ಕೆಆರ್ ಕ್ಷೇತ್ರದ ಶಾಸಕರಿಂದ ಆಯುಷ್ ಕಿಟ್ ವಿತರಣೆ

382
Share


ವಾರ್ಡ್ ನಂ. 56 ಹಾಗೂ 60 ರಲ್ಲಿ ಇರುವ ಕಂಟೈನ್ ಮೆಂಟ್ ಜೋನ್ ನಲ್ಲಿ ಇರುವ ಸೊಂಕಿತರ ಮನೆಯಲ್ಲಿ ಇರುವವರಿಗೆ ರೋಗ ನಿರೋದಕ ಶಕ್ತಿ ವೃದ್ಧಿಸಲು ಶಾಸಕರಾದ ಎಸ್.ಎ.ರಾಮದಾಸ್ ರವರಿಂದ ಆಯುಶ್ ಕಿಟ್ ವಿತರಸಿ ವಾರ್ಡ್ ಪಾದಯಾತ್ರೆ ನಡೆಸಿದರು.
ಇಂದು ಶಾಸಕರಾದ ಎಸ್.ಎ.ರಾಮದಾಸ್ ರವರು ವಾರ್ಡ್ ನಂ. 56 ಹಾಗೂ 60 ರಲ್ಲಿ ಅಂಬೇಡ್ಕರ್ ಉದ್ಯಾನವನದಲ್ಲಿ ಡಾ||ಬಿ.ಆರ್.ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿದ ನಂತರ ಕೊರೊನಾ ಸೊಂಕಿನಿಂದಾಗಿರುವ ಕಂಟೈನಮೆಂಟ್ ಜೋನ್ ಗಳಿಗೆ ಭೇಟಿ ನೀಡಿ ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕ ಹೊಂದಿದ್ದವರ ಆರೋಗ್ಯ ವಿಚಾರಿಸಿ ಅಗತ್ಯ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಸ್ಯಾನಿಟೈಜ್ ಹಾಗೂ ಸ್ಥಳೀಯ ನಿವಾಸಿಗಳ ಆರೋಗ್ಯವನ್ನು ವಿಚಾರಿಸಿ ಸಮಸ್ಯೆಗಳು ಇದ್ದಲ್ಲಿ ಪರಿಹಾರಕ್ಕೆ, ಸಂಬಂಧಿಸಿದ ಕೊವಿಡ್ ಅಧಿಕಾರಗಳ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿ ಆರೋಗ್ಯ ಕಿಟ್ ನೀಡುವ ಮೂಲಕ ಕಂಟೇನ್ ಮೆಂಟ್ ಜೋನ್ ಗಳಲ್ಲಿ ಆರೋಗ್ಯ ವಿಚಾರಿಸಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಎಸ್.ಎ.ರಾಮದಾಸ್ ರವರು ಮಾತನಾಡಿ ನಮ್ಮ ಕ್ಷೇತ್ರವನ್ನು ಕೋವಿಡ್ ನಿಂದ ಶೂನ್ಯ ಸಾವಿನ ಕ್ಷೇತ್ರವನ್ನಾಗಿಸಲು ಟಾಸ್ಕ್ ಫೂರ್ಸ್ ನ ತಂಡದವರು ಹಗಲು ರಾತ್ರಿ ದುಡಿಯುತಿದ್ದು, ಎಲ್ಲಾ ವಾರ್ಡ್ ಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು, ಡಯಾಲಿಸಿಸ್, ಕ್ಯಾನ್ಸರ್ ನಿಂದ ಬಳಲುತ್ತಿರುವವರ ಪಟ್ಟಿ ಮಾಡಿಕೊಂಡು ದಿನನಿತ್ಯ ಆರೋಗ್ಯ ಕಾರ್ಯಕರ್ತರು ಭೇಟಿ ಮಾಡಿ ಆರೋಗ್ಯ ವಿಚಾರಿಸುತಿದ್ದು ಯಾರಿಗಾದರು ರೋಗದ ಲಕ್ಷಣಗಳು ಇರಲಿ ಅಥವ ಇಲ್ಲದೇ ಇರಲಿ ಇಂತವರನ್ನು ಕೂಡಲೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇವರಿಗೆ ಸೂಕ್ತ ಸಮಯದಲ್ಲಿ ಪರೀಕ್ಷೆಗೆ ಒಳಪಡಿಸುತ್ತಿರುವುದರಿಂದ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.
