ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 43

1137
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 43
ನಿನ್ನೆಯ ದಿನ ವೆಂಕಟೇಶ್ವರ ತೋಂಡಮಾನನಿಗೆ ಮುಕ್ತಿ ಕಲ್ಪಿಸಿದ್ದನ್ನು ನೋಡಿದೆವು.
ಶ್ರೀನಿವಾಸ ಕಲ್ಯಾಣ ದಲ್ಲಿ ಕೆಲೆವೆಡೆ ತತ್ವ, ಕೆಲವೆಡೆ ಭಕ್ತಿ ಪ್ರಧಾನವಿದೆ. ಕೆಲವು ಭಕ್ತರ ಕಥೆಯನ್ನು ತಿಳಿದುಕೊಳ್ಳೋಣ.
ಸ್ವಾಮಿಯು ಭಕ್ತಿಗೆ ಒಲಿಯುವನು. ಸ್ವಾಮಿಯು 8 ಕಡೆ ಸ್ವಯಂ ವ್ಯಕ್ತವಾಗಿ ನೆಲೆಸಿರುವನು. ಮೂಲ ಸ್ವರೂಪ, ಪರ ಸ್ವರೂಪ, ವ್ಯೂಹ ಸ್ವರೂಪ, ವಿಭವ ಸ್ವರೂಪ, ಅಂತರ್ಯಾಮಿ ಸ್ವರೂಪ ಎಂಬ ಪಂಚಾವತಾರಗಳಲ್ಲಿ ಭಕ್ತರನ್ನು ಉದ್ದರಿಸುತ್ತಿದ್ದಾನೆ.
ಕೃತ ಸುಗದಲ್ಲಿ ವೃಷಾದ್ರಿ ಎಂದು, ತ್ರೇತಾಯುಗ ದಲ್ಲಿ ಅಂಜನಾದ್ರಿ ಎಂದು, ದ್ವಾಪರದಲ್ಲಿ ಶೇಷಾದ್ರಿ ಎಂದು, ಕಲಿಯುಗದಲ್ಲಿ ವೆಂಕಟಾದ್ರಿ ಎಂದು ಕರೆಯಲ್ಪಟ್ಟಿದೆ. ಅದಲ್ಲದೆ ತೀರ್ಥಾದ್ರಿ, ಜ್ಞಾನಾದ್ರಿ, ವೈಕುಂಠಾದ್ರಿ ಹೀಗೆ ಹಲವಾರು ಹೆಸರುಗಳಿಂದ ಏಕೆ ಕರೆಯುತ್ತಾರೆ ಎಂಬುದನ್ನು ಶ್ರೀ ಸ್ವಾಮೀಜಿ ಯವರು ಮನೋಜ್ಞವಾಗಿ ತಿಳಿಸಿದ್ದಾರೆ.
ಇನ್ನು ರೋಗಿಷ್ಟನಾದವನು ಭಕ್ತಿಯಿಂದ ಬೆಟ್ಟ ಹತ್ತಲು ಆರಂಭಿಸಿದವನಿಗೆ ಹೇಗೆ ರೋಗ ಮುಕ್ತನಾದ ಎಂಬ ಕಥೆಯನ್ನು ತಿಳಿದುಕೊಳ್ಳಬಹುದು ಇಂದಿನ ಸಂಚಿಕೆಯಲ್ಲಿ. ಎಲ್ಲರೂ ತಪ್ಪದೆ ನೋಡಿ ಶೇರ್ ಮಾಡಿ ನಿಮ್ಮ ಆತ್ಮೀಯರೊಡನೆ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share