ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ “ಸುಶಾಸನ ದಿನ”

216
Share

ಸುಶಾಸನ  ದಿನ….

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ 2014ರಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ದೇಶಾದ್ಯಂತ” ಸುಶಾನ ದಿನವನ್ನಾಗಿ “ಆಚರಿಸಬೇಕೆಂದು  ಡಿಸೆಂಬರ್ 25 ನ್ನು ಘೋಷಣೆ ಮಾಡಿದರು .
ಅಟಲ್ ಬಿಹಾರಿ ವಾಜಪೇಯಿ ರವರು ಡಿಸೆಂಬರ್ 25 1,924ರಂದು ಮಧ್ಯಪ್ರದೇಶ ರಾಜ್ಯದಲ್ಲಿ ಜನಿಸಿದಂತವರು ಈ ದಿನವನ್ನು ಸುಶಾಶನ ದಿನವನ್ನಾಗಿ ವಾಜ್ ಪೇಯ ರವರಿಗೆ ಕೇಂದ್ರ ಸರ್ಕಾರ ಸಮರ್ಪಣೆ ಮಾಡಿದೆ,  ಸುಶಾಸನ ಎಂದರೆ ಉತ್ತಮ ಆಡಳಿತ, ಇಲಾಖೆಗಳಲ್ಲಿ ಸುಧಾರಣೆಗಳನ್ನು ತರುವುದು ಇಂಗ್ಲಿಷ್ನಲ್ಲಿ Good Governance Day  ಎಂದು ಕರೆಯುತ್ತಾರೆ, ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಪ್ರಮುಖ ಮೂರು ಅಂಗಗಳು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸಬೇಕು, ಈ ಸಂದರ್ಭ ಸರ್ಕಾರ ಮತ್ತು ಆಡಳಿತದ ಪಾತ್ರ ಬಹಳ ಮುಖ್ಯವಾದದ್ದು ಯಾವುದೇ ಒಂದು  ಸರ್ಕಾರದ ಗುರಿ ದೇಶದ ಅಭಿವೃದ್ಧಿ ಹಾಗೂ ಜನರ ಜೀವನಮಟ್ಟ ಸುಧಾರಿಸುವುದು, ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ, ಉತ್ತಮ ನೈರ್ಮಲ್ಯ, ಉತ್ತಮ ವಾತಾವರಣ ಹಾಗೂ ಉತ್ತಮ ವ್ಯವಸ್ಥೆಗಳನ್ನು ರೂಪಿಸುವುದು ಹಾಗೆಯೇ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಉತ್ತಮ ಬಾಂಧವ್ಯ ಹೊಂದುವುದು ಇದು ಸಾಧ್ಯವಾಗಬೇಕಾದರೆ ಆಡಳಿತದಲ್ಲಿನ ವ್ಯವಸ್ಥೆ ಮತ್ತು ನೌಕರರು ತಾವು ಮಾಡುವ ಕಾರ್ಯದ ಬಗ್ಗೆ ಶ್ರದ್ಧ, ಭಕ್ತಿ, ಪ್ರೀತಿಯನ್ನು  ಇಟ್ಟು ಕಾರ್ಯ ಮಾಡಿದರೆ  ಸಾಧ್ಯ ,  ದೇಶದ ನಿರ್ವಹಣೆ,  ಅಭಿವೃದ್ಧಿ ಔನ್ನತ್ಯ ಕ್ಕಾಗಿ ಸರ್ಕಾರ ರಚಿಸುವ ಶಾಸನಗಳು, ನೀತಿಗಳು ಮತ್ತು ಅದರ ಅನುಷ್ಠಾನಕ್ಕಾಗಿ ಕೈಗೊಳ್ಳುವ ಕ್ರಮಗಳ ಪ್ರಕ್ರಿಯೆ ಹಾಗೂ ವ್ಯವಸ್ಥೆಗೆ ಆಡಳಿತ ಎಂದು ಕರೆಯುತ್ತೇವೆ

