ಅಬ್ದುಲ್ ಕಲಾಂ, ಜನ್ಮದಿನೋತ್ಸವ: ಸಸಿ ನೆಡುವ ಕಾರ್ಯಕ್ರಮ

727
Share

ಪರಿವರ್ತನಂ ಟ್ರಸ್ಟ್ ವತಿಯಿಂದ ರಾಷ್ಟ್ರಪತಿ ಭಾರತರತ್ನ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನೋತ್ಸವದ ಅಂಗವಾಗಿ ಕುವೆಂಪುನಗರದಲ್ಲಿರುವ ಸೌಗಂಧಿಕಾ ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು, ಗಿಡನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೈಡಿ ರಾಜಣ್ಣ ಸರಳತೆ ಪ್ರಾಮಾಣಿಕತೆ ಅಂತಃಕರಣ ಸಾಕ್ಷಿಪ್ರಜ್ಞೆಯಾಗಿದ್ದವರು ಅಬ್ದುಲ್ ಕಲಾಂ ರವರು, ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದವರು ವಿಜ್ಞಾನಿಯೊಬ್ಬ ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ರಾಷ್ಡ್ರಪತಿಯಾಗಿ ಹೃದಯ ಘನತೆ ಯನ್ನು ಹೆಚ್ಚಿಸಿದ್ದರು, ಜನಸಾಮನ್ಯರ ರಾಷ್ಟ್ರಪತಿ ಎಂಬ ಕೀರ್ತಿಗೆ ಪಾತ್ರರಾದರು,
ತಮಿಳುನಾಡು ಜಿಲ್ಲೆಯ ರಾಮೇಶ್ವರದಲ್ಲಿ ಜನಿಸಿದ ಕಲಾಂ ರವರು ಉಪನ್ಯಾಸಕರಾಗಿ ಲೇಖಕರಾಗಿ ವಿಜ್ಞಾನಿಯಾಗಿ ಅಂತರಿಕ್ಷಯಾನದ ಇಂಜಿನಿಯರ್ ಆಗಿ ರಾಷ್ಟ್ರಪತಿಯಾಗಿ ಅಸಾಧಾಕರಾಗಿ ಸಾಧನೆ ಮಾಡಿದ ಅಸಾಮಾನ್ಯರು ಎಂದು ಹೇಳಿದರು,
ನಂತರ ಮಾತನಾಡಿದ ಯುವ ಮುಖಂಡ ಎನ್ಎಂ ನವೀನ್ ಕುಮಾರ್
ನಾಲ್ಕು ದಶಕಗಳ ಕಾಲ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿ.ಆರ್.ಡಿ ಓ ಮತ್ತು ಇಸ್ರೋ ಸಂಸ್ಥೆಯಲ್ಲಿ ಕ್ಷಿಪಣಿ ಅಭಿವೃದ್ಧಿ ಪ್ರಯತ್ನದಲ್ಲಿ ನಿಷ್ಠೆ ಹಾಗೂ ಬದ್ಧತೆಯಿಂದ ತಮ್ಮನ್ನು ಭಸರತದ ಕ್ಷಿಪಣಿ ಮಾನವ ಎಂದೆ ಖ್ಯಾತರಾದರು
ಕಲಾಂ ಅವರ ವಿಂಗ್ಸ್ ಆಫ್ ಫೈಯರ್ ಆತ್ಮಕಥೆಯಾಗಿ ಹೊರಬಂದಿದ್ದು ಸಾಧಾರಣ ವ್ಯಕ್ತಿಯೊಬ್ಬ ಹೇಗೆ ಅಸಾಮಾನ್ಯ ಸಾಧನೆ ಮಾಡಲು ಸಾಧ್ಯವಾಯಿತು ಎಂಬುದನ್ನು ಈ ಕೃತಿಯಿಂದ ತಿಳಿಯಬಹುದಾಗಿದೆ ಜೀವನದಲ್ಲಿ ಶಿಸ್ತು ನಿಯಮ ಸಂಯಮ ಪ್ರಮಾಣಿಕತೆ ಕೆಲಸದಲ್ಲಿ ಶ್ರದ್ಧೆ ಇವೆಲ್ಲಾ ಮನಸ್ಸಿನ ದಾರಿಗಳು ಎಂದರು .


Share