ಮೈಸೂರು ಪತ್ರಿಕೆ ಆಧ್ಯಾತ್ಮಿಕ ಅಂಗಳ ಶ್ರೀ ವೆಂಕಟೇಶ್ವರ ಕಲ್ಯಾಣ ಭಾಗ 46

1043
Share

ಶ್ರೀ ವೆಂಕಟೇಶ್ವರ ಕಲ್ಯಾಣ – ಭಾಗ 46
ನಿನ್ನೆಯ ಸಂಚಿಕೆಯಲ್ಲಿ ಸ್ವಾಮಿ ಪುಷ್ಕರಿಣಿ ಬಗ್ಗೆ ತಿಳಿದುಕೊಂಡೆವು.
ಇಂದಿನ ಸಂಚಿಕೆಯಲ್ಲಿ ಶ್ರೀ ಸ್ವಾಮೀಜಿ ಯವರು ಕುಮಾರ ತೀರ್ಥ, ತುಂಬುರು ತೀರ್ಥದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಬನ್ನಿ ನೋಡೋಣ ಅದರ ಕಥೆಯನ್ನು.

  1. ಕುಮಾರ ತೀರ್ಥ – ಇದರ ಬಗ್ಗೆ ಎಷ್ಟು ಹೇಳಿದರು ಕಡಿಮೆಯೆ. ಇಲ್ಲಿ ಸ್ನಾನ ಮಾಡಿದರೆ ಮಾನಸಿಕ ಹಾಗೂ ಶಾರೀರಿಕ ವೃದ್ಧಾಪ್ಯ ಹೋಗುತ್ತದೆ ಎಂಬ ಪ್ರತೀತಿ ಇದೆ. ಕೌಂಡಿನ್ಯ ನೆಂಬುವನು ಏಕೆ ಮತ್ತು ಹೇಗೆ ವೃದ್ಧಾಪ್ಯ ದಿಂದ ಯುವಕನಾದ? ಶ್ರೀನಿವಾಸ ಹೇಗೆ ಸಹಾಯ ಮಾಡಿದ? ಕುಮಾರ ತೀರ್ಥ ಎಂಬ ಹೆಸರು ಏಕೆ ಬಂತು ಎಂಬುದನ್ನು ಶ್ರೀ ಸ್ವಾಮೀಜಿ ಯವರು ವಿವರಿಸಿದ್ದಾರೆ.
  2. ತುಂಬುರು ತೀರ್ಥ – ಒಮ್ಮೆ ತುಂಬುರನು ವೀಣೆ ಹಿಡಿದುಕೊಂಡು ಬರುತ್ತಿದ್ದಾಗ ನಾರದರು ಎದುರಾಗುತ್ತಾರೆ. ಆಗ ತುಂಬುರರು ಗೋವಿಂದ ನನ್ನು ಬಿಟ್ಟು ವೀಣೆ ಯನ್ನು ಹೊಗಳಿದಾಗ ನಾರದರು ತುಂಬುರುವಿಗೆ ದೈವತ್ವ ಕಳೆದುಕೊಂಡು ಮೂಕನಾಗು ಎಂದು ಶಪಿಸುತ್ತಾನೆ. ತುಂಬುರನು ಅಲ್ಲೇ ವೆಂಕಟಾದ್ರಿಯಲ್ಲಿದ್ದ ಪುಷ್ಕರಿಣಿಯಲ್ಲಿ ಮಿಂದು ದಿನವು ಶ್ರೀನಿವಾಸ ನನ್ನು ಧ್ಯಾನಿಸುತ್ತಿದ್ದ. ಇದರಿಂದ ಅವನ ಪಾಪ ವಿಮೋಚನೆಯಾಗಿ ದೈವತ್ವ ಮತ್ತೆ ಬಂದಿತು. ಸಂತೋಷದಿಂದ ಸ್ವಾಮಿಯನ್ನು ಸ್ತುತಿಸಿದ. ಸ್ವಾಮಿಯು ಅಂದಿನಿಂದ ಅದನ್ನು ತುಂಬುರು ತೀರ್ಥ ಎಂದು ಕರೆಯಲ್ಪಡುವುದು ಎಂದು ಘೋಷಿಸಿದ.
    ತಪ್ಪದೇ ನೋಡಿ, ಶೇರ್ ಮಾಡಿ.

( ಸಶೇಷ )

  • ಭಾಲರಾ
    ಬೆಂಗಳೂರು

ಜೈಗುರುದತ್ತ.


Share