ಯಾವುದೇ ಸರ್ಕಾರ ನೀತಿ ,ನಿಯಮ, ಕಾಯ್ದೆ, ಕಟ್ಟಲೆಗಳು ಹಾಗೂ ಜನರಿಗಾಗಿ ಯೋಜನೆಗಳನ್ನು ಜಾರಿಗೆ ತರಬಹುದು ಆದರೆ ಅವು ದೇಶದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಜವಾಬ್ದಾರಿ ಆಡಳಿತದ ಮೇಲೆ ನಿಂತಿದೆ ಆಡಳಿತಗಾರ ನೈತಿಕತೆಯ ಜವಾಬ್ದಾರಿಯಿಂದ ವರ್ತಿಸಿದರೆ ಈ ಮೇಲಿನದು ನೆರವೇರಲು ಸಾಧ್ಯ, ಒಮ್ಮೆ ಅನೈತಿಕತೆಗೆ ಇಳಿದರೆ ಮೇಲಿನ ಎಲ್ಲವೂ ಮಾಯ ಆಡಳಿತದಲ್ಲಿ ಸಚ್ಚಾರಿತ್ರ್ಯ, ಶುದ್ಧ ಹಸ್ತ, ಕ ಕಾಯಕ ತತ್ವ ಮತ್ತು ನೈತಿಕತೆ ಬಹಳ ಮುಖ್ಯ ಸುಶಾಸನ ನೆರವೇರಬೇಕಾದರೆ ಆಡಳಿತಗಾರನಲ್ಲಿ ಕರ್ತವ್ಯ ,ಸದಾಚಾರ, ಅಹಿಂಸೆ, ಸತ್ಯ, ಸಹಾನುಭೂತಿ ಮತ್ತು ಸಹಿಷ್ಣುತೆ ಬಹಳ ಅವಶ್ಯಕ ನೈತಿಕ ಮೌಲ್ಯಗಳು

ಸಂವಿಧಾನ ನಮಗೆ ಅನೇಕ ರೀತಿಯ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ ಆದರೆ ಅದನ್ನು ಜಾರಿಗೆ ತರುವ ವ್ಯಕ್ತಿ ಸರಿಯಿಲ್ಲದಿದ್ದರೆ ಸಂವಿಧಾನದ ಮೌಲ್ಯವನ್ನು ಹಾಳು ಮಾಡಿದಂತೆ ಹಾಗಾಗಿ” ಡಾ ಬಿ ಆರ್ ಅಂಬೇಡ್ಕರ್ ಹೇಳುವ ಹಾಗೆ ಸಂವಿಧಾನದ ಪ್ರಾಮುಖ್ಯತೆ ಆಡಳಿತಗಾರನ ಕರ್ತವ್ಯ ಮತ್ತು ನಿರ್ವಹಣೆಯ ಮೇಲೆ ನಿಂತಿದೆ” ಎಂದು ಹೇಳುತ್ತಾರೆ   “ನರೇಂದ್ರ ಮೋದಿಜಿ ಅವರು ಹೇಳುವಂತೆ ಸುಶಾಶನ ಸರ್ಕಾರಗಳ ಮತ್ತು ಸಮುದಾಯ ಜವಾಬ್ದಾರಿ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ನಿಂತಿದೆ “ಎಂದಿದ್ದಾರೆ

