ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ವಾರ ಭವಿಷ್ಯ 22-11-2020 ರಿಂದ 27-11-2020 ರವರೆಗೆ

789
Share

https://www.facebook.com/493761640834587/posts/1576202085923865/?sfnsn=wiwspmo

—ವಾರಭವಿಷ್ಯ— 22-11-2020 ರಿಂದ 27-11-2020 ರವರೆಗೆ

ಮೇಷ ರಾಶಿ

ಯೋಗ ಬಲವು ಇದ್ದು ಅಭಿವೃದ್ಧಿ ಪಥದಲ್ಲಿ ಸಾಗುತ್ತೀರಿ. ಭಾವನೆ, ವಿವೇಚನೆಯಿಂದ ಯಶಸ್ಸು ಕಾಣಲಿದ್ದೀರಿ.

ವೃಷಭ ರಾಶಿ

ದೈವಬಲ ಪ್ರಾಪ್ತಿಯಾಗಿದೆ .
ದೀನ ದುರ್ಬಲರಿಗೆ ಅಂದರಿಗೆ ಸಹಾಯಹಸ್ತ ನೀಡುತ್ತೀರಿ, ಸತ್ಯಪಥದಲ್ಲಿ ನಡೆ, ಕೌಟುಂಭಿಕ ಅಭಿವೃದ್ಧಿ ಕಡೆಗೆ ಗಮನ.

ಮಿಥುನ ರಾಶಿ

ಅಪರಿಮಿತ ಜವಾಬ್ದಾರಿ ತನದಿಂದ ನಿಮ್ಮ ಕಾರ್ಯಗಳಲ್ಲಿ ಯಶಸ್ಸು ,ಆಂತರಿಕ ಬಯಕೆಗಳು ಜನವರಿ 21ರಿಂದ ಈಡೇರುತ್ತದೆ. ತೊಂದರೆಯಲ್ಲಿ ಇದ್ದವರ ನೆರವಿಗೆ ಧಾವಿಸುವಿರಿ.

ಕಟಕ ರಾಶಿ

ಕವನ ರಚನೆ ಆಧ್ಯಾತ್ಮಿಕ ಜ್ಯೋತಿಷ್ಯದಲ್ಲಿ ನಿರತರಾಗಿರುವಿರಿ ಮಾರ್ಚಿ- ಏಪ್ರಿಲ್ ನಂತರ ಪ್ರಪಂಚ ಪರ್ಯಾಟನೆ. ಉದ್ಯೋಗದಲ್ಲಿ ಯಶಸ್ಸು.

ಸಿಂಹರಾಶಿ

ಮನೆ ಕಟ್ಟುವ ಚಿಂತನೆ. ಮಗನಿಗೆ ವಿವಾಹ ಉದ್ಯೋಗದ ಚಿಂತೆ. ಸಭ್ಯರಲ್ಲದ ಜನರ ಸಹವಾಸದಿಂದ ಮಿಥ್ಯಾರೋಪಕ್ಕೆ ಗುರಿ.

ಕನ್ಯಾ ರಾಶಿ

ಮಕ್ಕಳ ಏಳಿಗೆ, ವಿದ್ಯಾಭ್ಯಾಸ, ಹಣಕಾಸಿನ ಅಭಿವೃದ್ಧಿ. ಉದ್ಯೋಗದಲ್ಲಿ ಬಡ್ತಿ ಗೃಹ ವಾಹನ ಲಾಭ.

ತುಲಾ ರಾಶಿ

ಆರ್ಥಿಕತೆ ಬಲಗೊಳ್ಳುವ ರಾಜಯೋಗ .ಕೆತ್ತನೆ ತಂತ್ರಜ್ಞಾನ ಎಲೆಕ್ಟ್ರಿಕಲ್ಸ್ ,ಭೂಮಿ ವಾಹನ ತಯಾರಿಕಾ ಘಟಕದಲ್ಲಿ ಕೆಲಸ ಮಾಡುವವರಿಗೆ ಅನುಕೂಲ.

ವೃಶ್ಚಿಕ ರಾಶಿ

ಮಿತ್ರರಿಂದ ಸಹಕಾರ ದೊರೆಯುತ್ತದೆ. ಉಪದ್ರವಗಳಿಂದ ಅನೇಕ ವಿಧವಾದ ಸಮಸ್ಯೆಗಳಲ್ಲಿ ಸಿಲುಕಿ ಬೇಸರ ಕಂಡುಬರುತ್ತದೆ.

ಧನಸ್ಸು ರಾಶಿ

ಆಕಸ್ಮಿಕವಾದ ಧನ ಸಂಪಾದನೆ. ಅಪರೂಪದ ವಸ್ತು ಪ್ರಾಪ್ತಿ .ವಿದೇಶ ಪ್ರಯಾಣಕ್ಕೆ ತಯಾರಿ.

ಮಕರ ರಾಶಿ

ಪ್ರತಿಭೆಯಿಂದ ಎದುರಾಳಿಯನ್ನು ಬಗ್ಗುಬಡಿಯುವ ಮನೋಧರ್ಮ ಪರಿ ಶುದ್ಧವಾಗಿರುತ್ತದೆ. ದೈವ ನಂಬಿಕೆಯಿಂದ ಹಸ್ತ ಸಿದ್ದಿ

ಕುಂಭ ರಾಶಿ

ಅನ್ಯರ ಮನಸ್ಸು ನೋಯಿಸದೆ ಅವರ ಕಷ್ಟ ಸುಖಗಳಿಗೆ ಸ್ಪಂದನೆ .ಬಹಳ ಎಚ್ಚರಿಕೆ ಇರಬೇಕಾದ್ದು ಅವಶ್ಯಕ ,ಮೋಸ ಹೋಗುವ ಸಾಧ್ಯತೆ ಇದೆ.

ಮೀನಾ ರಾಶಿ

ಯಾವುದಕ್ಕೂ ಹೆದರುವ ಅಗತ್ಯವಿಲ್ಲ ,ಗೌರವದಿಂದ ಕಾರ್ಯಗಳಲ್ಲಿ ಯಶಸ್ಸು.
ಅವಿವಾಹಿತರು ಮದುವೆಯಾಗುವ, ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ, ವಿದೇಶಕ್ಕೆ ತೆರಳುವ ವವರಿಗೆ ಶುಭ ಸುದ್ದಿ
….


Share