ಕರೋನ-ರೈತರಿಂದ ತರಕಾರಿಗಳನ್ನು ಖರೀದಿಸಿ: ವಿತರಣೆ

650
Share

 

 

ಮೈಸೂರು ಜಿಲ್ಲಾನಗರ ಬ್ರಾಹ್ಮಣ ಸಂಘದಿಂದ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ನಾಗರೀಕರಿಗೆ ರೈತರಿಂದ ತರಕಾರಿಗಳನ್ನು ಖರೀದಿಸಿ ಚಾಮುಂಡಿಪುರಂ ಬಡಾವಣೆಯಲ್ಲಿರುವ ಅಪೂರ್ವ ಹೋಟೆಲ್ ಮುಂಭಾಗ ವಿತರಿಸಲಾಯಿತು.. ರೈತರಿಂದ
4ಟನ್ ಟೊಮೇಟೋ, 1ಟನ್ ಎಲೆಕೋಸು, 2ಟನ್ ದಪ್ಪ ಮೆಣಸಿನಕಾಯಿ, ೧ಟನ್ ಸೋರೆಕಾಯಿ ಪಡವಳಕಾಯಿ, ಖರೀದಿಸಿ ನೇರ ನಾಗರೀಕರಿಗೆ ಬ್ರಾಹ್ಮಣ ಸಂಘದಿಂದ ಉಚಿತವಾಗಿ ನೀಡಲಾಯಿತು,

ಇದೇ ಸಂಧರ್ಭದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್ ರವರು ಮಾತನಾಡಿ ಮೈಸೂರಿನಲ್ಲಿ ಈಗಾಗಲೇ ಕೋವಿಡ್ ೨ನೇ ಅಲೆಯಿಂದ ಸಾಕಷ್ಟು ಮಂದಿ ಆರ್ಥಿಕ ಸಂಕಷ್ಟದಲ್ಲಿದ್ದಾರೆ, ಪರೋಪಕಾರ್ಯಂ
ಇದಂ ಶರೀರಂ ಎಂಬಂತೆ ನಾವು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವೀಯತೆಯ ಗುಣ, ಹಾಗಾಗಿ ಇಂದು ಬ್ರಾಹ್ಮಣ ಸಂಘದಿಂದ ನಾಗರೀಕರಿಗೆ ನೆರವಾಗಲೆಂದು ರೈತರಿಂದ ಉಚಿತವಾಗಿ ತರಕಾರಿಗಳನ್ನು ಖರೀದಿಸಿ ವಿತರಿಸಲಾಗುತ್ತಿದೆ, ರೈತಟಪಿ ವರ್ಗವು ಸಹ ತೊಂದರೆಯಲ್ಲಿದೆ ಉತ್ತಮ ಬೆಳಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಕಂಗಾಲಾಗಿದ್ದರು ಹಾಗಾಗಿ ಬ್ರಾಹ್ಮಣ ಸಂಘದಿಂದ ರೈತಾಪಿ ಬೆಳೆಯನ್ನು ಬೆಂಬಲಿಸಿ ಸಂಕಷ್ಟದಲ್ಲಿರುವ ನಾಗರೀಕರಿಗೆ ತರಕಾರಿ ವಿತರಿಸಿ ಸಹಾಯ ನೀಡಲಾಗುತ್ತಿದೆ, ಅಲ್ಲದೇ ಮೈಸೂರು ಭಾಗದಲ್ಲಿ ವಿಪ್ರರು ಮೃತರಾದವರ ಅಂತ್ಯಸಂಸ್ಕಾರದ ನೆರವಿಗೆ ಬ್ರಾಹ್ಮಣ ಸಂಘದಿಂದ ವಿಪ್ರಸಹಾಯವಾಣಿ ತೆರೆದಿದ್ದು 7829067769 ಸಂಪರ್ಕಿಸಬಹುದಾಗಿದೆ ಎಂದರು.

ನಗರಪಾಲಿಕೆ ಸದಸ್ಯ ಜಗದೀಶ್, ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್, ಕಾರ್ಯದರ್ಶಿ ಅಪೂರ್ವ ಸುರೇಶ್,ಎಂಐಟಿ ಕಾಲೇಜಿನ ಮುರಳಿ, ಟಿಎಸ್ ರವಿಶಂಕರ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರು ಕೆ.ಆರ್ ಸತ್ಯನಾರಾಯಣ್,ವಿಪ್ರ ಯುವ ಮುಖಂಡ ಕಡಕೊಳ ಜಗದೀಶ್, ಜಯಸಿಂಹ,ಮೈಸೂರು ಜಿಲ್ಲಾ ಬ್ರಾಹ್ಮಣ ಯುವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಚಕ್ರಪಾಣಿ, ಸುಚೀಂದ್ರ, ಪ್ರಶಾಂತ್ ,ಪ್ರದೀಪ್ ,ಹಾಗೂ ಇನ್ನಿತರರು ಇದ್ದರು.


Share