ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗ ಶ್ರೀ ಪಾದ ಶ್ರೀ ವಲ್ಲಭರ ಚರಿತ್ರೆ ಪುಟ – 46

672
Share

ಅಧ್ಯಾಯ – 6

ವಿ.ಸೂ. – ಭಜನೆ ಆಲಿಸಿ, ಚರಿತ್ರೆ ಪಠನೆಮಾಡಿ.

ದಯವಿಟ್ಟು ಗಮನಿಸಿ – 18/9/2020 ರಿಂದ ಆಶ್ವಯುಜ ಅಧಿಕ ಮಾಸ ಆರಂಭವಾಗಿದೆ. ಅಧಿಕ ಮಾಸದಲ್ಲಿ ಮಾಡುವ ಎಲ್ಲಾ ಸತ್ಕಾರ್ಯಗಳಿಗೂ ಅಧಿಕ ಫಲವಿರುತ್ತದೆ. ನಮ್ಮ ವೀಕ್ಷಕ ವಾಚಕರು ಭಜನೆ ಆಲಿಸಿ ಚರಿತ್ರೆ ಪಠಿಸಿ ಅಧಿಕ ನೆಮ್ಮದಿಯನ್ನು ಅಧಿಕ ಜ್ಞಾನಾರ್ಜನೆ ಪಡೆಯಬೇಕೆಂದು ಆಶಿಸುತ್ತೇವೆ.

