ಮೇಲುಕೋಟೆ-ವಿಶ್ವವಿಖ್ಯಾತ ವಜ್ರ ಕಿರೀಟ ಇಂದು ಧಾರಣೆ

92
Share

 

ಮೇಲುಕೋಟೆ-ಮೇಲುಕೋಟೆಯಲ್ಲಿ ಬ್ರಹ್ಮೋತ್ಸವ ಪ್ರಾರಂಭವಾಗಿ ಇಂದು ನಾಲ್ಕನೇ ತಿರುನಾಳ್ ರಾತ್ರಿ. ವಿಶ್ವವಿಖ್ಯಾತ ವಜ್ರ ಕಿರೀಟವನ್ನು ಶ್ರೀದೇವಿ ಭೂದೇವಿ ಸಮೇತ ಶ್ರೀ ಚೆಲುವನಾರಾಯಣ ಸ್ವಾಮಿಗೆ ಧಾರಣೆಯಾಗುವುದು ಇದಾದ ಬಳಿಕ ಪೂಜೆ   ವಿಧಿ ವಿಧಾನ ನಂತರ ದೇವಸ್ಥಾನದ ಸುತ್ತಲೂ ನಾಲ್ಕು ಬೀದಿಗಳಲ್ಲಿ ಉತ್ಸವ ನಡೆದು ಬೆಳಗಿನ ಜಾವದ ಹೊತ್ತಿಗೆ ದೇವಸ್ಥಾನ ಪ್ರವೇಶಿಸುವುದು ನಂತರ ಸ್ವಾಮಿಗೆ ವಜ್ರಕಚಿತ ರಾಜಮುಡಿ ಉತ್ಸವ ನಡೆಯಲಿದೆ ವಿಶೇಷವೆಂದರೆ ಒಂದೇ ರಾತ್ರಿ ಎರಡು ವಜ್ರ ಖಚಿತ ಕಿರೀಟ ತೊಡಿಸುವ ಸಂಪ್ರದಾಯ ಮೇಲುಕೋಟೆಯಲ್ಲಿ ಮಾತ್ರ ಆಚರಣೆಯಲ್ಲಿದೆ ಎಂದು ತಿಳಿಸಲಾಗಿದೆ
ಈ ವೈಭೋಗವನ್ನು ನೋಡಲು . ನಮ್ಮ ರಾಜ್ಯದಿಂದ ಅಲ್ಲದೆ ಹೊರರಾಜ್ಯದಿಂದಲೂ ಲಕ್ಷಾಂತರ ಭಕ್ತರು ಈ  ವೈರಮುಡಿಯಲ್ಲಿ ಭಾಗವಹಿಸಲಿದ್ದಾರೆ
     ಈ ವೈರಮುಡಿ ಹಾಗೂ ರಾಜಮುಡಿ ಕಿರೀಟಗಳು ೩ ಮಂಡ್ಯ ಖಜಾನೆಯಲ್ಲಿ ಇರುವುದರಿಂದ ಬೆಳಗ್ಗೆ ಖಜಾನೆಯಿಂದ ಹೊರಟು ಮೊದಲು ಲಕ್ಷ್ಮಿ ಜನಾರ್ಧನ ದೇವಸ್ಥಾನದಲ್ಲಿ ಈ ಎರಡು ಕಿರೀಟಗಳಿಗೂ ಪ್ರಥಮ ಪೂಜೆ ನಡೆದ ನಂತರ  ದಾರಿ ಯುದ್ಧಕ್ಕೂ ಬರುವ ಕೆಲವು ಗ್ರಾಮಗಳಲ್ಲಿ ಪೂಜೆ ನಡೆಯಲಿದೆ ನಂತರ  ಮೇಲುಕೋಟೆಗೆ ತಲುಪಲಿದೆ

Share