ಬಂಧಿತ ರವಿ ನಾಳಿದ್ದು ಮೈಸೂರಿಗೆ- ಪೊಲೀಸ್ ಹಿರಿಯ ಅಧಿಕಾರಿ ಪತ್ರಿಕಾಗೋಷ್ಠಿ

350
Share

ಮೈಸೂರು, ಸ್ಯಾಂಟ್ರೋ ರವಿ ಅವರನ್ನು ಗುಜರಾತಿನ ಅಹಮದಾಬಾದಿನಲ್ಲಿ ಬಂಧಿಸಲಾಗಿದೆ ಎಂದು  ಹಿರಿಯ ಪೊಲೀಸ ಅಧಿಕಾರಿ ಅಲೊಕ್ ಕುಮಾರ್ ಅವರು ತಿಳಿಸಿದ್ದಾರೆ. ಅವರು ಅವರು ಇಂದು ಸಂಜೆ ಮೈಸೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ರಾಜ್ಯದ ಮುಖ್ಯಮಂತ್ರಿ, ಬಸವರಾಜ್ ಬೊಮ್ಮಾಯಿಯವರು ಸ್ಯಾಂಟ್ರೋ ರವಿಯನ್ನು ಶೀಘ್ರದಲ್ಲಿ ಬಂಧಿಸಲು ಸೂಚನೆ ನೀಡಿದ್ದರು ಎಂದು ಹೇಳಿದರು. 

ಪತ್ರಿಕಾಗೋಷ್ಠಿಯ ಸಂಕ್ಷಿಪ್ತ ವಿವರ.

 ಇಂದು ಮಧ್ಯಾಹ್ನ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗಿದೆ. ಸ್ಯಾಂಟ್ರೋ ರವಿಯರನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ಪೊಲೀಸ್ ಹಿರಿಯ ಅಧಿಕಾರಿ ಅಲೊಕ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಸ್ಯಾಂಟ್ರೋಲಿಗೆ ಸಹಕರಿಸಿದ ವ್ಯಕ್ತಿಗಳನ್ನು ತನಿಖೆ ಮಾಡಲಾಗುತ್ತಿದೆ.
ಗುಜರಾತ್ ನ್ಯಾಯಾಲಯಕ್ಕೆ ಇಂದು ಹಾಜರಿ ಪಡಿಸಲಾಗುವುದು ನಾಡಿದ್ದು ಮೈಸೂರಿಗೆ ಕರೆತರಲಾಗುವುದು ಎಂದು ಪೊಲೀಸ ಅಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ತಲೆಮರಸಿಕೊಳ್ಳಲು ಸಹಕರಿಸಿದ್ದವರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಕೊಚ್ಚಿನ್ ಪುಣೆ ಮಾರ್ಗವಾಗಿ ಗುಜರಾತ್ ಸೇರಿದ್ದ.
 ಸ್ಯಾಂಟ್ರೋ ರವಿ ಕೇಸಿನಲ್ಲಿ ಒಟ್ಟು ನಾಲ್ಕು ಜನರನ್ನು ಬಂಧಿಸಲಾಗಿದೆ.
ಗುಜರಾತಿನಲ್ಲಿ ರವಿ ಮಲಗಲು ನಿತ್ಯ ಸ್ಥಳ ಬದಲಾಯಿಸುತ್ತಿದ್ದರು

Share