ಪಾಟ್ನ ಹೋಟೆಲೊಂದರಲ್ಲಿ ಭಾರೀ ಅಗ್ನಿ ಅವಘಡ

47
Share

ಪಾಟ್ನಾ: ಪಾಟ್ನಾ ಜಂಕ್ಷನ್ ರೈಲ್ವೆ ನಿಲ್ದಾಣದ ಸಮೀಪವಿರುವ ಹೋಟೆಲ್‌ನಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧೀಕ್ಷಕ ರಾಜೀವ್ ಮಿಶ್ರಾ ಅವರ ಪ್ರಕಾರ, ಅಗ್ನಿಶಾಮಕ ದಳದವರು ಕಿಕ್ಕಿರಿದ ಪ್ರದೇಶದಲ್ಲಿರುವ ಕಟ್ಟಡದಿಂದ 20 ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ.
“ಬೆಂಕಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅವರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ” ಎಂದು ಮಿಶ್ರಾ ಪಿಟಿಐಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಡಿಐಜಿ (ಅಗ್ನಿಶಾಮಕ), ಮೃತ್ಯುಂಜಯ್ ಕುಮಾರ್ ಚೌಧರಿ ಸುದ್ದಿಗಾರರೊಂದಿಗೆ ಮಾತನಾಡಿ, “ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಾಹಿತಿ ಬಂದಿದ್ದರಿಂದ ನಾವು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದೇವೆ, ಸರಿಯಾದ ತನಿಖೆಯ ಮೂಲಕ ಕಾರಣವನ್ನು ಕಂಡುಹಿಡಿಯಲಾಗುವುದು ಮತ್ತು ಸೂಕ್ತ ಕ್ರಮ ಅನುಸರಿಸಲಾಗುವುದು ” ಎಂದು ತಿಳಿಸುದ್ದಾರೆ.
ಪ್ರಾಥಮಿಕ ಸಾಕ್ಷ್ಯದ ಪ್ರಕಾರ ಸಿಲಿಂಡರ್ ಸ್ಫೋಟವು ಕಾರಣ ಎನ್ನುವುದು ಕಂಡು ಬರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಈಗ ಬೆಂಕಿಯನ್ನು ನಂದಿಸಲಾಗಿದೆ.


Share