ಪುಟ – 46

ಶ್ರೀಪಾದ ಶ್ರೀವಲ್ಲಭರ ಆವಿರ್ಭಾವ

ಒಂದು ಮಹಾಲಯ ಅಮಾವಾಸ್ಯೆಯ ದಿನ, ರಾಜಶರ್ಮನು ಪಿತೃಶ್ರಾದ್ಧ ಮಾಡಲು ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದನು. ಅಷ್ಟರಲ್ಲಿ ಮನೆ ಮುಂದೆ ‘ ಭವತಿ ಭಿಕ್ಷಾಂದೇಹಿ ‘ ಎಂದು ಕೇಳಿ ಬಂತು. ಆ ಅವಧೂತನಿಗೆ ಸುಮತಿ ಮಹಾರಾಣಿ ಭಿಕ್ಷೆ ನೀಡಿದಳು. ಏನಾದರೂ ಕೋರಿಕೆಯನ್ನು ಕೋರಿಕೋ ಎಂದು ಹೇಳಿದ ಆ ಅವಧೂತನಿಗೆ ಸುಮತಿಯು, “ ಸ್ವಾಮಿ | ನೀವು ಅವಧೂತರು. ನಿಮ್ಮ ಮಾತುಗಳು ಸಿದ್ದ ಮಾತುಗಳು. ನಡೆದೇ ತೀರುತ್ತದೆ. ಶ್ರೀ ಪಾದ ವಲ್ಲಭರ ಅವತಾರವು ಶೀಘ್ರದಲ್ಲೇ ಈ ಭೂಮಿಯ ಮೇಲೆ ಆಗುವುದೆಂದು ದೊಡ್ಡವರು ಹೇಳುತ್ತಿದ್ದಾರೆ. ದತ್ತ ಪ್ರಭುವು ಈಗ ಯಾವ ರೂಪದಲ್ಲಿ ಸಂಚರಿಸುತ್ತಿದ್ದಾರೆ ? ಈಗ ನೂರು ವರ್ಷಗಳ ಹಿಂದಿನಿಂದ ಈ ಭೂಮಿಯ ಮೇಲೆ ಮತ್ತೆ ಪ್ರಭುವು ಶ್ರೀಪಾದವಲ್ಲಭದ ರೂಪದಲ್ಲಿ ಓಡಾಡುತ್ತಿದ್ದಾನೆ ಎಂದು ಕೇಳಿ ಬರುತ್ತಿದೆ. ನೀವು ನನ್ನನ್ನು ಏನಾದರೂ ಕೇಳಿಕೋ ಎಂದಿರಿ. ಮಂದಿ ನನಗೆ ಶ್ರೀ ಪಾದವಲ್ಲಭದನ್ನು ನೋಡಬೇಕೆಂದು ಅನಿಸುತ್ತದೆ ‘ ಎಂದಳು.
ಅವಧೂತನು ಲೋಕಗಳೆಲ್ಲಾ ಕಂಪಿಸುವಂತ ವಿಕಟಾಟ್ಟ ಹಾರವನ್ನು ಮಾಡಿದನು. ಸುಮತಿ ಮಹಾರಾಣಿಗೆ ಕ್ಷಣದಲ್ಲಿ ಪ್ರಪಂಚವೇ ಅದೃಶ್ಯವಾದಂತೆ ಆಯಿತು. ಎದುರಿಗೆ 16 ವರ್ಷದ ಸುಂದರ ಯತಿಯು ಪ್ರತ್ಯಕ್ಷನಾಗಿದ್ದಾನೆ. ಅವನು , ” ಅಮ್ಮಾ ನಾನೇ ಶ್ರೀಪಾದವಲ್ಲಭನು, ನಾನೇ ದತ್ತನು, ಅವಧೂತರೂಪದಲ್ಲಿದ್ದ ನನ್ನನ್ನು ಶ್ರೀಪಾದವಲ್ಲಭನ ರೂಪವನ್ನು ತೋರಿಸಿರೆಂದು ಕೇಳಿದ. ಆ ಕೋರಿಕೆಯನ್ನು ಪೂರೈಸಲು ನಾನು ನಿನಗೆ ಶ್ರೀಪಾದವಲ್ಲಭನಾಗಿ ದರ್ಶನವನ್ನು ಕೊಟ್ಟಿದ್ದೇನೆ. ಈ ರೂಪದಲ್ಲಿರುವ ನನ್ನನ್ನು ಏನಾದರೂ ಕೇಳಿಕೋ. ನೀನು ನನಗೆ ಅನ್ನವನ್ನು ಕೊಟ್ಟಿದ್ದೀಯ, ಪ್ರತಿಯಾಗಿ ಏನಾದರೂ ಕೊಡಬೇಕೆನ್ನಿಸುತ್ತಿದೆ. ಲೋಕದಲ್ಲಿ ಜನರು ಸಂಕಲ್ಪಿಸಿ ಪಾಪಕರ್ಮಗಳನ್ನು ಮಾಡಿದಾಗ ಪಾಪ ಫಲಗಳನ್ನು ಹೊಂದುವರು. ಸಂಕಲ್ಪಪೂರ್ವಕವಾಗಿ ಪುಣ್ಯಕರ್ಮಗಳನ್ನು ಮಾಡಿ ಪುಣ್ಯ ಫಲವನ್ನು ಹೊಂದುವರು. ಫಲಾಪೇಕ್ಷೆಯಿಲ್ಲದೆ ಪುಣ್ಯಕರ್ಮವನ್ನಾಚರಿಸಿದರೆ ಅದು ಅಕರ್ಮವಾಗುತ್ತದೆ. ಇದು ಸುಕರ್ಮವೂ ಅಲ್ಲ, ದುಷ್ಕರ್ಮವೂ ಅಲ್ಲ. ಅಕರ್ಮವನ್ನು ಮಾಡಿದವನಿಗೆ ಪುಣ್ಯ ಪಾಪಗಳು ಇಲ್ಲದಿರುವುದರಿಂದ ಬೇರೆ ರೀತಿಯ ಫಲವನ್ನು ಕೊಡಬೇಕಾಗುತ್ತದೆ. ಅದು ಭಗವಧದೀನವಾಗುತ್ತದೆ. ಅರ್ಜುನನು ಅಕರ್ಮವನ್ನು ಮಾಡಲೆಂದೇ ಕೃಷ್ಣನು ಅವನಿಗೆ ಕೌರವರನ್ನು ಸಂಹರಿಸಲು ಹೇಳಿದನು. ಅಕರ್ಮದ ಮೂಲಕ ಸಂಹಾರ ಮಾಡಿದರೆ ಮಾತ್ರ ಅವನಿಗೆ ಪಾಪವು ಬರುವುದಿಲ್ಲ. ಕೌರವ ಸಂಹಾರವು ಭಗವೆನ್ನಿರ್ಣಯವು. ನೀವು ದಂಪತಿಗಳು ಬೇಕಾದಷ್ಟು ಅಕರ್ಮಗಳನ್ನು ಮಾಡಿದ್ದೀರಿ. ಆದ್ದರಿಂದ ಲೋಕ ಹಿತಾರ್ಥವಾಗುವ ಯಾವುದೋ ವರವೊಂದು ಕೇಳಿಕೋ. ಸಂಶಯ ಪಡಬೇಡ ತಪ್ಪದೇ ಅನುಗ್ರಹಿಸುತ್ತೇನೆ ” ಎಂದು ಹೇಳಿದನು.

