ಕಲಾದಾರೆ ಸಂಸ್ಥೆ-ಚಿಣ್ಣರ ಲೋಕ’ ಮಕ್ಕಳ ಬೇಸಿಗೆ ಶಿಬಿರ ಆರಂಭ

144
Share

ಮೈಸೂರಿನ ಹೆಸರಾಂತ ಕಲಾಧಾರೆ ಕಲ್ಬರಲ್ ಟ್ರಸ್ಟ್ ಸಂಸ್ಥೆ ವತಿಯಿಂದ ಮಾಸ್ಟರ್ ಎನ್ ಬ್ಲಾಸ್ಟರ್ ನೃತ್ಯ ಸಂಸ್ಥೆಯ ವತಿಯಿಂದ ಕಳೆದ 22 ವರ್ಷಗಳಿಂದ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಚರಿಸಿಕೊಂಡು ಬರುತ್ತಿದೆ ಹಾಗೂ ಜಿಲ್ಲಾ ಮಟ್ಟದಲ್ಲಿ ರಾಜ್ಯಮಟ್ಟದಲ್ಲಿ ರಾಷ್ಟ್ರೀಯ ಮಟ್ಟಗಳಲ್ಲೂ ಕಲಾ ಪ್ರದರ್ಶನ ನೀಡುತ್ತಾ, ಇನ್ನೂ ವೈವಿದ್ಯಮಯ ರೀತಿಯಲ್ಲಿ ಸಾಧಿಸುವುದಕ್ಕೆ ನಿರಂತರವಾಗಿ ಶ್ರಮಿಸುತ್ತಿದೆ. ಸಂಸ್ಥೆಯ ಮೂಲಕ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ‘ಚಿಣ್ಣರ ಲೋಕ’ ಮಕ್ಕಳ ಬೇಸಿಗೆ ಶಿಬಿರವನ್ನು ಸಹ ಆಯೋಜಿಸುತ್ತಾ ಬರುತ್ತಿದೆ. ಈ ವರ್ಷವು ಸಹ ಈ ಶಿಬಿರವು ಇದೇ ಏಪ್ರಿಲ್ 11 ರಿಂದ ಮೇ 11 ರವರೆಗೆ, ಕನ್ನಡ ವಿಕಾಶ ಶೈಕ್ಷಣಿಕ, ಸಾಮೂಹಿಕ ಸಾಂಸ್ಕೃತಿಕ ಸಂಸ್ಥೆ, ನೃಪತುಂಗ ಕನ್ನಡ ಶಾಲೆ, ರಾಮಕೃಷ್ಣನಗರ, ಶ್ರೀ ಸಾಯಿಬಾಬ ದೇವಸ್ಥಾನ ಹತ್ತಿರ ನಡೆಯಲಿದೆ. ಶಿಬಿರದಲ್ಲಿ ವೈವಿದ್ಯಮಯ ನೃತ್ಯಗಳು, ಸಂಗೀತ (ಹಾಡುಗಾರಿಕೆ) ನಾಟಕ, ಚಿತ್ರಕಲೆ, ಯೋಗ, ಕರಾಟೆ ಇನ್ನೂ ಮುಂತಾದ ಪ್ರಕಾರಗಳಲ್ಲಿ ಸಾಧಕರನೇಕರು ಮಕ್ಕಳನ್ನು ತರಬೇತಿಗೊಳಿಸಲಿದ್ದಾರೆ. ಜೊತೆಗೆ, ವಿಶೇಷತೆಯಿಂದ ಕೂಡಿದ ಪ್ರಾತ್ಯಕ್ಷಕಗೆಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪರಿಣಿತರು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಶಿಭಿರಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿದ್ದಾರೆ. ಶಿಬಿರದ ಅಂತ್ಯದಲ್ಲಿ ಶಿಬಿರಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ ಎಂದು ಸಂಸ್ಥೆಯ ಅದ್ಯಕ್ಷರಾದ ಹಾಗೂ ನೃತ್ಯ ನಿರ್ದೇಶಕರಾದ ಚಾಮರಾಜ್‌ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ:- #3, ಶ್ರೀರಾಂಪುರ, 2ನೇ ಹಂತ, ಪೆಟ್ರೋಲ್ ಬಂಕ್ ಹತ್ತಿರ,
ವಿವೇಕಾನಂದನಗರ (ಸರ್ಕಲ್), ಮೈಸೂರು 570023.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ 9880777121-9886389214

Share