ಎಂಪಿ – ಕವನ ಸಂಗ್ರಹ;ಬದುಕು…….!- ರಾಮ್

52
Share

 

*ಬದುಕು…….!*

ಬದುಕೆಂದರೆ
ಸುಂದರ ಮುಖವಾಡದ
ಕೃತಕ ನಗುವಿನ
ಜವಾಬ್ದಾರಿಗಳ ಕುಲುಮೆಯಲ್ಲಿ
ಪ್ರತಿ ದಿನ ಬೇಯುವ,
ನನಸಾಗದ ಕನಸುಗಳ
ಬೆನ್ನೇರಿ ಹೋಗುವ
ಹುಂಬತನವಲ್ಲ……..!

ಬದುಕೆಂದರೆ
ಸುಂದರ ಉದ್ಯಾನವನ,
ಸಾರ್ಥಕ ಕೆಲಸಗಳ
ಸಾಕಾರಗೊಳಿಸಿ,
ಪ್ರತಿದಿನ ಸಂತೃಪ್ತಿಯ
ಮನಸುಗಳ ಸೇರಿ,
ಸಂಭ್ರಮಿಸುವ ಸಡಗರ.

*ಖುಷಿಯಾಗಿರಿ – ಹೃದಯವಂತರಾಗಿರಿ*

*ರಾಮ್ ಮೈಸೂರು*


Share