ದತ್ತನ ಶ್ರೀಪಾದ ಶ್ರೀವಲ್ಲಭ ದರ್ಶನಾನಂತರ ಸುಮತಿ ಮಹಾರಾಣಿಗಾದ ಸಂಕಲ್ಪ

ತನ್ನ ಮುಂದೆ ನಿಂತಿರುವ ಆ ದಿವ್ಯ ಮಂಗಳ ರೂಪವನ್ನು ನೋಡಿ ಸುಮತಿಯು ನಮಸ್ಕರಿಸಿದಳು. ಶ್ರೀಪಾದರು ಸುಮತಿಯನ್ನು ಹಿಡಿದೆತ್ತಿ , ‘ ಅಮ್ಮಾ ! ಮಗನಿಗೆ ತಾಯಿ ನಮಸ್ಕಾರ ಮಾಡುವುದು ಸರಿಯಲ್ಲ ಮಗನಿಗೆ ಅದು ಈ ಆಯಾಕ್ಷೀಣವು ಕೂಡ ” ಎಂದನು . ಸುಮತಿಯು , “ ಶ್ರೀವಲ್ಲಭ ಪ್ರಭೋ ! ನೀವು ನನ್ನನ್ನು ಅಮ್ಮಾ ಎಂದು ಕರೆದಿರುವಿರಿ. ನಾನು ತಾಯಿಯೆಂದೂ ನೀವು ನನ್ನ ಮಗನೆಂದೂ ನೀವೇ ಒಪ್ಪಿಕೊಂಡ ಹಾಗಾಯಿತು. ನಿಮ್ಮದು ಸಿದ್ಧ ವಾಕ್ಕು ಆಗಿರುವುದರಿಂದ ಇದನ್ನೇ ನಿಜವನ್ನಾಗಿ ಮಾಡಿರಿ. ನೀವು ನನಗೆ ಮಗನಾಗಿ ಜನಿಸಬೇಕು ” ಎಂದಳು . ಶ್ರೀಪಾದರು , “ ಹಾಗೆಯೇ ಆಗಲಿ, ಈಗ ನೀನು ನೋಡುತ್ತಿರುವ ಈ ರೂಪದಲ್ಲಿಯೇ ನಾನು ನಿನ್ನಲ್ಲಿ ಜನಿಸುವೆನು. ತಾಯಿಯು ಮಗನ ಕಾಲುಗಳ ಮೇಲೆ ಬೀಳುವುದು ಮಗನಿಗೆ ಆಯಕ್ಷೀಣವೆಂದು ನಾನಾಗಲೇ ಹೇಳಿದ್ದೇನೆ. ಆದ್ದರಿಂದ 16 ವರ್ಷಗಳವರೆಗೆ ಮಾತ್ರ ನಾನು ನಿಮಗೆ ಮಗನಾಗಿ ಜೀವಿಸುತ್ತೇನೆ ” ಎಂದರು. ಅದಕ್ಕೆ ಸುಮತಿ , ” ಅಯ್ಯೋ ! ಎಂತಹ ಅನಾಹುತವಾಯಿತು. ಹದಿನಾರು ವರ್ಷಗಳು ಮಾತ್ರ ಆಯುಷ್ಯವೇ ? ” ಎಂದು ಗೋಳಾಡಿದಳು. ಅದಕ್ಕೆ ಶ್ರೀಪಾದರು ಹೀಗೆಂದರು , ” ಅಮ್ಮಾ ! 16 ವರ್ಷಗಳವರೆಗೆ ನೀವು ಹೇಳಿದಂತೆ ನಾನು ಕೇಳುತ್ತೇನೆ . ‘ ವರ್ಷೇ ಶೋಡಶೇ ಪ್ರಾಪ್ತ ಪುತ್ರಂ ಮಿತ್ರವ ದಾಚರೇತ್ ” ಎಂದು ಹೇಳಲ್ಪಟ್ಟಿದೆ. 16 ವಯಸ್ಸಿನ ಮಗನನ್ನು ಮಿತ್ರನಂತೆ ಭಾವಿಸಬೇಕು ಎಂದು ವಿಧಿಸಿದ್ದಾರೆ. ನನ್ನನ್ನು ಮದುವೆ ಮಾಡಿಕೋ ಎಂದು ನೀವು ನಿರ್ಬಂಧಿಸಬಾರದು. ನಾನು ಯತಿಯಾಗಿ ನನ್ನಿಷ್ಟ ಬಂದಂತೆ ಓಡಾಡಿಕೊಂಡಿರಲು ನೀವು ಒಪ್ಪಬೇಕು. ಇದಕ್ಕೆ ನೀವು ಅಡ್ಡಿ ಪಡಿಸಿದರೆ ನಾನು ನಿಮ್ಮ ಮನೆಯಲ್ಲಿ ಇರುವುದಿಲ್ಲ ” ಎಂದು ಹೇಳಿ ಜೋರಾಗಿ ಹೆಜ್ಜೆ ಹಾಕುತ್ತಾ ಹೊರಟು ಹೋದರು.
( ಮುಂದುವರೆಯುವುದು )

ಕೃಪೆ – ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ – 47

ಅರ್ಥವಿಲ್ಲದ ನೋಟ,
ಗೊತ್ತು ಗುರಿಯಿರದೋಟ,
ಉಪ್ಪು ಇಲ್ಲದ ಊಚ,
ಕಲಿಯುಗದ ಮಾಟ

  • ಸಚ್ಚಿದಾನಂದ
  • ಶ್ರೀ ಸ್ವಾಮೀಜಿ.

( ಸಂಗ್ರಹ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.

https://youtu.be/tHRbaNXF00Y

Share