ಈ ಭಾಗದಲ್ಲಿ ಇರುವ ಗರಡಿಯ ಅಭಿವೃದ್ಧಿ, ದೇವಸ್ಥಾನದ ಅಭಿವೃದ್ಧಿ, ಓಳ ಚರಂಡಿಯ ಸಮಸ್ಯೆಗಳು ಮತ್ತು ನಿರ್ಮಾಣವಾಗಿರುವ ಅಂಬೇಡ್ಕರ್ ಮುಖ್ಯ ರಸ್ತೆಯಲ್ಲಿ ಎರೆಡು ಕಡೆ ಫುಟ್ ಪಾತ್ ಕೆಲಸ ಆಗಬೇಕಿರುತ್ತದೆ ಎಂಬ ಸಮಸ್ಯೆಗಳನ್ನು ತಿಳಿಸಿದ್ದು ಇದರ ಜೊತೆಯಲ್ಲೆ ಕಳೆದ 30 ವರ್ಷ್ ಗಳ ಕಾಲದಿಂದ ವಿಳ್ಳೆದೆಲೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಹುಡುಕಬೇಕು ಎನ್ನುವ ಮನವಿ ಮಾಡಿರುತ್ತಾರೆ, ಎರೆಡು ಕ್ರಾಸ್ ಗಳಲ್ಲಿ ಕುಡಿವ ನೀರಿನ ಸಮಸ್ಯೆಗ ಬಗ್ಗೆ ಸಾರ್ವಜನಿಕರು ತಿಳಿಸಿರುತ್ತಾರೆ ಈ ವಿಷಯಗಳಿಗಾಗಿ ನೆರೆದಿದ್ದ ಅಧಿಕಾರಿಗಳಿಗೆ ಸ್ಥಳದಲ್ಲೆ ಸಮಸ್ಯೆ ಭಗೆಹರಿಸಲು ತಿಳಿಸಲಾಯಿತು. ಅಶೋಕಪುರಂ ನಲ್ಲಿ ಇರುವ ಸಂಘ ಸಂಸ್ಥೆಗಳು ಯಜಮಾನರು ಆಗುವ ಕಾಮಗಾರಿಗಳಿಗೆ ಸಹಕರಿಸಬೇಕೆಂದು ಮನವಿಮಾಲಾಗಿದೆ. ಅಶೊಕಪುರಂನ 1 ನೇ ಕ್ರಾಸ್ ನಿಂದ 13 ಕ್ರಾಸ್ ವರಗೆ ಭಾಗದಲ್ಲಿ ಇರುವ ಮನೆಗಳಿಗೆ ಮೂಲ ದಾಖಲಾತಿಗಳು ಇಲ್ಲದೆ ಸಮಸ್ಯೆ ಆಗುತ್ತಿದ್ದು ಇದನ್ನು ಬಗೆಹರೆಸಲು ಸಂಬಂಧ ಪಟ್ಟ ಅಧಿಕಾರಿಗಳನ್ನು ಒಟ್ಟಿಗೆ ಕರೆದು ಕೋವಿಡ್ ಸಮಸ್ಯೆ ಭಗೆಹರೆದ ಮೇಲೆ ಅಂಬೇಡ್ಕರ್ ಉದ್ಯಾನವನದಲ್ಲಿ ಕ್ಯಾಂಪ್ ಕರೆದು ಎಲ್ಲಾ ಮನೆಗಳಿಗೆ ಸೂಕ್ತ ದಾಖಲಾತಿ ಒದಗಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಲಾಯಿತು. ಇದರಿಂದ ಸುಮಾರು ಸಾವಿರಾರು ಮನೆಗಳ ಸಮಸ್ಯೆ ಬಗೆಹರೆಯಲಿದೆ ಎಂದು ತಿಳಿಸಿದರು. ಇಂದು ನಡೆದ ಪಾದಯಾತ್ರೆಯಲ್ಲಿ ಸಹಕರಿಸಿದ ಅಧಿಕಾರಿಗಳಿಗೆ, ಸ್ಥಳೀಯ ಯಜಮಾನರು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು. ಅಶೋಕಪುರಂ ಭಾಗಗಳಲ್ಲಿ ಚಿಕ್ಕ ಮನೆಗಳಲ್ಲಿ 2 ರಿಂದ 3 ಸಂಸಾರಗಳು ವಾಸಿಸುತಿದ್ದು ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಕಾರ್ಯಕ್ಕೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಪೌರ ಕಾರ್ಮಿಕ ಕಾಲೋನಿಯಲ್ಲಿ ಮಾದರಿ ರೀತಿಯಲ್ಲಿ ಮನೆಗಳನ್ನು ನಿರ್ಮಿಸಿದ್ದು ಮೈಸೂರು ಮಹಾ ನಗರದಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಇದೊಂದು ಮಾದರಿಯಾಗಿದೆ ಎಂದು ಹೌಸಿಂಗ್ ಬೋರ್ಡ್ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು


Share