ಅಟಲ್ ಜಿ ಈ ದೇಶ ಕಂಡ ಅಪ್ರತಿಮ ನಾಯಕ ತಾನು ಏನು ಹೇಳುತ್ತಿದ್ದರು ಹಾಗೆಯೇ ನಡೆದುಕೊಳ್ಳುವಂತಹ ಗುಣವುಳ್ಳ ವ್ಯಕ್ತಿತ್ವ ಬಹುಶಃ ಅವರ ವ್ಯಕ್ತಿತ್ವ ಎಂಥ ವಿರೋಧಿಗಳನ್ನು ಮೃದು ಮಾಡಿಸುವಂತದ್ದು ಹಾಗಾಗಿಯೇ ಅವರನ್ನು” ಅಜಾತಶತ್ರು “ಎಂದು ಕರೆಯುತ್ತಾರೆ ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಜನರಿಗೆ ತಂದ ಅನೇಕ ಯೋಜನೆಗಳು ,ಸುಧಾರಣೆ ನದಿಗಳ ಜೋಡಣೆ ,ಗ್ರಾಮೀಣ ಭಾಗದ ಜನರ ಜೀವನ ಮಟ್ಟ ಸುಧಾರಿಸಲು ಗ್ರಾಮೀಣ ಭಾಗದಲ್ಲಿ ನೈರ್ಮಲೀಕರಣ, ಶಿಕ್ಷಣ, ಆರೋಗ್ಯ ,ಕುಡಿಯುವ ನೀರಿನ ವ್ಯವಸ್ಥೆ ,ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ,ಗ್ರಾಮ ಸಡಕ್ ಯೋಜನೆ ನೀಡಿದ್ದು , ಅಣು ಶಕ್ತಿಯ ಸಶಕ್ತ ರಾಷ್ಟ್ರವನ್ನಾಗಿ ಜಗತ್ತಿಗೆ ಪ್ರೋಖ್ರಾನ್  ಅಣುಬಾಂಬ್ ನ ಪರೀಕ್ಷೆಯ ಮೂಲಕ ತೋರಿಸಿದ್ದು. ವಿದ್ಯುನ್ಮಾನ ಉಪಕರಣ ಉತ್ಪಾದನಾ ಕ್ಷೇತ್ರದಲ್ಲಿ ಕ್ರಾಂತಿಯನ್ನು ಎಬ್ಬಿಸಿದ್ದು, ಮೊಬೈಲ್ ಕ್ರಾಂತಿಯ ಮುಖಾಂತರ ದೇಶದ ಮಾರುಕಟ್ಟೆಯನ್ನು ಸಶಕ್ತಿ ಕರಣ ಮಾಡಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬಾಂಧವ್ಯ ವೃದ್ಧಿಸಿದ್ದು ಈ ಎಲ್ಲಾ ನೀತಿ ನಿರೂಪಣೆಗಳಿಗಾಗಿ ಆಡಳಿತದಲ್ಲಿ ಸುಧಾರಣೆ ತರುವ ಕಾರ್ಯ ಮಾಡಿದ್ದು ಹಾಗೆಯೇ ತನ್ನ ಅಧಿಕಾರಕ್ಕಾಗಿ ಎಂದೂ ಕೂಡ ಆದರ್ಶಗಳನ್ನ ಮರೆಮಾಚದೆ ನೇರವಾಗಿ ಸ್ವೀಕರಿಸಿದ್ದು ಅವರು ಪ್ರಧಾನಿಯಿಂದ ಕೆಳಗೆ ಇಳಿದಂತಹ ಸಂದರ್ಭದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಹೇಳಿದ ಮಾತು “ನಾನು ರಾಷ್ಟ್ರದ ಅಭಿವೃದ್ಧಿಗಾಗಿ ಮತ್ತು ಜನರ ಜೀವನಮಟ್ಟ ಸುಧಾರಿಸಲು ಅನೇಕ ಕಾರ್ಯಗಳನ್ನು ಯೋಜನೆಗಳನ್ನು ಜಾರಿಗೆ ತಂದೇ ಆದರೆ ಅವುಗಳನ್ನು ತಲುಪಿಸುವ ನಿಟ್ಟಿನಲ್ಲಿ ಆಡಳಿತಗಾರರು ಸೋತಿದ್ದಾರೆ” ಎಂಬುದು ಅಕ್ಷರಶಃ ನಿಜ ಹಾಗಾಗಿಯೇ ಇಂತಹ ದೂರದೃಷ್ಟಿತ್ವದ ಚಿಂತಕನ ಜನ್ಮದಿನ ಒಳ್ಳೆಯ ಆಡಳಿತ  ದಿನವನ್ನಾಗಿ ಆಚರಿಸುವ ಮೂಲಕ ದೇಶದ ಎಲ್ಲಾ ಆಡಳಿತಗಾರರು, ಇಲಾಖೆಗಳ ನೌಕರರು ಮತ್ತು ಸಮುದಾಯ ನೈತಿಕತೆ, ಸಚ್ಚಾರಿತ್ರ್ಯದ ಮಾರ್ಗದಲ್ಲಿ ನಡೆಯೋಣ ಜೀವನದುದ್ದಕ್ಕೂ ಅದನ್ನು ಪಾಲಿಸೋಣ ಭ್ರಷ್ಟ ಮುಕ್ತ, ಕಳಂಕ ಮುಕ್ತ ,ಆಲಸ್ಯ ಮುಕ್ತ ,ಸಮಾಜ ನಿರ್ಮಿಸೋಣ ಅಜಾತಶತ್ರುಗೆ ಜನ್ಮದಿನದ ಶುಭಾಶಯಗಳು ಹಾಗೂ ಸುಶಾನ ದಿನದ ಶುಭಾಶಯಗಳು ಜೈ ಭಾರತ…..

ಡಾ.ಕೆ‌. ವಸಂತ ಕುಮಾರ್
ಸಿಂಡಿಕೇಟ್ ಸದಸ್ಯರು ಹಾಗೂ ಜಿಲ್ಲಾ ಸಹ ವಕ್ತಾರರು, ಮೈಸೂರು


Share