ್, ಶ್ರೀಹರಿ ಅಯ್ಯಂಗಾರ್ ಹಾಗೂ ಆರ್. ಅಂಕಿತಾ ಅವರಿಗೆ ಯೋಗ ನಕ್ಷತ್ರ ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಅವರು, ನಮ್ಮ ರಂಗಾಯಣದಲ್ಲಿ ದಿನ ನಿತ್ಯ ಚಟುವಟಿಕೆಯಲ್ಲಿ ಯೋಗದಿಂದ ಪ್ರಾರಂಭಗೊಳ್ಳುವುದು.

ಸಾಧನೆಯ ಮುಂದೆ ಸನ್ಮಾನಗಳು ಗಿನ್ನಿಸ್ ದಾಖಲೆ ಮಾಡುವದು ದೊಡ್ಡದಲ್ಲ. ಸನ್ಮಾಗಳು ಸಾಧನೆಗಳಿಗೆ ಇನ್ನಷ್ಟು ಪ್ರೇರಣೆಯಾಗಲಿವೆ ಎಂದರು.

ಯೋಗ ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ. ದೇಹ ಮತ್ತು ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳಲು ಯೋಗ ಸಹಕಾರಿಯಾಗಿದೆ.

ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ವಿಶ್ವದೆಲ್ಲೆಡೆ ಯೋಗ ದಿನ ಆಚರಿಸಲಾಗಿದೆ. ಯೋಗ ನಮ್ಮ ಪರಂಪರೆಯಾಗಿದ್ದು, ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ನಿತ್ಯ ಯೋಗ ಮಾಡಬೇಕು ಎಂದು ಸಲಹೆ ನೀಡಿದರು.

ನವಾಯು ಕೇರ್ ನ ಮಧುಮೇಹ ತಜ್ಞ ಡಾ. ರೇಣುಕಾಪ್ರಸಾದ್ ಮಾತನಾಡಿ, ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಯೋಗದ ಮಹತ್ವವೇನು ಎಂಬುದನ್ನು ತಿಳಿಸಿದರು.

ಬಳಿಕ ರಂಗಾಯಣದ ಎದರು ವಿವೇಕಾನಂದ ಯೋಗ ಸಂಶೋಧನಾ ಕೇಂದ್ರ ಹಾಗೂ ಇತರೆ ಯೋಗ ಕೇಂದ್ರಗಳಲ್ಲಿ ಯೋಗಾಭ್ಯಾಸ ಮಾಡುತ್ತಿರುವ ಯೋಗ ಪಟುಗಳು ಯೋಗ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದರು.

ವಿವೇಕಾನಂದ ಯೋಗ ಸಂಶೋಧನಾ ಕೇಂದ್ರದ ಡಾ.ಪಿ.ಎನ್.ಗಣೇಶ್‌ಕುಮಾರ್, ನಿರ್ಮಾಪಕ ಡಾ.ಎಸ್.ವೆಂಕಟೇಶ್, ನ್ಯೂಡಯಾ ಕೇರ್ ಸೆಂಟರ್‌ನ ಡಾ.ಎ.ಆರ್.ರೇಣುಕಾಪ್ರಸಾದ್, ಕೆ.ಆರ್.ನಗರ ಪತಂಜಲಿ ಯೋಗ ಭವನದ ಡಾ.ಪಿ.ಆರ್.ವಿಶ್ವನಾಥ್ ಶೆಟ್ಟಿ, ಹಿಮಾಲಯ ಪ್ರತಿಷ್ಠಾನದ ಎನ್.ಅನಂತು, ವ್ಯಂಗ್ಯಚಿತ್ರಕಾರ ನಾಗೇಂದ್ರ ಬಾಬು, ಮಹೇಶ್ ನಾಯಕ್, ಬಸವರಾಜು , ಹರ್ಷ ವರ್ಧನ, ಮತ್ತಿತರರು ಉಪಸ್ಥಿತರಿದ್ದರು.

 

 


Share